ಕೊವಿಡ್ ವೇಳೆ ಕ್ರೈಂ ರೇಟ್ ಕಡಿಮೆಯಾಗಿತ್ತು, ಲಾಕ್​ಡೌನ್​ ತೆರವು ಬಳಿಕ ಜಾಸ್ತಿಯಾಗ್ತಿದೆ: ಗೃಹ ಸಚಿವ ಬಸರಾಜ ಬೊಮ್ಮಾಯಿ ಆತಂಕ

ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಚಾಲೆಂಜ್ ನಮಗಿದೆ. 50 ಕೋಟಿ ಅಷ್ಟು ಡ್ರಗ್ ನಾಶ ಮಾಡಿದ್ದೇವೆ. 5 ವರ್ಷದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದೆ. ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸವಾಗುತ್ತಿದೆ. ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್​ನಲ್ಲಿ ಬರುತ್ತಿವೆ. ಬಹಳ ಸೆಕ್ಯುರಿಟಿನಲ್ಲಿ ಬರುತ್ತಿದೆ.

ಕೊವಿಡ್ ವೇಳೆ ಕ್ರೈಂ ರೇಟ್ ಕಡಿಮೆಯಾಗಿತ್ತು, ಲಾಕ್​ಡೌನ್​ ತೆರವು ಬಳಿಕ ಜಾಸ್ತಿಯಾಗ್ತಿದೆ: ಗೃಹ ಸಚಿವ ಬಸರಾಜ ಬೊಮ್ಮಾಯಿ ಆತಂಕ
ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 14, 2021 | 3:07 PM

ಮೈಸೂರು: ಕೊರೊನಾ ಸಮಯದಲ್ಲಿ ಕ್ರೈಂ ರೇಟ್ ಕಡಿಮೆಯಾಗಿತ್ತು. ಲಾಕ್​ಡೌನ್ (Lockdown)​ ತೆರವು ಬಳಿಕ ಜಾಸ್ತಿಯಾಗುತ್ತಿದೆ ಎಂದು ಹೇಳಿಕೆ ನೀಡಿದ ಗೃಹ ಸಚಿವ ಬಸರಾಜ ಬೊಮ್ಮಾಯಿ, ಸರಗಳ್ಳತನ, ದರೋಡೆಯಂತಹ ಪ್ರಕರಣಗಳು ಲಾಕ್​ಡೌನ್​ ಮುಗಿದ ಬಳಿಕ ಕಂಡುಬರುತ್ತಿದೆ. ಮೈಸೂರು ನಗರದಲ್ಲಿ ಸರಗಳ್ಳತನ ಇತ್ತು, ಆದರೆ ಈಗ ಗ್ರಾಮೀಣ ಭಾಗದಲ್ಲೂ ಸರಗಳ್ಳತನ ಹೆಚ್ಚಾಗಿದೆ ಎಂದು ಹೇಳಿದರು.

ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಚಾಲೆಂಜ್ ನಮಗಿದೆ. 50 ಕೋಟಿ ಅಷ್ಟು ಡ್ರಗ್ ನಾಶ ಮಾಡಿದ್ದೇವೆ. 5 ವರ್ಷದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದೆ. ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸವಾಗುತ್ತಿದೆ. ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್​ನಲ್ಲಿ ಬರುತ್ತಿವೆ. ಬಹಳ ಸೆಕ್ಯುರಿಟಿನಲ್ಲಿ ಬರುತ್ತಿದೆ. ಇದನ್ನ ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿದ್ದಾರೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಬಹಳಷ್ಟು ಸಾರಿ ಸಾಮಾನ್ಯ ಪೋಸ್ಟ್​ನಲ್ಲಿ ಡ್ರಗ್ಸ್ ಸರಬರಾಜಾಗುತ್ತದೆ. ಡ್ರಗ್ ಕೇಸ್​ಗೆ ಸಂಬಂಧಿಸಿ ವಿದೇಶಿಗರ ಬಂಧನವಾಗಿದೆ. ಕಳೆದ ವರ್ಷದಲ್ಲಿ 15ರಿಂದ 20 ಮಂದಿ ಬಂಧನವಾಗಿದೆ. ಈ ಪೈಕಿ ಆಫ್ರಿಕನ್ಸ್ ಹೆಚ್ಚಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಬಸರಾಜ ಬೊಮ್ಮಾಯಿ ತಿಳಿಸಿದರು. ಇನ್ನು ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಹುದ್ದೆ ರೇಸ್​ನಲಿಲ್ಲ. ನಾನು ಈಗ ಗೃಹ ಸಚಿವನಾಗಿದ್ದೇನೆ. ಇದರಲ್ಲೇ ಇರುತ್ತೇನೆ, ಇಷ್ಟೇ ಸಾಕು ನನಗೆ ಎಂದು ಹೇಳಿದ್ದಾರೆ.

ಕೊರೊನಾ ನಿಯಂತ್ರಣ ವೇಳೆಯಲ್ಲಿ ಪೊಲೀಸರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 3ರಿಂದ 4 ಸಾವಿರ ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎಲ್ಲರ ಆರೋಗ್ಯದ ಕಡೆಗೂ ಗಮನವಹಿಸಲಾಗುತ್ತಿದೆ. ಸಾವಿನ ಸಂಖ್ಯೆ ಕಡಿಮೆ ಇದೆ. ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 30ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ಮಾತನಾಡಿದ ಗೃಹ ಸಚಿವ, ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಲಂಚ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕೆಲಸಕ್ಕೆಲ್ಲ ಕಡಿವಾಣ ಹಾಕಲಾಗುತ್ತಿದೆ. ಇದು ಹಳೆಯ ಪದ್ಧತಿ, ಆದರೆ ಇದಕ್ಕೆ ನಮ್ಮ ಸರ್ಕಾರ ಕಡಿವಾಣ ಹಾಕಿದೆ. ಪೊಲೀಸ್ ಬೋರ್ಡ್ ಬಂದ ಮೇಲೆ ಹಳೆಯ ಮಾದರಿಯ ವರ್ಗಾವಣೆಯಲ್ಲಿ ವ್ಯವಹಾರ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ನವ್ಯಾ ನವೇಲಿ ನಂದಾಗೆ ಶನಾಯ ಕಪೂರ್ ಅವರ ಬೆಲ್ಲಿ ಡ್ಯಾನ್ಸ್ ವಿಡಿಯೋ ನೋಡಿ “ಹೊಟ್ಟೆ ನೋವು” ಬಂದದ್ದು ಯಾಕೆ?

ಜುಲೈ 19ರ ನಂತರವಾದರೂ ಪಬ್ ತೆರೆಯಲು ಅನುಮತಿ ನೀಡಿ; ರಾಜ್ಯ ಸರ್ಕಾರಕ್ಕೆ ಬಾರ್ ಆ್ಯಂಡ್ ಪಬ್ ಅಸೋಸಿಯೇಷನ್ ಮನವಿ

(Basavaraj Bommai says Crime rate is low in covid time but now increasing the Crime rate)

Published On - 11:39 am, Wed, 14 July 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?