ಬೆಂಗಳೂರು: ತನ್ನ ಸುಖಕ್ಕಾಗಿ ತಾಯಿಯನ್ನ ಕೊಂದು ಪ್ರಿಯತಮನ ಜೊತೆ ಜಾಲಿ ಮೂಡ್ನಲ್ಲಿದ್ದ ಕೊಲೆಗಾರ್ತಿ ಮತ್ತು ಪ್ರಿಯತಮ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಂಡಮಾನ್ನಲ್ಲಿ ಸುತ್ತಾಡ್ತಿದ್ದ ಈ ಹಂತಕ ಜೋಡಿ ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ ಕಹಾನಿ.
ಅಂಡಮಾನ್ ಮತ್ತು ನಿಕೊಬಾರ್ ದ್ವೀಪದ ಪ್ರಖ್ಯಾತ ಕಾಲಾಪಾನಿ ಜೈಲ್ ಬಳಿ ಎಂಜಾಯ್ ಮಾಡ್ತಿದ್ದ ಹಂತಕರು ಸದ್ಯ ಅಂದರ್ ಆಗಿದ್ದಾರೆ. ಆದರೆ ಹತ್ತೆ ತಾಯಿಯನ್ನ ಕೊಂದು ಸ್ವಲ್ಪವೂ ಪಶ್ಚಾತ್ತಾಪವಿಲ್ಲದೆ, ನೋವಿಲ್ಲದೆ ಅಮೃತಾ ಪ್ರಿಯಕರನ ಜೊತೆ ಸುತ್ತಾಡ್ತಿದ್ದಾಳೆ. ಫೆಬ್ರವರಿ 2 ರಂದು ತಾಯಿಯ ಕೊಲೆ ಮಾಡಿದ್ದ ಅಮೃತಾ ಈ ಹಿಂದೆಯೇ ಪಕ್ಕಾ ಪ್ರೀಪ್ಲಾನ್ ಮಾಡಿದ್ದು, ಹತ್ಯೆ ಮಾಡಲು ಬ್ಲೂಪ್ರಿಂಟ್ ಹಾಕಿಕೊಂಡಿರುವ ಸುಳಿವು ಸಿಕ್ಕಿದೆ.
ತನಿಖೆ ವೇಳೆ ಜನವರಿ 15ರಂದೇ ಫ್ಲೈಟ್ ಟಿಕೆಟ್ ಬುಕ್ ಆಗಿರುವುದು ಕನ್ಫರ್ಮ್ ಆಗಿದೆ. ಅಷ್ಟೇ ಅಲ್ಲ ಕೊಲೆಯಾಗಿದ್ದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ. ಫ್ಲೈಟ್ ಹತ್ತಿದ್ದು ಬೆಳಿಗ್ಗೆ 6ಕ್ಕೆ. ಅಂದ್ರೆ 15 ದಿನಗಳ ಹಿಂದೆಯೇ ಈ ಕಿರಾತಕಿ ಮಗಳು ಸ್ಕೆಚ್ ಹಾಕಿದ್ದು, ಇದು ಪ್ರಿಪ್ಲಾನ್ಡ್ ಮರ್ಡರ್ ಅನ್ನೋದು ಪಕ್ಕಾ ಆಗಿತ್ತು.
ದಾರಿ ತಪ್ಪಿಸ್ತಾ ಆ ಒಂದು ಸುಳಿವು:
ಅಮೃತಾ ತನ್ನ ಮೊಬೈಲ್ ಫೋನ್ನಲ್ಲಿ ಆಪ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಮಾಹಿತಿಯ ಬೆನ್ನುಹತ್ತಿದ ಪೊಲೀಸರು ಜೆಸ್ಟ್ ಮಿಸ್ಆಗಿ ಆರೋಪಿಯನ್ನ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಘಟನೆ ದಿನವೇ ಸಿಕ್ಕಿಬೀಳಬೇಕಿದ್ದ ಹಂತಕರನ್ನು ಅಚಾನಕ್ಕಾಗಿ ಮತ್ತೊಂದು ಸುಳಿವು ದಾರಿತಪ್ಪಿಸಿದೆ.
ಆ ದಿನ ಅಮೃತಾ ಮತ್ತು ಶ್ರೀಧರ್ ಫ್ಲೈಟ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ಆ ಬೆನ್ನಲ್ಲೇ ಬೆಂಗಳೂರಿನಿಂದ ಫ್ಲೈಟ್ಗಳ ಮೂಲಕ ಬೇರೆ ಕಡೆ ಹೋಗಿದ್ದ ಪ್ರಯಾಣಿಕರ ಮಾಹಿತಿಯನ್ನ ಸಂಗ್ರಹ ಮಾಡಲಾಗಿದೆ.
ಆಗ ಅದೇ ದಿನ ಅಮೃತಾ ಚಂದ್ರಶೇಖರ್ ಹಾಗೂ ಶ್ರೀಧರ್ ಅನ್ನೋ ಮತ್ತೊಂದು ಜೋಡಿ ಮುಂಬೈಗೆ ಹೋಗಿತ್ತು. ಆಗ ಪೊಲೀಸರು ಅವರೇ ಪ್ರಕರಣದ ಹಂತಕರು ಎಂದು ಭಾವಿಸಿ ಮುಂಬೈ ಮೇಲೆ ಕಣ್ಣಿಟ್ಟ ಕಾರಣ ಆರೋಪಿಗಳು ಜಸ್ಟ್ ಮಿಸ್ ಆಗಿದ್ದರು. ಆ ಗ್ಯಾಪ್ನಲ್ಲಿ ಆರೋಪಿ ಅಮೃತಾ ಮತ್ತು ಶ್ರೀಧರ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಕ್ಕೆ ಎಂಟ್ರಿ ಕೊಟ್ಟು ಜಾಲಿಯಾಗಿ ಎಂಜಾಯ್ ಮಾಡಿದ್ದಾರೆ.
ಕೊನೆಗೆ ಮುಂಬೈನಲ್ಲಿರುವ ಜೋಡಿ ಆರೋಪಿಗಳಲ್ಲ ಅನ್ನೊದು ಖಚಿತವಾಗ್ತಿದ್ದಂತೆ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಫೋನ್ ನಂಬರ್ ಸೇರಿ ಇತರೇ ಟೆಕ್ನಿಕಲ್ ಡಿಟೇಲ್ಸ್ ಸುಳಿವಿನ ಮೆರೆಗೆ ಅಂಡಮಾನ್ ಮತ್ತು ನಿಕೋಬಾರ್ ಗೆ ಹೋಗಿದ್ದ ಕೆ.ಆರ್.ಪುರಂ ಪೊಲೀಸರು, ಅಲ್ಲಿನ ಪ್ರಖ್ಯಾತ ಕಾಲಾಪಾನಿ ಜೈಲು ಬಳಿ ಜಾಲಿ ಮೂಡ್ ನಲ್ಲಿ ಬೈಕ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಅಮೃತಾ ಮತ್ತು ಶ್ರೀಧರ್ನನ್ನ ಬಂಧಿಸಿದ್ದಾರೆ.