ಬೆಂಗಳೂರು: ಟ್ರಾಫಿಕ್​ ಪೊಲೀಸ್​​​ ಕಾನ್ಸ್‌ಟೇಬಲ್ ಕಾರ್ಯಕ್ಕೆ ಕಮಿಷನರ್ ಬಿ ದಯಾನಂದ್ ಶ್ಲಾಘನೆ

ಬೆಂಗಳೂರಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಹೆಬ್ಬಾಳ‌ ಫ್ಲೈಓವರ್ ಕೆಳಗೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ವೇಳೆ ಟ್ರಾಫಿಕ್​​ ಪೊಲೀಸ್​ ಕಾನ್ಸ್‌ಟೇಬಲ್​ ನಿಂತ ನೀರನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬೆಂಗಳೂರು: ಟ್ರಾಫಿಕ್​ ಪೊಲೀಸ್​​​ ಕಾನ್ಸ್‌ಟೇಬಲ್ ಕಾರ್ಯಕ್ಕೆ ಕಮಿಷನರ್ ಬಿ ದಯಾನಂದ್ ಶ್ಲಾಘನೆ
ಕಮಿಷನರ್​ ಬಿ ದಯಾನಂದ ಟ್ವಿಟ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 01, 2023 | 11:06 AM

ಬೆಂಗಳೂರು, ಸೆಪ್ಟೆಂಬರ್​ 1 : ಬೆಂಗಳೂರು (Bengaluru) ನಗರ ಸಂಚಾರಿ ಪೊಲೀಸ್​ ಕಾನ್ಸ್‌ಟೇಬಲ್ (Police Constable) ಅವರ ಕಾರ್ಯಕ್ಕೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ (B Dayananda) ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಿನ್ನೆ (ಆ.31) ರಾತ್ರಿ ಸುರಿದ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹೆಬ್ಬಾಳ‌ ಫ್ಲೈಓವರ್ ಕೆಳಗೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ವೇಳೆ ನಿಂತ ನೀರನ್ನು ಟ್ರಾಫಿಕ್​​ ಪೊಲೀಸ್​ ಕಾನ್ಸ್‌ಟೇಬಲ್ ತೆರವುಗೊಳಿಸಿ​ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕಾನ್ಸ್‌ಟೇಬಲ್ ಅವರ ಕಾರ್ಯಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತನಾಡಿ ನಿನ್ನೆ ರಾತ್ರಿ ಅನಿರೀಕ್ಷಿತವಾಗಿ ಮಳೆ ಬಂದಿದೆ. ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ನಮ್ಮ ಸಂಚಾರ ವಿಭಾಗ ಸಿಬ್ಬಂದಿ ರಾತ್ರಿ 12 ಗಂಟೆಗೆ ಸುಮಾರಿಗೆ ನೀರು ತೆರವುಗೊಳಿಸಿ ಉತ್ತಮ ಕೆಲಸ ಮಾಡಿದ್ದಾರೆ. ಆಳವಾದ ನೀರಲ್ಲಿ ಹೋಗಿ ಕ್ಲಿಯರ್ ಮಾಡಿಕೊಟ್ಟಿದ್ದಾರೆ. ಅವರ ಕಾರ್ಯಾಕ್ಕೆ ನಾನು ಶ್ಲಾಘನೆ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು-ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ; ಇಲ್ಲಿದೆ ಮಾಹಿತಿ

ಬೆಂಗಳೂರಲ್ಲಿ ಹೆಚ್ಚಾಗ್ತಿರುವ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇಂತಹ ಘಟನೆ ನಡೆದಾಗ ತ್ವರಿತವಾಗಿ ರೆಸ್ಪಾಂಡ್ ಮಾಡುತ್ತಿದ್ದೇವೆ. ಅಂತವರನ್ನು ಬಂಧಿಸಿ, ರೌಡಿ ಶೀಟ್​ ಓಪನ್ ಮಾಡಲಾಗುತ್ತೆ ಎಂದರು.

ಇನ್ನು ರಾತ್ರಿ ಸುರಿದ ಮಳೆಗೆ ನಗರದಲ್ಲಿ 20ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಸಂಜಯನಗರ, ಹಲಸೂರು, ಕೋರಮಂಗಲ, ಸದಾಶಿವನಗರ, ವೈಯಾಲಿಕಾವಲ್​​ ಸೇರಿ ಹಲವೆಡೆ ಮರಗಳು ಧರೆಗುರುಳಿವೆ.  ಅಲ್ಲದೇ ಮಳೆಗೆ ಪರಪ್ಪನ ಅಗ್ರಹಾರದ ರಾಯಲ್ ಕಂಟ್ರಿ ಲೇಔಟ್​​ನ ರಸ್ತೆ ಕೊಚ್ಚಿ‌ ಹೋಗಿ‌ ಕೆಸರುಮಯವಾಗಿತ್ತು. ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ಎರಡು ಶಾಲಾ ಬಸ್​ಗಳು ಸಿಲುಕಿಕೊಂಡಿವೆ. ಇನ್ನು ರಸ್ತೆ ಸರಿಪಡಿಸದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:02 am, Fri, 1 September 23