ಕೇರಳ: ಅಕ್ರಮ ಸಂಬಂಧದ ಶಂಕೆ, ಪತ್ನಿ, ಸ್ನೇಹಿತನ ಕೊಲೆಗೈದ ವ್ಯಕ್ತಿ

|

Updated on: Mar 03, 2025 | 12:05 PM

ಪತ್ನಿಗೆ ತನ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ವ್ಯಕ್ತಿಯೊನ್ನ ಇಬ್ಬರನ್ನೂ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಲಂಜೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬೈಜು ಎಂಬಾತ ರಾತ್ರಿ 11 ಗಂಟೆ ಸುಮಾರಿಗೆ ಪತ್ನಿ ವೈಷ್ಣವಿ, ಸ್ನೇಹಿತನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ನಂತರ ವೈಷ್ಣವಿ ಮನೆಯಿಂದ ಹೊರಗೆ ಓಡಿಹೋಗಿ ತನ್ನ ಸ್ನೇಹಿತ ವಿಷ್ಣುವಿನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಬೈಜು ವಿಷ್ಣು ಮೇಲೆ ಹಲ್ಲೆ ನಡೆದಿದ್ದ, ತುಂಬಾ ಗಾಯಗಳಾಗಿತ್ತು.

ಕೇರಳ: ಅಕ್ರಮ ಸಂಬಂಧದ ಶಂಕೆ, ಪತ್ನಿ, ಸ್ನೇಹಿತನ ಕೊಲೆಗೈದ ವ್ಯಕ್ತಿ
ಜೈಲು
Image Credit source: NDTV
Follow us on

ಕೇರಳ, ಮಾರ್ಚ್​ 03: ಪತ್ನಿಗೆ ತನ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ವ್ಯಕ್ತಿಯೊನ್ನ ಇಬ್ಬರನ್ನೂ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಲಂಜೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬೈಜು ಎಂಬಾತ ರಾತ್ರಿ 11 ಗಂಟೆ ಸುಮಾರಿಗೆ ಪತ್ನಿ ವೈಷ್ಣವಿ, ಸ್ನೇಹಿತನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕೌಟುಂಬಿಕ ಕಲಹದ ನಂತರ ವೈಷ್ಣವಿ ಮನೆಯಿಂದ ಹೊರಗೆ ಓಡಿಹೋಗಿ ತನ್ನ ಸ್ನೇಹಿತ ವಿಷ್ಣುವಿನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಬೈಜು ವಿಷ್ಣು ಮೇಲೆ ಹಲ್ಲೆ ನಡೆದಿದ್ದ, ತುಂಬಾ ಗಾಯಗಳಾಗಿತ್ತು, ಪಟ್ಟಣಂತಿಟ್ಟ ಜನರಲ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವನು ಸಾವನ್ನಪ್ಪಿದ್ದ. ವೈಷ್ಣವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಬೈಜುನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಜು ತನ್ನ ಸ್ನೇಹಿತರಿಗೆ ಕರೆ ಮಾಡಿ ತನ್ನ ಅಪರಾಧದ ಬಗ್ಗೆ ತಿಳಿಸಿದ್ದ, ನಂತರ ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮಾತೃಭೂಮಿ ವರದಿ ಮಾಡಿದೆ.

ಕಳೆದ ತಿಂಗಳು, ಮತ್ತೊಬ್ಬ ವ್ಯಕ್ತಿ ರಾಜ್ಯದಲ್ಲಿ ಇದೇ ರೀತಿಯ ಅಪರಾಧ ಎಸಗಿದ್ದಾನೆ, ಅಲ್ಲಿ ಅವನು ಒಬ್ಬ ಮಹಿಳೆ ಮತ್ತು ಆಕೆಯ ಮಗನನ್ನು ಕಡಿದು ಕೊಂದಿದ್ದ, ಇದಕ್ಕೂ ಮೊದಲು 2019 ರಲ್ಲಿ ಮಗನ ಹೆಂಡತಿಯನ್ನು ಕೊಂದಿದ್ದ. ಫೆಬ್ರವರಿ 24 ರಂದು, ಒಬ್ಬ ವ್ಯಕ್ತಿ ತನ್ನ ಗೆಳತಿ, 88 ವರ್ಷದ ಅಜ್ಜಿ, 13 ವರ್ಷದ ಸಹೋದರ, ತಂದೆಯ ಚಿಕ್ಕಪ್ಪ ಮತ್ತು ತನ್ನ ಚಿಕ್ಕಪ್ಪನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಕೇರಳ: ಕುಟುಂಬದವರು, ಪ್ರೇಯಸಿಯನ್ನು ಕೊಂದಿದ್ದಕ್ಕೆ ಚೂರೂ ಪ್ರಶ್ಚಾತಾಪವಿಲ್ಲದೆ ಹುಚ್ಚನಂತೆ ವರ್ತಿಸುತ್ತಿರುವ ಅಫಾನ್

ಕೊಲೆಗಳಿಗೆ ಸಂಬಂಧಿಸಿದಂತೆ 23 ವರ್ಷದ ಯುವಕನನ್ನು ಬಂಧಿಸಿ ಮಾರ್ಚ್ 13 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಫಾನ್ ಎಂಬ ವ್ಯಕ್ತಿ ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಣೆಯಿಂದ ಹಾಜರಾಗಿ ಐದು ಜನರ ಕೊಲೆಯನ್ನು ಒಪ್ಪಿಕೊಂಡಿದ್ದ.

ಅಜಾನ್ 14 ಸಾಲಗಾರರಿಂದ 65 ಲಕ್ಷ ರೂ. ಸಾಲ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಆರಂಭದಲ್ಲಿ ಹಣಕಾಸಿನ ಸಮಸ್ಯೆಗಳು ಕೊಲೆಗೆ ಒಂದು ಕಾರಣವೆಂದು ಗುರುತಿಸಲಾಗಿತ್ತು, ಆದರೆ ಆರೋಪಿಯ ತಂದೆ ಅಂತಹ ಯಾವುದೇ ಸಮಸ್ಯೆಗಳನ್ನು ನಿರಾಕರಿಸಿದರು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Mon, 3 March 25