ಬೆಂಗಳೂರು ಅ.02: ಜಾಲಹಳ್ಳಿ ಸಂಚಾರಿ ಪೊಲೀಸರ (Traffic Police) ಸಮಯ ಸಮಯ ಪ್ರಜ್ಞೆಯಿಂದ ಕಿಡ್ನಾಪ್ ಆಗಿದ್ದ ಮಹಿಳಾ ಹೋಟೆಲ್ ಉದ್ಯಮಿ (Businessman) ಬಚಾವ್ ಆಗಿದ್ದಾರೆ. ನಿವೃತ್ತ ಸೇನಾಧಿಕಾರಿ ವಿಜಯ್ ಪತ್ನಿ, ಮಹಿಳಾ ಹೋಟೆಲ್ ಉದ್ಯಮಿ ಪಂಕಜಾ ಅಪಹರಣವಾಗಿದ್ದ ಮಹಿಳೆ. ನಗರದ ಎಂಇಎಸ್ ರಿಂಗ್ ರಸ್ತೆಯಲ್ಲಿ ಪಂಕಜಾ ಕಳೆದ ನಾಲ್ಕು ವರ್ಷಗಳಿಂದ ಡಿಎಂ ರೆಸಿಡೆನ್ಸಿ ಹೋಟೆಲ್ (Hotel) ನಡೆಸುತ್ತಿದ್ದಾರೆ. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ರೂಂ ಬುಕ್ ಮಾಡಲು ಬುರ್ಖಾ ಧರಿಸಿಕೊಂಡು ನಾಲ್ವರು ಮಹಿಳೆಯರು ಬಂದಿದ್ದಾರೆ.
ಆದರೆ ಪಂಕಜಾ ಅವರು ಸ್ಥಳೀಯರಿಗೆ ರೂಂ ಕೊಡಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಐವರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪಂಕಜಾ ಅವರ ಮೇಲೆ ಬುರ್ಖಾಧಾರಿ ಮಹಿಳೆಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂತರ ಈ ನಾಲ್ವರು ಮಹಿಳೆಯರು ಪಂಕಜಾ ಅವರನ್ನು ಸುತ್ತುವರೆದು ಕಿಡ್ನಾಪ್ ಮಾಡಿಕೊಂಡು ಆಟೋದಲ್ಲಿ ಕರೆದೊಯ್ಯುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ಆಟೋದಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿ ಕುತ್ತಿಗೆ ಕೊಯ್ದು ಕೊಲೆ
ಈ ವಿಚಾರ ಜಾಲಹಳ್ಳಿ ಸಂಚಾರಿ ಪೊಲೀಸರಿಗೆ ತಿಳಿದಿದೆ. ಆರೋಪಿಗಳು ಹೋಟೆಲ್ನಿಂದ ಕೊಂಚ ದೂರ ಹೊಗುತಿದ್ದಂತೆ ಜಾಲಹಳ್ಳಿ ಸಂಚಾರಿ ಪೊಲೀಸರು ಆಟೋ ತಡೆದು, ಪಂಕಜಾ ಅವರನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪಂಕಜಾ ಅವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ