ಆನೇಕಲ್ ವಲಯ ಪೊಲೀಸರ ಭರ್ಜರಿ ಕಾರ್ಯಾಚರಣೆ; 56 ಆರೋಪಿಗಳ ಬಂಧನ
ಇನ್ನು ಸೂರ್ಯನಗರ ಪೊಲೀಸ್ ಠಾಣೆಗೆ ಸಂಬಧಿಸಿದಂತೆ 1 ಕೆ.ಜಿ.30 ಗ್ರಾಂ ಚಿನ್ನ ಸೇರಿದಂತೆ 59 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆ 25 ಮೊಬೈಲ್ ,9 ದ್ವಿಚಕ್ರ ವಾಹನ,1 ಸುಲಿಗೆ ಪ್ರಕರಣದಲ್ಲಿ ಒಟ್ಟು 5 ಲಕ್ಷ 25 ಸಾವಿರ ರೂಗಳ ಮಾಲನ್ನು ವಶಕ್ಕೆ ಪಡೆಯಲಾಗಿದೆ.

ಆನೇಕಲ್: (ಜುಲೈ 14) ಆನೇಕಲ್ ವಲಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 56 ಆರೋಪಿಗಳನ್ನ ಬಂಧಿಸಿದ್ದಾರೆ. 37 ಪ್ರಕರಣಗಳನ್ನು ಭೇದಿಸಿದ ಪೊಲೀಸರು, 1 ಕೋಟಿ 74 ಲಕ್ಷ ರೂಪಾಯಿ ಮೌಲ್ಯದ ಕಳವು ಮಾಲನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿದ್ದ ಬೈಕ್, ಮೊಬೈಲ್, ಚಿನ್ನಾಭರಣವನ್ನು ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
ಆನೇಕಲ್ ಉಪವಿಭಾಗದ 7 ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಒಟ್ಟು 37 ಪ್ರಕರಣಗಳನ್ನು ಭೇದಿಸಿ 56 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಳ್ಳತನ ಮಾಡಿದ ಒಟ್ಟು 100 ಬೈಕ್ಗಳನ್ನ ಪತ್ತೆ ಹಚ್ಚಲಾಗಿದೆ. ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದ, 3 ಸುಲಿಗೆ, ಮೂರು ಮನೆ ಕಳ್ಳತನ, 25 ದ್ವಿಚಕ್ರ ವಾಹನ ಸೇರಿ ಒಟ್ಟು 51 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಜಿಗಣಿ ಠಾಣೆ 100 ಮೊಬೈಲ್, 15 ದ್ವಿಚಕ್ರ ವಾಹನ, 2 ಸುಲಿಗೆ, 2 ಡಕಾಯಿತಿ, 2 ಮನೆ ಕಳ್ಳತನ ಪ್ರಕರಣದಲ್ಲಿ ಒಟ್ಟು 47 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಸೂರ್ಯನಗರ ಪೊಲೀಸ್ ಠಾಣೆಗೆ ಸಂಬಧಿಸಿದಂತೆ 1 ಕೆ.ಜಿ.30 ಗ್ರಾಂ ಚಿನ್ನ ಸೇರಿದಂತೆ 59 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆ 25 ಮೊಬೈಲ್ ,9 ದ್ವಿಚಕ್ರ ವಾಹನ,1 ಸುಲಿಗೆ ಪ್ರಕರಣದಲ್ಲಿ ಒಟ್ಟು 5 ಲಕ್ಷ 25 ಸಾವಿರ ರೂಗಳ ಮಾಲನ್ನು ವಶಕ್ಕೆ ಪಡೆಯಲಾಗಿದೆ.
ಬನ್ನೇರುಘಟ್ಟ ಪೊಲೀಸ್ ಠಾಣೆ 2 ದ್ವಿಚಕ್ರ ವಾಹನ, 1 ಮನೆ ಕಳ್ಳತನ ಪ್ರಕರಣದಲ್ಲಿ ಒಟ್ಟು ಆರು ಲಕ್ಷ ರೂ.ಗಳ ಮಾಲನ್ನು ವಶಕ್ಕೆ ಪಡೆದಿದ್ದು, ಸರ್ಜಾಪುರ ಪೊಲೀಸ್ ಠಾಣೆ 11 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಕಾರ್ಯಾಚರಣೆಯಿಂದ ವಶಕ್ಕೆ ಪಡೆದ ವಸ್ತುಗಳನ್ನು ಕೇಂದ್ರ ವಲಯದ ಐ.ಜಿ.ಚಂದ್ರಶೇಖರ್, ಎಸ್ಪಿ ವಂಶಿ ಕೃಷ್ಣ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ
ಕೊವಿಡ್ ವೇಳೆ ಕ್ರೈಂ ರೇಟ್ ಕಡಿಮೆಯಾಗಿತ್ತು, ಲಾಕ್ಡೌನ್ ತೆರವು ಬಳಿಕ ಜಾಸ್ತಿಯಾಗ್ತಿದೆ: ಗೃಹ ಸಚಿವ ಬಸರಾಜ ಬೊಮ್ಮಾಯಿ
ಕಾರಿನ ಬಾನೆಟ್ ಮೇಲೆ ಕುಳಿತು ಕಲ್ಯಾಣ ಮಂಟಪಕ್ಕೆ ಬಂದ ವಧು; ವಿಡಿಯೋ ನೋಡಿ ಕೇಸ್ ಜಡಿದ ಪೊಲೀಸರು
(Anekal Police arrests 56 culprits in a massive attack today)
Published On - 12:44 pm, Wed, 14 July 21




