ಕಾಮಾಕ್ಷಿಪಾಳ್ಯದಲ್ಲಿ ಮಹಿಳೆ ಅತ್ಯಾಚಾರ-ಕೊಲೆ: ಗೋವಾಕ್ಕೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್

ಕಾಮಾಕ್ಷಿಪಾಳ್ಯ ಮಹಿಳೆ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗೋವಾದಲ್ಲಿ ಆರೋಪಿ ಪ್ರವೀಣ್(23) ವಶಕ್ಕೆ ಪಡೆಯಲಾಗಿದೆ.

ಕಾಮಾಕ್ಷಿಪಾಳ್ಯದಲ್ಲಿ ಮಹಿಳೆ ಅತ್ಯಾಚಾರ-ಕೊಲೆ: ಗೋವಾಕ್ಕೆ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್
ಆರೋಪಿ ಪ್ರವೀಣ್ (ಕುಳಿತಿರುವ ವ್ಯಕ್ತಿ)
Updated By: ಸಾಧು ಶ್ರೀನಾಥ್​

Updated on: Jan 06, 2021 | 9:55 AM

ಬೆಂಗಳೂರು: ಕಾಮಾಕ್ಷಿಪಾಳ್ಯದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗೋವಾದಲ್ಲಿ ಆರೋಪಿ ಪ್ರವೀಣ್(23) ವಶಕ್ಕೆ ಪಡೆಯಲಾಗಿದೆ. ನಗರದ ಕಾಮಾಕ್ಷಿಪಾಳ್ಯದ ಬಳಿಯ ರಂಗನಾಥಪುರದಲ್ಲಿ ಇಬ್ಬರು ಬ್ಯಾಚುಲರ್ಸ್ ವಾಸವಿದ್ದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಕೇಸ್ ಬೆನ್ನತ್ತಿದ ಗೋವಾ, ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಪ್ರವೀಣ್ ಮಹಿಳೆ ಹತ್ಯೆ ಬಳಿಕ ಗೋವಾಕ್ಕೆ ಪರಾರಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಗೋವಾಕ್ಕೆ ತೆರಳಿದ್ದ ಪೊಲೀಸರು ಅಲ್ಲಿಯ ಪೊಲೀಸರ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎನ್ನಲಾಗಿದೆ. ಇಂದು ಸಂಜೆ ವೇಳೆಗೆ ಆತನನ್ನು ಬೆಂಗಳೂರಿಗೆ ಕರೆತರಲಾಗುತ್ತೆ. ಬಳಿಕ ಈ ಕೇಸ್​ನ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತೆ.

ಘಟನೆ ಹಿನ್ನೆಲೆ:
ಇಬ್ಬರು ಬ್ಯಾಚುಲರ್ಸ್ ವಾಸವಿದ್ದ ಮನೆಯಲ್ಲಿ ಅರುಣಾಕುಮಾರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅರುಣಾಕುಮಾರಿ ತಮ್ಮ ದಾಸರಹಳ್ಳಿಯ ನಿವಾಸದಿಂದ ಕೆಲಸಕ್ಕೆಂದು ಪ್ರಿಂಟಿಂಗ್ ಪ್ರೆಸ್​ಗೆ ತೆರಳಿದ್ದರು. ಆದರೆ ಆಕೆ, ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅರುಣಾಕುಮಾರಿ ಕುಟುಂಬಸ್ಥರು ಮಾಗಡಿ ರಸ್ತೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಬಳಿಕ ಪೊಲೀಸರು ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಮಹಿಳೆ ಮೃತದೇಹವನ್ನು ಪತ್ತೆಹಚ್ಚಿದ್ದರು. ಈ ಪ್ರಕರಣ ಸಂಬಂಧ ಆರೋಪಿ ಪ್ರವೀಣ್​ನನ್ನು ಬಂಧಿಸಲಾಗಿದೆ.

ಕಾಮಾಕ್ಷಿಪಾಳ್ಯ: ಇಬ್ಬರು ಬ್ಯಾಚುಲರ್ಸ್ ವಾಸವಿದ್ದ ಮನೆಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು

Published On - 9:34 am, Wed, 6 January 21