ಬಾಳು ಕೊಡುವುದಾಗಿ ನಂಬಿಸಿ ಮಹಿಳೆಯಿಂದ 10 ಲಕ್ಷ ರೂ ವಂಚನೆ ಆರೋಪ: ಕುಟುಂಬಸ್ಥರಿಂದ ಧರಣಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬಾಳು ಕೊಡುವುದಾಗಿ ನಂಬಿಸಿ ಮಹಿಳೆಯಿಂದ ಲಕ್ಷ ಲಕ್ಷ ರೂ. ಹಣ ಪಡೆದು ವಂಚನೆ ಮಾಡಿರುವಂತಹ ಘಟನೆ ನಡೆದಿದೆ. ಮಹಿಳೆಗೆ ತವರು ಮನೆಯಿಂದ ಬಂದಿದ್ದ 10 ಲಕ್ಷ ರೂ. ಹಣ ಹಾಗೂ ಒಡವೆಗಳನ್ನ ಪಡೆದಿದ್ದು, ಮಹಿಳೆಗೆ ಮನೆ ಕಟ್ಟಿಕೊಡುವುದಾಗಿ ಹಣ ಪಡೆದು ಇದೀಗ ಬೀದಿಗೆ ತಳ್ಳಿದ ಆರೋಪ ಮಾಡಲಾಗಿದೆ.
ದೇವನಹಳ್ಳಿ, ಮಾರ್ಚ್ 20: ಬಾಳು ಕೊಡುವುದಾಗಿ ನಂಬಿಸಿ ಮಹಿಳೆ (woman) ಯಿಂದ ಲಕ್ಷ ಲಕ್ಷ ರೂ. ಹಣ ಪಡೆದು ವಂಚನೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ. ಮಹಿಳೆಗೆ ತವರು ಮನೆಯಿಂದ ಬಂದಿದ್ದ 10 ಲಕ್ಷ ರೂ. ಹಣ ಹಾಗೂ ಒಡವೆಗಳನ್ನ ಪಡೆದಿದ್ದು, ಜೊತೆಗೆ ಮಹಿಳೆಗೆ ಮನೆ ಕಟ್ಟಿಕೊಡುವುದಾಗಿ ನಂಬಿಸಿ ಹಣ ಪಡೆದು ಬೀದಿಗೆ ತಳ್ಳಿದ ಆರೋಪ ಮಾಡಲಾಗಿದೆ. ಇದೀಗ ವಂಚಿಸಿರುವ ಪುರುಷೋತ್ತಮ್ ಎಂಬ ವ್ಯಕ್ತಿ ಮನೆ ಮುಂದೆ ತಮಟೆ ಹೊಡೆಯುವ ಮೂಲಕ ಮಹಿಳೆ ಕುಟುಂಬಸ್ಥರಿಂದ ಧರಣಿ ಮಾಡಲಾಗುತ್ತಿದೆ.
ವಂಚನೆ ಮಾಡಿದ ಪುರುಷೊತ್ತಮ್ನ ವಿರುದ್ದ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಮಹಿಳೆ ಒತ್ತಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗಂಡ ಹೆಂಡತಿಯಂತೆ ಒಂದೇ ಮನೆಯಲ್ಲಿದ್ದರು. ಕುಟುಂಬಸ್ಥರ ಜೊತೆ ಆಗಮಿಸಿ ವಂಚನೆ ಮಾಡಿದ್ದಾನೆ ಅಂತ ನೊಂದ ಮಹಿಳೆ ಧರಣಿ ನಡೆಸಿದ್ದಾರೆ.
ಆನ್ ಲೈನ್ನಲ್ಲಿ ಒಂದೂವರೆ ಕೋಟಿ ರೂ. ವಂಚನೆ
ಬೆಳಗಾವಿ: ಇತ್ತಿಚೀನ ದಿನಗಳಲ್ಲಿ ಆನ್ ಲೈನ್ನಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪೊಲೀಸರು ಎಷ್ಟೇ ತಿಳಿ ಹೇಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೂ ಸೈಬರ್ ವಂಚನೆ ಪ್ರಕರಣಗಳು ಮಾತ್ರ ನಿಲ್ತಿಲ್ಲ. ಜನ ಮೋಸ ಹೋಗುವುದು ತಪ್ಪುತ್ತಿಲ್ಲ. ಕಳೆದ ಒಂದು ತಿಂಗಳ ಅವಧಿಯಲ್ಲಿ ಇದೇ ರೀತಿ ಬೆಳಗಾವಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು ಬರೋಬ್ಬರಿ ಒಂದೂವರೆ ಕೋಟಿ ರೂ. ಹಣ ಪಂಗನಾಮ ಹಾಕಿದ್ದಾರೆ. ಇಲ್ಲಿ ಮೋಸ ಹೋಗಿದ್ದು ಇಬ್ಬರು ಇಂಜಿನಿಯರ್ ಮತ್ತು ಓರ್ವ ಉದ್ಯಮಿ.
ಇದನ್ನೂ ಓದಿ: ಪಕ್ಕದ ಮನೆ ದಂಪತಿಯ ಸರಸ ಸಲ್ಲಾಪದಿಂದ ಕಿರಿಕಿರಿ, ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ
ಇಲ್ಲಿ ಮೂರು ಜನ ಯಾವ ರೀತಿಯಾಗಿ ಮೋಸ ಹೋಗಿದ್ದಾರೆ ಅನ್ನೋದನ್ನ ನೋಡೊದಾದ್ರೆ ಚಿಕ್ಕೋಡಿ ತಾಲೂಕಿನ ಖಡಕಲಾಟ್ ಗ್ರಾಮ ನಿವಾಸಿ ಇಂಜಿನಿಯರ್ ಶಿವರಾಜ್ ಗೆ 75.20 ಲಕ್ಷ ರೂ. ಪಂಗನಾಮ ಹಾಕಿದ್ದಾರೆ. ಫೇಸ್ಬುಕ್ನಲ್ಲಿ ಬಂದ ಜಾಹೀರಾತು ರೀಲ್ಸ್ ನೋಡಿ ಮೋಸ ಹೋಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿದ್ರೆ ಒಂದೇ ದಿನದಲ್ಲಿ ಶೇ.10 ಪಟ್ಟು ಲಾಭ ಅಂತಾ ನೋಡಿದ್ದಾರೆ. ಬೆನ್ ಕ್ಯಾಪಿಟಲ್, ಡಿಎನ್ ಪಿ ಕ್ಯಾಪಿಟಲ್ ನಲ್ಲಿ ಹಣ ವಿನಿಯೋಗಿಸಿದ್ರೆ ಹೆಚ್ಚಿನ ಲಾಭ ಅಂತಾ ನಂಬಿಸಿದ್ದ ಖದೀಮರು.
ಇದನ್ನೂ ಓದಿ: ವಿಜಯಪುರ: ಅನೈತಿಕ ಸಂಬಂಧದ ಶಂಕೆ; ಮಾರಕಾಸ್ತ್ರಗಳಿಂದ ಕೊಚ್ಚಿ ಜೋಡಿ ಕೊಲೆ
ಜಾಹೀರಾತು ನಂಬಿ ಅವರದ್ದೆ ಆದ ವಾಟ್ಸಪ್ ಗ್ರೂಪ್ ಗೆ ಸೇರಿ ಪ್ರೊಫೈಲ್ ಐಡಿ ಕ್ರಿಯೆಟ್ ಮಾಡಿಕೊಂಡಿದ್ದಾರೆ. ಮೊದಲ ದಿನ 10 ಸಾವಿರ ಹಣ ಶಿವರಾಜ್ ಹಾಕಿದ್ದ ಅದೇ ದಿನ ಒಂದು ಲಕ್ಷ ಆತನ ಖಾತೆಗೆ ಹಾಕಿ ನಂಬಿಸಿದ್ದ ವಂಚಕರು. ಬ್ಯಾಂಕ್ ಗೆ ಹೋಗಿ ಹಣ ವಿಥ್ ಡ್ರಾ ಮಾಡಿಕೊಂಡು ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಲಾಭ ಹಾಗೂ ಕಂಪನಿ ನೈಜತೆ ಬಗ್ಗೆ ವಿವರಿಸಿದ್ದಾರೆ ಇದಕ್ಕೆ ಕುಟುಂಬಸ್ಥರು ಸಕಾರಾತ್ಮಕವಾಗಿ ಸ್ಪಂದಿಸ್ತಾರೆ ಇದಾದ ಬಳಿಕ ಶಿವರಾಜ್ ಹಂತಹಂತವಾಗಿ 5 ಲಕ್ಷ, 10 ಲಕ್ಷ ರೂ. ಹಾಕ್ತಾ ಬರೋಬ್ಬರಿ 75 ಲಕ್ಷ ರೂ. ಹಣವನ್ನ ಶಿವರಾಜ್ ಹಾಕಿದ್ದಾನೆ ಇದರಲ್ಲಿ ಮರಳಿದ್ದು ಕೇವಲ 1 ಲಕ್ಷ 97 ಸಾವಿರ ರೂಪಾಯಿ ಮಾತ್ರ. ಹೀಗೆ ಹಣ ಹೋದ ಬಳಿಕ ಇವರನ್ನ ವಾಟ್ಸಪ್ ಗ್ರೂಪ್ ದಿಂದ ರಿಮ್ಯೂವ್ ಮಾಡಿದ್ದಾರೆ. ಇದ್ದ ನಂಬರ್ ಗಳಿಗೆ ಕಾಂಟೆಕ್ಟ್ ಮಾಡಿದ್ರೆ ಸ್ಪಂದನೆ ಸಿಗದಿದ್ದಾಗ ಸಿಇಎನ್ ಠಾಣೆಗೆ ಬಂದು ದೂರು ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 am, Wed, 20 March 24