ಕೋಲಾರ: ಇ-ಕೆವೈಸಿಗೆ ಗ್ರಾಹಕರಿಂದ ಭಾರತ್ ಗ್ಯಾಸ್ ಏಜೆನ್ಸಿಯಿಂದ ಲಂಚ ವಸೂಲಿ; ವಿಡಿಯೋ ವೈರಲ್

ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿಯು ಇ-ಕೆವೈಸಿ ಮಾಡಿಸಲು ಬರುವ ಗ್ರಾಹಕರಿಂದ ಲಂಚ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಚಿತವಾಗಿ ಇ-ಕೆವೈಸಿ ಮಾಡುವ ನಿರ್ದೇಶನವಿದ್ದರೂ ಹಣ ವಸೂಲಿ ಮಾಡಲಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕೋಲಾರ: ಇ-ಕೆವೈಸಿಗೆ ಗ್ರಾಹಕರಿಂದ ಭಾರತ್ ಗ್ಯಾಸ್ ಏಜೆನ್ಸಿಯಿಂದ ಲಂಚ ವಸೂಲಿ; ವಿಡಿಯೋ ವೈರಲ್
ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ಭಾರತ್ ಗ್ಯಾಸ್ ಎಜೆನ್ಸಿ (ಎಡಚಿತ್ರ) ಮತ್ತು ಕ್ಯಾಸಂಬಳ್ಳಿ ಗ್ರಾಮ‌ ಪಂಚಾಯಿತಿಯಲ್ಲಿ ಲಂಚ ಪಡೆಯುತ್ತಿರುವ ಬಿಲ್ ಕಲೆಕ್ಟರ್ (ಬಲಚಿತ್ರ)
Edited By:

Updated on: Jan 12, 2024 | 9:31 AM

ಕೋಲಾರ, ಜ.12: ಉಚಿತವಾಗಿ ಇ-ಕೆವೈಸಿ ಮಾಡುವ ನಿರ್ದೇಶನವಿದ್ದರೂ ಅಡುಗೆ ಅನಿಲ ಗ್ರಾಹಕರಿಂದ ಭಾರತ್ ಗ್ಯಾಸ್ (Bharat Gas) ಏಜನ್ಸಿ ಲಂಚ ವಸೂಲಿ ಮಾಡುತ್ತಿರುವ ಆರೋಪ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕೇಳಿಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ.

ಪಟ್ಟಣದಲ್ಲಿ ಸಾವಿರಾರು ಗ್ರಾಹಕರಿದ್ದು, ಪ್ರತಿ ಗ್ರಾಹಕರಿಂದ 20 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸದ್ಯ ಹಣ ವಸೂಲಿ ವಿಡಿಯೋ ವೈರಲ್ ಆಗುತ್ತಿದ್ದು, ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳು ಎಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆ‌ಯಿಟ್ಟಿದ್ದ ಸರ್ಕಾರಿ ವೈದ್ಯ ಲೋಕಾಯುಕ್ತ ಬಲೆಗೆ

ಗ್ರಾಮ ಪಂಚಾಯ್ತಿಯಲ್ಲಿ ಲಂಚಾವತಾ: ವಿಡಿಯೋ ವೈರಲ್,

ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮ‌ ಪಂಚಾಯಿತಿಯಲ್ಲಿ ಪಿಡಿಓ‌ ಮತ್ತು ಬಿಲ್ ಕಲೆಕ್ಟರ್ ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಇ-ಖಾತೆಯ ಮರು ಪ್ರಿಂಟ್ ನೀಡಲು ಪಿಡಿಓ ರಶ್ಮಿ ಹಾಗೂ ಬಿಲ್ ಕಲೆಕ್ಟರ್ ಸುಬ್ರಮಣಿ ಅವರು 50 ರೂಪಾಯಿ ಸರ್ಕಾರಿ ಶುಲ್ಕದ ಬದಲಾಗಿ ಮೂರು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪಿಡಿಓ‌ ರಶ್ಮಿ ಅವರ ಸೂಚನೆ ಹಿನ್ನೆಲೆ ಲಂಚಕ್ಕೆ ಬೇಡಿಕೆ ಇಡಲಾಗಿದೆ. ನಾಗಲೇಪಲ್ಲಿ ಗ್ರಾಮದ ಅನೂಪ್ ಎಂಬುವರಿಂದ ಲಂಚ ಸ್ವೀಕರಿಸಲಾಗಿದೆ. ಪಿಡಿಓ‌ ರಶ್ಮಿ ಹಣ ಪಡೆಯುವಂತೆ ತಿಳಿಸಿದ ಹಿನ್ನೆಲೆ ಹಣ ಪಡೆದಿರುವುದಾಗಿ ಹೇಳಿದ‌‌ ಆಡಿಯೋ‌ ಕೂಡ ವೈರಲ್ ಆಗಿದೆ. ಅಧಿಕಾರಿಗಳ ‌ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ