ರಾಯಚೂರು, ಫೆ.15: ಜಿಲ್ಲೆಯಲ್ಲಿ (Raichur) 200ಕ್ಕೂ ಹೆಚ್ಚು ರೈತರಿಗೆ ಪಾವತಿಸಬೇಕಿದ್ದ ಎರಡು ಕೋಟಿಗೂ ಅಧಿಕ ಬೆಳೆ ವಿಮೆ (Crop Insurance) ಹಣದಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ತಾವೇ ರೈತರಿಂದು ತೋರಿಸಲು ರೈತರ ಒಂದು ತಿಂಗಳ ಕಂತು ಕಟ್ಟಿ ಮಾನ್ವಿ ತಾಲೂಕಿನ ಬೋಗಾವತಿ ಹಾಗೂ ಸುತ್ತಲಿನ ರೈತರಿಗೆ ವಂಚನೆ ಎಸಗಲಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ತಾವೇ ರೈತರ ಒಂದು ತಿಂಗಳ ಕಂತು ಕಟ್ಟಿ ಮಾನ್ವಿ ತಾಲೂಕಿನ ಬೋಗಾವತಿ ಹಾಗೂ ಸುತ್ತಲಿನ 226 ಜನ ರೈತರ ಸುಮಾರು 2 ಕೋಟಿ ರೂಪಾಯಿಯಷ್ಟು ಬೆಳೆ ವಿಮೆ ಹಣವನ್ನು ವಂಚಿಸಿ ರೈತರಿಗೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಪ್ರಕರಣ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೊಡ್ಡಬಸಪ್ಪ, ಅನ್ನಪೂರ್ಣ, ದೀಪಾ ಸೇರಿದಂತೆ ಒಟ್ಟು 22 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಯಾದಗಿರಿ: ರೈತರ ಬೆಳೆ ರಕ್ಷಣೆಗೆ ಸಾಥ್ ನೀಡಿವೆ ಬಿಯರ್ ಬಾಟಲ್ಗಳು! ಹೇಗೆಂಬುದು ಇಲ್ಲಿದೆ ನೋಡಿ
ರೈತರ ಬೆಳೆನಷ್ಠ ಪರಿಹಾರದ ಫಸಲ್ ಭೀಮಾ ವಿಮೆ ಹಣದಲ್ಲಿ ನಡೆದ ಈ ಗೋಲ್ಮಾಲ್ ಕೃತ್ಯದಲ್ಲಿ ಪ್ರಭಾವಿಗಳು, ಕೆಲ ಕೃಷಿ ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದೇ ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ/
2022ರ ಜುಲೈ-ಆಗಸ್ಟ್ ತಿಂಗಳ ರೈತರ ಕಂತನ್ನ ಆರೋಪಿಗಳೇ ಕಟ್ಟಿಕಟ್ಟಿದ್ದರು. ಆ ಮೂಲಕ ರೈತರಿಗೆ ತಿಳಿಯದೇ ಎರಡು ಕೋಟಿಯಷ್ಟು ಬೆಳೆ ವೀಮೆ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ