Crime News: ಪ್ರತಿಷ್ಠಿತ ಕಾಲೇಜಿಗೆ ಮೋಸ, ದಾನಿಗಳಿಂದ ಬಂದ ಹಣವನ್ನು ನುಂಗಿ ನೀರು ಕುಡಿದು ಪರಾರಿಯಾದ ಕಾರ್ಯದರ್ಶಿ

ಪ್ರತಿಷ್ಠಿತ ಕಾಲೇಜಿಗೆ ದಾನಿಗಳಿಂದ ಬಂದ ಹಣವನ್ನು ಲಪಟಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ. ವಂಚನೆ ಸಂಬಂಧ ಕುಮಟಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News: ಪ್ರತಿಷ್ಠಿತ ಕಾಲೇಜಿಗೆ ಮೋಸ, ದಾನಿಗಳಿಂದ ಬಂದ ಹಣವನ್ನು ನುಂಗಿ ನೀರು ಕುಡಿದು ಪರಾರಿಯಾದ ಕಾರ್ಯದರ್ಶಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 14, 2022 | 3:10 PM

ಕಾರವಾರ: ಪ್ರತಿಷ್ಠಿತ ಕಾಲೇಜಿಗೆ ದಾನಿಗಳಿಂದ ಬಂದ ಹಣವನ್ನು ಲಪಟಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ. ಡಾ. ಎಸ್ ವಿ ಬಾಳಿಗಾ ಕಾಲೇಜ್ ಆಪ್ ಆಟ್೯ ಆ್ಯಂಡ ಸೈನ್ಸ್ ಕಾಲೇಜಿನ ಸೆಕ್ರೆಟರಿ ಆಗಿ ಕೆಲಸ ಮಾಡುತ್ತಿದ್ದ ಸುಧಾಕರ ನಾಯಕ ಎಂಬಾತ ಕಾಲೇಜಿನ ದುಡ್ಡನ್ನು ದೋಚಿ ಪರಾರಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾನಿಗಳಿಂದ ಬರುವ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಸುಧಾಕರ್ ಬ್ಯಾಂಕ್ ಖಾತೆಯೊಂದನ್ನು ತೆರೆದಿದ್ದ. ಈ ಖಾತೆಯಲ್ಲಿ ತನ್ನ ಹೆಸರನ್ನು ಅಬ್ದುಲ್ ಗಫಾರ್ ಅಬ್ದುಲ್ ರೆಹಮಾನ್ ಶೇಖ್ ಎಂದು ಬದಲಾಯಿಸಿದ್ಕೊಂದ. ಅದೇ ಹೆಸರಿನಲ್ಲಿ ಪಾನ್​ಕಾರ್ಡ್​ ಕೂಡ ಪಡೆದುಕೊಂಡಿದ್ದ. ಈ ಖಾತೆಯಲ್ಲಿ ಒಟ್ಟು 75 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ಇದೀಗ ಎಲ್ಲವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: Crime News: ಲಾಡ್ಜ್​ನಲ್ಲಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಬಂಧನ, ನಸುಕಿನಲ್ಲಿ ಠಾಣೆಗೆ ಯುವತಿ ಕರೆತಂದ ಪೊಲೀಸರಿಗೆ ವಕೀಲ ಛೀಮಾರಿ

ಸರ ಎಗರಿಸಿದ್ದ ಆರೋಪಿ ಅರೆಸ್ಟ್

ವಿಜಯಪುರ: ರೈಲು ನಿಲ್ದಾಣದಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಸರ ಕಿತ್ತು ಪರಾರಿಯಾಗುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗಳಗಿ ಗ್ರಾಮದ ಸುದೀಪ್ ಕಾಂಬಳೆ (22) ಬಂಧಿತ ಆರೋಪಿ. ಜಿಲ್ಲೆಯ ಇಂಡಿ ರೇಲ್ವೆ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಭೀಮಾಬಾಯಿ ಧಿವಂಗತಿ ಅವರು ಬಂದಿಳಿದಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಮಹಿಳೆಯ ಕತ್ತಿನಲ್ಲಿದ್ದ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸರ‌ಕಿತ್ತು‌ ಓಡುವಾಗ ಖದೀಮರ ಬೆನ್ನಟ್ಟಿದ ಸಾರ್ವಜನಿಕರು ಹಾಗೂ ರೇಲ್ವೇ ಪೊಲೀಸರು ಓರ್ವ ಕಳ್ಳನನ್ನು‌ ಹಿಡಿದಿದ್ದಾರೆ. ಆ ಮೂಲಕ ಕಳವುಗೈದ ಚಿನ್ನದ ಸರವನ್ನು ಪೊಲೀಸರು ಭೀಮಾಬಾಯಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೂಟ್‌ಕೇಸ್‌‌ನಲ್ಲಿ ಮಹಿಳೆಯ ಶವ ಪತ್ತೆ

ನೆಲಮಂಗಲ: ಸೂಟ್‌ಕೇಸ್‌‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ಕೆರೆಯ ನೀರಿನ ಬಳಿ ಪತ್ತೆಯಾದ ಸೂಟ್​ಕೇಸ್​ನಲ್ಲಿ ಸುಮಾರು 35 ರಿಂದ 40 ವರ್ಷ ವಯಸ್ಸಿನ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಬೇರೆ ಕಡೆಯಲ್ಲಿ ಕೊಲೆ ಮಾಡಿ ಬಳಿಕ ಕೈಕಾಲು ಕಟ್ಟಿ ಸೂಟ್ ಕೇಸ್​ನಲ್ಲಿ ತುಂಬಲಾಗಿದೆ. ನಂತರ ಕರೆ ಬಳಿ ಶವ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಕೋನವಂಶಿ ಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime: ರಸ್ತೆಯಲ್ಲಿ ನಿಂತು ಮದ್ಯ ಸೇವನೆ: ಕುಡುಕರು, ಬಾರ್ ಮಾಲೀಕರಿಗೆ ಪೊಲೀಸರ ಖಡಕ್ ವಾರ್ನಿಂಗ್

ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳು ಅರೆಸ್ಟ್

ನೆಲಮಂಗಲ: ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ದಾಬಸ್​ಪೇಟೆ ಕೈಗಾರಿಕಾ ಪ್ರದೇಶದ ನಿಡವಂದ ಬಳಿ ನಾಗರಾಜ (20), ಪುರುಷೋತ್ತಮ (20), ಶಿವರಾಜು (19), ಶಿವಣ್ಣ (40) ದರೋಡೆ ನಡೆಸಲು ಹೊಂಚುಹಾಕಿ ಕುಳಿತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಸಹಿತ ಚಾಕು, ಕಬ್ಬಿಣದ ರಾಡು, ದೊಣ್ಣೆ, ಖಾರದಪುಡಿ, ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಮತ್ತಿಬ್ಬರು ಆರೋಪಿಗಳಾದ ಸಂಜಯ್, ರಾಜು ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ