ಕೋಲಾರ: ಕ್ಯಾಸಿನೋ ಹಾಗೂ ಅಶ್ಲೀಲ ನೃತ್ಯ ನಡೆಯುತ್ತಿದ್ದ ಜೈಪುರದ ಸಾಯಿಪುರ ಫಾರ್ಮ್ ಹೌಸ್ ಮೇಲೆ ಜೈಪುರದ ಸ್ಪೆಷಲ್ ಕ್ರೈಂ ಬ್ರಾಂಚ್ ಪೊಲೀಸರು ರೇಡ್ ಮಾಡಿದ್ದಾರೆ. ರೇಡ್ನಲ್ಲಿ ಕೋಲಾರದ 5 ಜನ ಸೇರಿ ಕರ್ನಾಟಕದ ಒಟ್ಟು ಏಳು ಜನ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಿಕ್ಕಿ ಬಿದ್ದಿದ್ದಾರೆ. ಕೋಲಾರದ ಸೈಬರ್ ಕ್ರೈಂ ಇನ್ಪೆಕ್ಟರ್ ಆಂಜಿನಪ್ಪ, ಶಿಕ್ಷಕ ರಮೇಶ್, ವ್ಯಾಪಾರಿ ಸುಧಾಕರ್, ಕೋಲಾರ ನಗರಸಭೆ ಸದಸ್ಯ ಸತೀಶ್, ಹಾಗೂ ಬಿಜೆಪಿ ಮುಖಂಡ ರಾಜೇಶ್, ಕೆಎಎಸ್ ಅಧಿಕಾರಿ ಶ್ರೀನಾಥ್ ಮತ್ತು ಆರ್ಟಿಒ ಇಲಾಖೆ ಸಿಬ್ಬಂದಿ ಶಬರೀಶ್ ಬಂಧಿತರು.
ದೆಹಲಿ ಮೂಲದ ಈವೆಂಟ್ ಕಂಪನಿ ಹೈಪ್ರೊಪೈಲ್ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಗೆ ತಲಾ 2 ಲಕ್ಷ ರೂಪಾಯಿ ಚಾರ್ಜ್ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 84 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಕೋಲಾರದ 7 ಜನರನ್ನು ಬಂಧಿಸಿದ್ದಾರೆ.
ದಾಳಿ ವೇಳೆ 14 ವಿಲಾಸಿ ಕಾರುಗಳು, 1 ಟ್ರಕ್ ಸೇರಿದಂತೆ, ಹಾಗೂ ಹುಕ್ಕಾ ಪಾಟ್ಗಳು ಫಾರಿನ್ ಡ್ರಿಂಕ್ಸ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಖ್ಯಾತ ಅಂತಾರಾಜ್ಯ ಕಾರು ಕಳ್ಳರಿಬ್ಬರ ಬಂಧನ
ಬೆಂಗಳೂರು: ಬೆಂಗಳೂರಿನಲ್ಲಿ ಕುಖ್ಯಾತ ಅಂತಾರಾಜ್ಯ ಕಾರು ಕಳ್ಳರಿಬ್ಬರನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ. ಅಯಾಜ್, ಮತೀನ್‌ವುದ್ದೀನ್ ಬಂಧಿತ ಆರೋಪಿಗಳು. ಆರೋಪಿಗಳಿಂದ 1 ಕೋಟಿ 20 ಲಕ್ಷ ಮೌಲ್ಯದ 9 ಐಷಾರಾಮಿ ಕಾರುಗಳು ಸೀಜ್ ಮಾಡಲಾಗಿದೆ. ಆರೋಪಿಗಳು ದೆಹಲಿ, ಪಂಜಾಬ್, ಹಿಮಾಚಲಪ್ರದೇಶಗಳಲ್ಲಿ ಕಳವು ಮಾಡುತ್ತಿದ್ದರು.
ಕದ್ದ ಕಾರುಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬೆಂಗಳೂರಿಗೆ ತಂದು ಮಾರುತ್ತಿದ್ದರು. ಬಂಧಿತ ಆರೋಪಿಗಳ ಸಹಚರರಾದ ಸೈಯದ್, ಸಮೀರ್, ಡೆಲ್ಲಿ
ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು; ಆರೋಪಿ ಸೆರೆ
ದಕ್ಷಿಣ ಕನ್ನಡ: ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಪೊಲೀಸರು ಆರೋಪಿಯನ್ನು (Accused) ಸೆರೆ ಹಿಡಿದಿರುವ ಘಟನೆ ಮಂಗಳೂರು (Mangalore) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳ ಗ್ರಾಮದಲ್ಲಿ ನಡೆದಿದೆ. ಮಿಸ್ಟ ಅಲಿಯಾಸ್ ಎಮ್.ಡಿ.ಮುಸ್ತಾಕ್ (26) ಬಂಧಿತ ಆರೋಪಿ. ಆರೋಪಿ ಎಮ್.ಡಿ.ಮುಸ್ತಾಕ್ ಆ.19 ರಂದು ಕೊಲೆಗೆ ಯತ್ನಿಸಿರುವ ಆರೋಪದಡಿ ಪೊಲೀಸರು ಬಂಧಿಸಿದ್ದರು.
ಈ ಸಂಬಂಧ ಪೊಲೀಸರು ಸ್ಥಳ ಮಹಜರು ಮಾಡಲು ಆರೋಪಿಯ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪಿ.ಎಸ್.ಐ ವಿನಾಯಕ ಬಾವಿಕಟ್ಟಿ, ಪಿಸಿ ಸದ್ದಾಂ ಹುಸೇನ್ ಅವರಿಗೆ ಗಾಯವಾಗಿದೆ. ಹೀಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ.
ಗುಂಡೇಟು ತಿಂದ ಮಿಸ್ಟನನ್ನು ಪೊಲೀಸರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:52 pm, Mon, 22 August 22