ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಬೆಂಗಳೂರಿನ ಜೆ.ಪಿ.ನಗರದ 3ನೇ ಹಂತದಲ್ಲಿ ವಾಸವಾಗಿರುವ ಕುಟುಂಬದ ಮೂವರು ಸದಸ್ಯರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಮಾರ್ಚ್ 20: ಒಂದೇ ಕುಟುಂಬದ ಮೂವರು ಬೆಂಕಿ (Fire) ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಜೆ.ಪಿ.ನಗರದ (JP Nagar) 3ನೇ ಹಂತದಲ್ಲಿ ನಡೆದಿದೆ. ತಾಯಿ ಸುಕನ್ಯಾ (48), ಮಕ್ಕಳಾದ ನಿಖಿತ್, ನಿಶಿತ್ (28) ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಸ್ಥಳೀಯರು ಮತ್ತು ಸಂಬಂಧಿಕರಿಂದ ಮಾಹಿತಿ ಪಡೆಯುತ್ತಿದ್ದಾರೆ. ಉಡುಪಿ ಮೂಲದ ಅಂಬಲಪಾಡಿ ನಿವಾಸಿಗಳಾಗಿರುವ ಕುಟುಂಬ, ಜೆಪಿ ನಗರದಲ್ಲಿ ವಾಸವಾಗಿದ್ದರು. ನಿನ್ನೆ (ಮಾ.19) ರ ಸಂಜೆ ಮನೆಯಲ್ಲಿ ಪತಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗಳು ಸಾಲ ವಾಪಾಸ್ ಕೇಳಿದ್ದರಂತೆ. ಖಾಸಗಿ ಬ್ಯಾಂಕ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸ್ಥಳಕ್ಕೆ ಎಫ್ಎಸ್ಎಲ್ ಸಿಬ್ಬಂದಿ ಮತ್ತು ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಕೌಟುಂಬಿಕ ಕಲಹಕ್ಕೆ ಬೇಸತ್ತು ಎರಡು ವರ್ಷದ ಮಗುವನ್ನು ಕೊಂದು, ತಾಯಿ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸಿಗೇಹಳ್ಳಿಯಲ್ಲಿ ನಡೆದಿದೆ. ಶೃತಿಕಾಳ ಮೃತ ಮಗು. ಚಿನ್ನಾ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಆಂಧ್ರಪ್ರದೇಶದ ಚಿತ್ತೂರು ಮೂಲದ ಚಿನ್ನಾ ಮತ್ತು ಲಕ್ಷ್ಮೀ ನಾರಾಯಣ ದಂಪತಿ, ಮೂರು ತಿಂಗಳ ಹಿಂದೆ ಸೀಗೆಹಳ್ಳಿಗೆ ಬಂದು ವಾಸವಿದ್ದರು.
ಇದನ್ನೂ ಓದಿ: ಹೊಳೆನರಸೀಪುರದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ಯುವಕ ಸಾವು
ಪತಿ ಲಕ್ಷ್ಮೀನಾರಾಯಣ ಪತ್ನಿ ಚಿನ್ನಾಗೆ ಪ್ರತಿದಿನ ಹಿಂಸೆ ನೀಡುತ್ತಿದ್ದನು. ಪತಿ ಲಕ್ಷ್ಮೀನಾರಾಯಣನ ಕಾಟಕ್ಕೆ ಚಿನ್ನಾ ಬೇಸತ್ತಿದ್ದಳು. ಮಾರ್ಚ್ 16 ರ ರಾತ್ರಿ ಲಕ್ಷ್ಮೀನಾರಾಯಣ ಪತ್ನಿ ಜೊತೆ ಜಗಳವಾಡಿದ್ದಾನೆ. ಇದರಿಂದ ಮನನೊಂದು ಚಿನ್ನಾ ಮರುದಿನ ಮಾರ್ಚ್ 17 ರ ಬೆಳಿಗ್ಗೆ ಮಗು ಶೃತಿಕಾಳ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಚೂರಿಯಿಂದ ಕತ್ತು ಸೀಳಿಕೊಂಡು ಆತ್ಮಹತ್ಯಗೆ ಯತ್ನಿಸಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಮನೆಯೊಳಗೆ ನುಗ್ಗಿ, ತಕ್ಷಣ ಚಿನ್ನಾಳನ್ನ ಆಸ್ಪತ್ರೆಗೆ ದಾಖಲಸಿದ್ದಾರೆ. ಆಸ್ಪತ್ರೆಯಲ್ಲಿ ಚಿನ್ನಾಗೆ ಚಿಕಿತ್ಸೆ ಮುಂದುವರೆದಿದೆ. ಕೆ.ಆರ್.ಪುರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರೀತಿ ವಿಚಾರವಾಗಿ ಮನನೊಂದ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ನೆಲಮಂಗಲ: ಪ್ರೀತಿ ವಿಚಾರವಾಗಿ ಮನನೊಂದ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿನಕುಂಟೆಯಲ್ಲಿ ನಡೆದಿದೆ. ಕೇರಳ ಮೂಲದ ಸೋನುಕುಮಾರ್ (19) ಮೃತ ದುರ್ದೈವಿ. ಮನೆಯ ಕೋಣೆಯಲ್ಲಿನ ಪ್ಯಾನ್ಗೆ ನೇಣುಬಿಗಿದುಕೊಂಡು ಸೋನುಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 am, Wed, 20 March 24