AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ರೈತರ ಬೆಳೆ ರಕ್ಷಣೆಗೆ ಸಾಥ್ ನೀಡಿವೆ ಬಿಯರ್ ಬಾಟಲ್​​ಗಳು! ಹೇಗೆಂಬುದು ಇಲ್ಲಿದೆ ನೋಡಿ

Yadgir Farmers New Idea to Protect Crop: ಕಾಡು ಪ್ರಾಣಿಗಳ, ಪಕ್ಷಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಯಾದಗಿರಿ ಜಿಲ್ಲೆಯ ರೈತರು ಕೆಲವು ಹೊಸ ಐಡಿಯಾಗಳನ್ನು ಕಂಡುಕೊಂಡಿದ್ದಾರೆ. ಬಿಯರ್​ ಬಾಟಲ್​ಗಳು, ಬಳಸಿ ಬಿಸಾಡುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​ಗಳ ಮೂಲಕ ರೈತರು ಬೆಳೆ ರಕ್ಷಣೆ ಮಾಡುವುದು ಹೇಗೆಂಬ ವಿವರ ಇಲ್ಲಿದೆ ನೋಡಿ.

ಯಾದಗಿರಿ: ರೈತರ ಬೆಳೆ ರಕ್ಷಣೆಗೆ ಸಾಥ್ ನೀಡಿವೆ ಬಿಯರ್ ಬಾಟಲ್​​ಗಳು! ಹೇಗೆಂಬುದು ಇಲ್ಲಿದೆ ನೋಡಿ
ರೈತರ ಬೆಳೆ ರಕ್ಷಣೆಗೆ ಸಾಥ್ ನೀಡಿವೆ ಬಿಯರ್ ಬಾಟಲ್​​ಗಳು
ಅಮೀನ್​ ಸಾಬ್​
| Updated By: Ganapathi Sharma|

Updated on:Feb 12, 2024 | 12:24 PM

Share

ಯಾದಗಿರಿ, ಫೆಬ್ರವರಿ 11: ಕಾಡು ಪ್ರಾಣಿಗಳ (Wild Animals) ಹಾವಳಿಯಿಂದ ಬೆಳೆ ರಕ್ಷಣೆ ಮಾಡಲು ಯಾದಗಿರಿ ಜಿಲ್ಲೆಯ ರೈತರು (Yadgir Farmers) ಬಿಯರ್ ಬಾಟಲ್​ಗಳು ಮತ್ತು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​​ಗಳ ಮೊರೆ ಹೋಗಿದ್ದಾರೆ! ಕಾಡು ಹಂದಿ ಹಾಗೂ ಹಕ್ಕಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಖಾಲಿ ಬಿಯರ್ ಬಾಟಲ್​ಗಳ ಮೊರೆ ಹೋಗಿದ್ದಾರೆ. ಅಷ್ಟೇ ಯಾಕೆ ಬಿಸಾಡುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​ಗಳನ್ನೂ ಬಳಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಯ ರೈತರು ಕೂಡ ಹೆಚ್ಚಾಗಿ ಬಿಳಿ ಜೋಳವನ್ನ ಬೆಳೆಯುತ್ತಾರೆ. ವಿಶೇಷ ಅಂದ್ರೆ ಜೋಳದ ಬೆಳೆ ಇಬ್ಬರ ಹೊಟ್ಟೆ ತುಂಬುತ್ತೆ. ಜೋಳ ರೈತರ ಹೊಟ್ಟೆ ತುಂಬಿದ್ರೆ ಜೋಳದ ಸೊಪ್ಪೆ ಜಾನುವಾರುಗಳ ಹೊಟ್ಟೆ ತುಂಬುತ್ತೆ. ಇದೆ ಕಾರಣದಿಂದ ಯಾದಗಿರಿ ಜಿಲ್ಲೆಯ ರೈತರು ಹಿಂಗಾರು ಬೆಳೆಯಾಗಿ ಅತೀ ಹೆಚ್ಚು ಜೋಳವನ್ನ ಬೆಳೆಯುತ್ತಾರೆ. ಆದ್ರೆ ಇದೆ ಜೋಳಕ್ಕೆ ಕಾಡಂದಿ ಹಾಗೂ ಹಕ್ಕಿಗಳ ಕಾಟ ಹೆಚ್ಚಾಗಿದೆ. ಸದ್ಯ ಜಮೀನುಗಳಲ್ಲಿ ಜೋಳ ಹೊರತು ಪಡಿಸಿದರೆ ಬೇರೆ ಯಾವ ಬೆಳೆ ಕೂಡ ಇಲ್ಲ. ಇದೇ ಕಾರಣಕ್ಕೆ ಕಾಡು ಹಂದಿಗಳು ರಾತ್ರಿ ವೇಳೆ ಜೋಳದ ಜಮೀನಿಗೆ ಬಂದು ಬೆಳೆ ಹಾಳು ಮಾಡುತ್ತಿವೆ.

ಒಂದು ಬಾರಿ ಏನಾದರೂ ಕಾಡು ಹಂದಿಗಳ ಹಿಂಡು ಜಮೀನಿಗೆ ಬಂತೆಂದರೆ ಸುಮಾರು 1 ರಿಂದ 2 ಎ ಕರೆ ಜೋಳದ ಬೆಳೆ ಹಾಗೆಯೇ ನೆಲ್ಕುರುಳಿಬಿಡುತ್ತವೆ. ಕಾಡು ಹಂದಿಗಳ ದಾಳಿ ವೇಳೆ ಯಾರಾದರೂ ಎದುರು ಬಂದ್ರೆ ಅವರಿಗೆ ಗುದ್ದಿ ಬಿಡುತ್ತವೆ. ಹೀಗಾಗಿ ಕಾಡು ಹಂದಿಗಳ ಕಾಟದಿಂದ ಹೇಗಾದರೂ ಮಾಡಿ ಜೋಳವನ್ನು ರಕ್ಷಣೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುವ ಅನ್ನದಾತರು ಖಾಲಿ ಬಿಯರ್ ಬಾಟಲ್​ಗಳ ನೆರವು ಪಡೆದುಕೊಂಡಿದ್ದಾರೆ.

ಇನ್ನೊಂದು ಕಡೆ ಹಗಲು ಹೊತ್ತಿನಲ್ಲಿ ಹಕ್ಕಿಗಳ ಹಿಂಡು ಜೋಳದ ತೆನೆ ತಿಂದು ಹಾರಿ ಹೋಗುತ್ತಿವೆ. ಇದೇ ಕಾರಣಕ್ಕೆ ಬಿಯರ್ ಬಾಟಲ್ ಹಾಗೂ ವೆಸ್ಟ್ ಆಗಿರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​ಗಳನ್ನ ಜಮೀನಿನಲ್ಲಿ ಅಳವಡಿಸಿದ್ದಾರೆ. ಇದರ ಶಬ್ದಕ್ಕೆ ಹಕ್ಕಿಗಳು ಹಾಗೂ ವನ್ಯ ಜೀವಿಗಳು ಜಮೀನಿಗೆ ಬರೋದಿಲ್ಲ ಎನ್ನೋದು ರೈತರ ನಂಬಿಕೆಯಾಗಿದೆ.

ಬಿಯರ್ ಬಾಟಲ್​ಗಳಿಂದ ರೈತರಿಗೆ ಪ್ರಯೋಜನ ಹೇಗೆ?

ಮದ್ಯ ಪ್ರಿಯರು ಕುಡಿದು ಬಿಸಾಡಿರುವ ಖಾಲಿ ಬಿಯರ್ ಬಾಟಲ್​ಗಳನ್ನ ತೆಗೆದುಕೊಂಡು ಬಂದು ಜಿಲ್ಲೆಯ ಬಹುತೇಕ ರೈತರು ಜಮೀನಿನ ನಾಲ್ಕೈದು ಕಡೆ ಕಟ್ಟಿದ್ದಾರೆ. ಹಗ್ಗದಿಂದ ಬಿಯರ್ ಬಾಟಲ್ ಗಿಡಕ್ಕೆ ಕಟ್ಟಿ ಇದರ ಪಕ್ಕದಲ್ಲೇ ದಾರಕ್ಕೆ ಸಣ್ಣ ಕಲ್ಲನ್ನು ಕಟ್ಟಿದ್ದಾರೆ. ಗಾಳಿ ಬಂದಾಗ ಕಲ್ಲು ಬಿಯರ್ ಬಾಟಲ್​ಗೆ ತಾಗಿ ಸೌಂಡ್ ಮಾಡುತ್ತದೆ. ರಾತ್ರಿ ಹೊತ್ತಲ್ಲಂತೂ ಹೆಚ್ಚು ಗಾಳಿ ಬೀಸುವ ಕಾರಣ ಬಾಟಲ್ ಹೆಚ್ಚು ಸೌಂಡ್ ಮಾಡುತ್ತದೆ. ಇದರಿಂದಾಗಿ ಹಂದಿಗಳು ಜೋಳದ ಜಮೀನನುಗಳಿಗೆ ಎಂಟ್ರಿ ಕೊಡೋದು ತೀರಾ ಕಡಿಮೆಯಾಗುತ್ತಿದೆ. ಇದು ಜಿಲ್ಲೆಯ ಬಹುತೇಕ ರೈತರು ಉಪಯೋಗಿಸುತ್ತಿರುವ ಪ್ಲಾನ್ ಆಗಿದೆ.

ಇದನ್ನೂ ಓದಿ: ಯಾದಗಿರಿ: ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್​ ಮಾರಾಟ ಪ್ರಕರಣ; ಶಾಲಾ ಶಿಕ್ಷಕ ಅಮಾನತು

ಇನ್ನೊಂದು ಕಡೆ, ಕೆಲ ರೈತರು ಬಿಸಾಡುವ ಆಗಿರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನ ಜಮೀನಿನಲ್ಲಿ ಜೋಳದ ಗಿಡಗಳಿಗೆ ಕಟ್ಟುತ್ತಾರೆ. ಇದರಿಂದ ಗಾಳಿ ಬೀಸಿದ ಕೂಡಲೇ ಕ್ಯಾರಿ ಬ್ಯಾಗ್ ಗಳು ಅಳುಗಾಡಿ ಶಬ್ದ ಬರೋದರಿಂದ ಯಾರೋ ಜಮೀನಿನಲ್ಲಿ ಇದ್ದಾರೆ ಎಂದು ಭಾವಿಸಿ ಹಕ್ಕಿಗಳು ಜಮೀನಿನ ಕಡೆ ಸುಳಿಯೋದಿಲ್ಲವಂತೆ.

ಕೆಲವೆಡೆ ರೈತರು ಹಳೆಯ ಕಾಲದ ಕ್ಯಾಸೇಟ್​​ಗಳ ರೀಲ್​ಗಳನ್ನೂ ಸಹ ಬಳಕೆ ಮಾಡಿ ತಮ್ಮ ಬೆಳೆಯನ್ನ ಹಕ್ಕಿಗಳಿಂದ ಉಳಿಸಿಕೊಳ್ಳುತ್ತಾರೆ. ಸದ್ಯ ರೈತರ ಜೋಳದ ಬೆಳೆ ತೆನೆ ಕಟ್ಟಿದೆ. ಹೀಗಾಗಿ ರೈತರಿಗೆ ಬೆಳೆ ರಕ್ಷಣೆ ಅನಿವಾರ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Sun, 11 February 24