ಎಟಿಎಂ ದರೋಡೆ ಕೇಸ್ ತನಿಖೆ ವೇಳೆ ಕಾರು ಕಳ್ಳತನ ಬೆಳಕಿಗೆ; 1.80 ಕೋಟಿ ರೂ ಮೌಲ್ಯದ 20 ಕಾರುಗಳ ಜಪ್ತಿ

| Updated By: ಸಾಧು ಶ್ರೀನಾಥ್​

Updated on: Jul 14, 2021 | 3:20 PM

Stolen cars: ಸ್ನೇಹಿತರೊಂದಿಗೆ ಸೇರಿ ಕಾರು ಕಳ್ಳತನದಲ್ಲಿ ಭಾಗಿಯಾಗಿರುವುದರ ಬಗ್ಗೆ ಶಬ್ಬೀರ್ ಬಾಯ್ಬಿಟ್ಟಿದ್ದ. ತಕ್ಷಣ ಆರೋಪಿಯನ್ನ ಬಂಧಿಸಿ 1 ಕೋಟಿ 80 ಲಕ್ಷ ಮೌಲ್ಯದ 20 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಶಬ್ಬೀರ್ ಸ್ನೇಹಿತರಾದ ಶರಣ್ ಹಾಗೂ ಶಕ್ತಿವೇಲುಗಾಗಿ ಗೋವಿಂದಪುರ ಪೊಲೀಸರು ಈಗ ಹುಡುಕಾಟ ನಡೆಸುತ್ತಿದ್ದಾರೆ.

ಎಟಿಎಂ ದರೋಡೆ ಕೇಸ್ ತನಿಖೆ ವೇಳೆ ಕಾರು ಕಳ್ಳತನ ಬೆಳಕಿಗೆ; 1.80 ಕೋಟಿ ರೂ ಮೌಲ್ಯದ 20 ಕಾರುಗಳ ಜಪ್ತಿ
ಎಟಿಎಂ ದರೋಡೆ ಕೇಸ್ ತನಿಖೆ ವೇಳೆ ಕಾರು ಕಳ್ಳತನ ಬೆಳಕಿಗೆ; 1.80 ಕೋಟಿ ರೂ ಮೌಲ್ಯದ 20 ಕಾರುಗಳ ಜಪ್ತಿ
Follow us on

ಬೆಂಗಳೂರು: ಎಟಿಎಂ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಕಾರು ಕಳ್ಳತನದ ಜಾಲವೊಂದು ಬೆಳಕಿಗೆ‌ ಬಂದಿದೆ. ಗೋವಿಂದಪುರ ಪೊಲೀಸರಿಂದ 1 ಕೋಟಿ 80 ಲಕ್ಷ ಮೌಲ್ಯದ ಕಾರುಗಳ ಜಪ್ತಿಯಾಗಿದೆ. 2018ರಲ್ಲಿ ಕೆ.ಜಿ. ಹಳ್ಳಿ (KG Halli) ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ದರೋಡೆ (ATM theft) ನಡೆದಿತ್ತು. ಈ ಸಂಬಂಧ  ಇತ್ತೀಚೆಗೆ ಗೋವಿಂದಪುರ ಠಾಣಾ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. 

ಕೃತ್ಯಕ್ಕೆ ಬಳಸಿದ್ದ ವಾಹನಕ್ಕಾಗಿ ಹುಡುಕಾಡುವಾಗ ಬೃಹತ್ ಕಳ್ಳತನ ಜಾಲ ಬಯಲಾಗಿದೆ. ಅನುಮಾನದ ಆಧಾರದಲ್ಲಿ ಹೊಸೂರಿನ ಶಬ್ಬೀರ್ ಖಾನ್ ಎಂಬಾತನನ್ನ ಪೊಲೀಸರು ವಿಚಾರಿಸಿದ್ದರು. ಸಮರ್ಪಕ ಮಾಹಿತಿ ನೀಡದಿದ್ದಾಗ ಪೊಲೀಸರು ಶಬ್ಬೀರನ ವಿಚಾರಣೆಯನ್ನು ತೀವ್ರಗೊಳಿಸಿದ್ದರು.

ಸ್ನೇಹಿತರೊಂದಿಗೆ ಸೇರಿ ಕಾರು ಕಳ್ಳತನದಲ್ಲಿ ಭಾಗಿಯಾಗಿರುವುದರ ಬಗ್ಗೆ ಶಬ್ಬೀರ್ ಬಾಯ್ಬಿಟ್ಟಿದ್ದ. ತಕ್ಷಣ ಆರೋಪಿಯನ್ನ ಬಂಧಿಸಿ 1 ಕೋಟಿ 80 ಲಕ್ಷ ಮೌಲ್ಯದ 20 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಶಬ್ಬೀರ್ ಸ್ನೇಹಿತರಾದ ಶರಣ್ ಹಾಗೂ ಶಕ್ತಿವೇಲುಗಾಗಿ ಗೋವಿಂದಪುರ ಪೊಲೀಸರು ಈಗ ಹುಡುಕಾಟ ನಡೆಸುತ್ತಿದ್ದಾರೆ.

ATM Theft | ಎಟಿಎಂಗೆ ತುಂಬಬೇಕಿದ್ದ ಹಣ ಎಗರಿಸಿ ಅತ್ತೆ ಮಗಳ ಜತೆ ಎಸ್ಕೇಪ್ ಆಗಿದ್ದ ಖದೀಮ ಅರೆಸ್ಟ್

(KG Halli ATM theft case 20 stolen cars confiscated by govindapura police)