Crime News: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯ ಬರ್ಬರ ಹತ್ಯೆ!

| Updated By: Rakesh Nayak Manchi

Updated on: Jun 14, 2022 | 4:03 PM

ಚಾಕುವಿನಿಂದ ಇರಿದು ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರು ನಗರದ ಪುಲಿಕೇಶಿನಗರದ ಎಂಎಂ ರಸ್ತೆಯಲ್ಲಿ ನಡೆದಿದೆ.

Crime News: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯ ಬರ್ಬರ ಹತ್ಯೆ!
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಚಾಕುವಿನಿಂದ ಇರಿದು ಹೊರರಾಜ್ಯದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಪುಲಿಕೇಶಿನಗರದ ಎಂಎಂ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಬಿಕಾಸ್ ಮೂಡಿ(37) ಕೊಲೆಯಾದ ವ್ಯಕ್ತಿ. ಮೂಲತಃ ಪಶ್ಚಿಮ ಬಂಗಾಳದವನಾದ ಬಿಕಾಸ್ ಮೆಟ್ರೋ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದನು. ಆದರೆ ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಬಿಕಾಸ್ ಬರ್ಬರವಾಗಿ ಹತ್ಯೆಯಾಗಿದ್ದು, ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ.

ಇದನ್ನೂ ಓದಿ: Crime News: ಪ್ರತಿಷ್ಠಿತ ಕಾಲೇಜಿಗೆ ಮೋಸ, ದಾನಿಗಳಿಂದ ಬಂದ ಹಣವನ್ನು ನುಂಗಿ ನೀರು ಕುಡಿದು ಪರಾರಿಯಾದ ಕಾರ್ಯದರ್ಶಿ

ಹೆಚ್ಚಾದ ಪಂಪ್ ಸೆಟ್ ಕಳ್ಳರ ಹಾವಳಿ

ಬೀದರ್: ಜಿಲ್ಲೆಯಲ್ಲಿ ಪಂಪ್ ಸೆಟ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ಮತ್ತೊಂದು ಕಳ್ಳತನ ಪ್ರಕರಣ ನಡೆದಿದೆ. ಔರಾದ್ ತಾಲೂಕಿನ ಕೌಠಾ ಗ್ರಾಮದಲ್ಲಿ ಪಂಪ್​ಸೆಟ್ ಅನ್ನು ಖದೀಮರು ಕಳವು ಮಾಡಿದ್ದಾರೆ. ಆ ಮೂಲಕ ಕೇವಲ ಎರಡು ವಾರಗಳಲ್ಲಿ ಒಟ್ಟು 18 ಪಂಪ್ ಸೆಟ್​ಗಳು ಕಳ್ಳತನವಾಗಿವೆ. ಕಳ್ಳರ ಹಾವಳಿಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಒಂದು ನೀರು ಎತ್ತುವ ಪಂಪ್ ಸೇಟ್ ಬೆಲೆ 30 ರಿಂದ 40 ಸಾವಿರ ರೂಪಾಯಿ ಇದೆ. ಇಷ್ಟೊಂದು ಬೆಳೆಬಾಲುವ ಪಂಪ್​ ಅನ್ನು ಸಾಲ ಮಾಡಿ ಖರೀದಿಸಿ ಕಳವಾದರೆ ಹೇಗೆ? ಹೊಸ ಪಂಪ್ ಸೆಟ್ ಖರೀದಿಸಲು ಅನ್ನದಾತರು ಪರದಾಡುವಂತಾಗಿದ್ದು, ಕಳ್ಳರ ಬಂಧನಕ್ಕೆ ರೈತರು ಒತ್ತಾಯಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಎದುರೇ ಎಣ್ಣೆ ಹಾಕಿ ದರ್ಬಾರ್

ಕೋಲಾರ: ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳ ಎದುರೇ ಎಣ್ಣೆ ಹಾಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಬಾಣಸಿಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಾಜಲದಿನ್ನೆಯಲ್ಲಿರುವ ಅಂಬೇಡ್ಕರ್ ಹಾಸ್ಟೆಲ್​ನಲ್ಲಿ ವಾರ್ಡನ್ ಹರೀಶ್ ಇಲ್ಲದಿದ್ದ ಸಂದರ್ಭದಲ್ಲಿ ಬಾಣಸಿಗ ಮಂಜುನಾಥ್, ವಿದ್ಯಾರ್ಥಿಗಳ ಎದುರೇ ಮದ್ಯ ಸೇವನೆ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಮಂಜುನಾಥ್ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ. ಅಡುಗೆ ಮಾಡುವವನ ದರ್ಪ ಹಾಗೂ ದೌರ್ಜನ್ಯದ ವಿಡಿಯೋ ಮಾಡಿದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹಾಸ್ಟೆಲ್​ನ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ 250ರಿಂದ 100ಕ್ಕೆ ಇಳಿದೆ.

ಇದನ್ನೂ ಓದಿ: Crime News: ಲಾಡ್ಜ್​ನಲ್ಲಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಬಂಧನ, ನಸುಕಿನಲ್ಲಿ ಠಾಣೆಗೆ ಯುವತಿ ಕರೆತಂದ ಪೊಲೀಸರಿಗೆ ವಕೀಲ ಛೀಮಾರಿ

ಕಲ್ಲು, ಬಡಿಗೆಯಿಂದ ಪರಸ್ಪರ ಹೊಡೆದಾಡಿಕೊಂಡ ಕುಟುಂಬಗಳು

ಯಾದಗಿರಿ: ನಿರ್ಮಾಣ ಹಂತದ ಮನೆಯ ಬಾಗಿಲು ಕಳ್ಳತವಾಗಿದ್ದಕ್ಕೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ. ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗಯ್ಯ ಸ್ವಾಮಿ ಎಂಬವರು ಮನೆಯೊಂದನ್ನು ಕಟ್ಟಿಸುತ್ತಿದ್ದಾರೆ. ಈ ಮನೆಯ ಮೇಲೆ ಖದೀಮರ ಕಣ್ಣು ಬಿದ್ದು ಬಾಗಿಲು ಕಳ್ಳತನವಾಗಿದೆ. ಬಾಗಿಲು ಕಳ್ಳತನವಾದ ಬಗ್ಗೆ ನಾಗಯ್ಯ ಸ್ವಾಮಿ ಕುಟುಂಬಸ್ಥರು ಬೇರೆಯವರ ಮೇಲೆ‌ ಸಂಶಯ ವ್ಯಕ್ತಪಡಿಸಿ ಬೈದಿದ್ದಾರೆ. ಇದೇ ಕಾರಣಕ್ಕೆ ಪಕ್ಕದ ಮನೆಯ ಕಂಠೇಪ್ಪ ಹಾಗೂ ಸಂಬಂಧಿಕರು ”ಬಾಗಿಲು ಕಳ್ಳತನ ಆಗಿದ್ದಕ್ಕೆ ನಮ್ಮ ಮೇಲೆ ಸಂಶಯ ವ್ಯಕ್ತಪಡಿಸುತ್ತಿರಾ” ಎಂದು ಹಲ್ಲೆ ನಡೆಸಿದ್ದಾರೆ. ಈ ವೇಳೆ  ನಾಗಯ್ಯ ಸ್ವಾಮಿ ಕುಟುಂಬಸ್ಥರಿಂದಲೂ ಹಲ್ಲೆ ನಡೆಸಲಾಗಿದೆ. ನಡು ರಸ್ತೆಯಲ್ಲಿ ನಿಂತು ಕಲ್ಲು, ಬಡಿಗೆಗಳನ್ನು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 14 June 22