ಕೊಡಗು, ಮಾರ್ಚ್ 19: ರೈಫಲ್ನಿಂದ ಗುಂಡು ಹಾರಿ (Rifle Firing) ವ್ಯಕ್ತಿ ಮೃತಪಟ್ಟಿರುವ ಘಟನೆ ಕೊಡಗು-ಮೈಸೂರು (Kodagu-Mysore) ಗಡಿ ಗ್ರಾಮ ಗಿರಗೂರಿನಲ್ಲಿ ನಡೆದಿದೆ. ಕುಶಾಲನಗರದ (Kushalnagar) ಹಾರಂಗಿ ನಿವಾಸಿ ಸಂತೋಷ್ (34) ಮೃತ ದುರ್ದೈವಿ. ಪಾಯಿಂಟ್ 22 ರೈಫಲ್ನಿಂದ ಗುಂಡು ಹಾರಿದೆ. ಗುಂಡು ಸಂತೋಷ್ ತಲೆ ಸೀಳಿದ್ದು, ಪ್ರಾಣ ಪಕ್ಷಿ ಹಾರಿ ಹೋಗಿದೆ. ಕಾವೇರಿ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ಸಂತೋಷ್ ಜೊತೆ ಇದ್ದ ರವಿ, ನೂತನ್, ಶರತ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಕುಶಾಲನಗರ ಟೌನ್ ಮತ್ತು ಬೈಲುಕುಪ್ಪೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಮಾಡಲಾಗುತ್ತಿದೆ….
Published On - 9:55 am, Wed, 20 March 24