ಜೋಧ್​ಪುರ: ಮಿಲಿಟರಿ ಕ್ವಾರ್ಟರ್ಸ್​ನಲ್ಲಿ ಯೋಧರೊಬ್ಬರ ಪತ್ನಿ ಹಾಗೂ ಮಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ

|

Updated on: Jul 31, 2023 | 11:26 AM

ಮಿಲಿಟರಿ ಕಾರ್ಟರ್ಸ್​ನಲ್ಲಿ ಯೋಧರೊಬ್ಬರ ಪತ್ನಿ ಹಾಗೂ ಮಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಯೋಧರನ್ನು ಬಂಧಿಸಲಾಗಿದೆ.

ಜೋಧ್​ಪುರ: ಮಿಲಿಟರಿ ಕ್ವಾರ್ಟರ್ಸ್​ನಲ್ಲಿ ಯೋಧರೊಬ್ಬರ ಪತ್ನಿ ಹಾಗೂ ಮಗಳು  ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ
ಪೊಲೀಸ್
Image Credit source: India.com
Follow us on

ಮಿಲಿಟರಿ ಕಾರ್ಟರ್ಸ್​ನಲ್ಲಿ ಯೋಧರೊಬ್ಬರ ಪತ್ನಿ ಹಾಗೂ ಮಗಳ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ, ಈ ಸಂಬಂಧ ಯೋಧರನ್ನು ಬಂಧಿಸಲಾಗಿದೆ. ರಾಜಸ್ಥಾನದ ಜೋಧ್​ಪುರದಲ್ಲಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, 25 ವರ್ಷದ ರುಕ್ಮೀನಾ ಮತ್ತು ಅವರ ಎರಡು ವರ್ಷದ ಮಗಳು ರಿದ್ಧಿಮಾ ಅವರ ಶವಗಳು ಹಾಸಿಗೆಯ ಮೇಲೆ ಪತ್ತೆಯಾಗಿವೆ.

ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರುಕ್ಮೀನಾ ಅವರ ಪತಿ ರಾಮ್ ಪ್ರಸಾದ್ ಹೇಳಿದ್ದಾರೆ. ರಾಮ್ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವರದಿಯ ಪ್ರಕಾರ, ಪೊಲೀಸ್ ಉಪ ಕಮಿಷನರ್ (ಪೂರ್ವ) ಅಮೃತ ದುವಾಹ್ನ್ ಅವರು ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಮತ್ತು ಅವರು ಜೋಧ್‌ಪುರ ತಲುಪಿದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಿಕ್ಕಿಂ ಮೂಲದ ರಾಮ್ ಪ್ರಸಾದ್ ನೇಪಾಳ ಮೂಲದ ರುಕ್ಮೀನಾ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಮತ್ತಷ್ಟು ಓದಿ: ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ, ಬಸವಕಲ್ಯಾಣದಲ್ಲಿ ಪೈಶಾಚಿಕ ಕೃತ್ಯ!

ಭಾರತೀಯ ಸೇನೆಯಲ್ಲಿ ನಾಯಕ್ ಆಗಿರುವ ರಾಮ್ ಪ್ರಸಾದ್ ಎರಡು ವರ್ಷಗಳ ಹಿಂದೆ ಕುಟುಂಬ ಸಮೇತ ಜೋಧ್‌ಪುರಕ್ಕೆ ತೆರಳಿ ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಭಾನುವಾರ ಮುಂಜಾನೆ 5 ಗಂಟೆಗೆ ಆರ್ಮಿ ಕ್ವಾರ್ಟರ್ಸ್‌ನಲ್ಲಿ ಎರಡು ಶವ ಪತ್ತೆಯಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಮಹಿಳೆ ಮತ್ತು ಅವರ ಮಗಳು ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡುಕೊಂಡಿದ್ದೇವೆ ಎಂದು ದುಹಾನ್ ಪಿಟಿಐಗೆ ತಿಳಿಸಿದರು.

ರಾಮ್ ಪ್ರಸಾದ್ ಕೂಡ ಮನೆಯಲ್ಲಿದ್ದರು ಮತ್ತು ಅವರ ಕೈಗಳಲ್ಲಿ ಸುಟ್ಟ ಗುರುತುಗಳಿವೆ ಎಂದು ಅವರು ಹೇಳಿದರು. ರಾಮ್ ಪ್ರಸಾದ್ ಅವರು ತಮ್ಮ ಪತ್ನಿ ಮತ್ತು ಅವರ ಮಗಳನ್ನು ಉಳಿಸಲು ಪ್ರಯತ್ನಿಸಿದರು ಆದರೆ ವಿಫಲರಾದರು ಮತ್ತು ಸಹಾಯಕ್ಕಾಗಿ ಮನೆಯಿಂದ ಹೊರಗೆ ಓಡಿಹೋದರು ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ರಾಮ್ ಪ್ರಸಾದ್ ವಿರುದ್ಧ ರತನಾಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದುಹಾನ್ ಹೇಳಿದರು.

ಮರಣೋತ್ತರ ಪರೀಕ್ಷೆ ನಡೆಸುವವರೆಗೆ ನಾವು ಯಾವುದೇ ತೀರ್ಮಾನಕ್ಕೆ ಬರುವ ಸ್ಥಿತಿಯಲ್ಲಿಲ್ಲ ಎಂದು ದುಹಾನ್ ಹೇಳಿದರು ಮತ್ತು ಫೋರೆನ್ಸಿಕ್ಸ್ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಮಾಹಿತಿ ನೀಡಿದರು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:26 am, Mon, 31 July 23