ಕೋಲಾರ: ವಿದ್ಯುತ್ ಪ್ರವಹಿಸಿ ಸಹೋದರರಿಬ್ಬರ ಸಾವು

| Updated By: ವಿವೇಕ ಬಿರಾದಾರ

Updated on: Nov 04, 2022 | 3:50 PM

ವಿದ್ಯುತ್ ಸ್ಪರ್ಶದಿಂದ ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಕೆಜಿಎಫ್​ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.

ಕೋಲಾರ:  ವಿದ್ಯುತ್ ಪ್ರವಹಿಸಿ ಸಹೋದರರಿಬ್ಬರ ಸಾವು
ಪ್ರಾತಿನಿಧಿಕ ಚಿತ್ರ
Follow us on

ಕೋಲಾರ: ವಿದ್ಯುತ್ ಸ್ಪರ್ಶದಿಂದ ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಕೆಜಿಎಫ್​ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀಸಾಗರ ಗ್ರಾಮದ ರಮೇಶ್(30), ಮುರಳಿ(28) ಮೃತ ಸಹೋದರರು. ತೋಟವೊಂದಕ್ಕೆ ಅಳವಡಿಸಿದ್ದ ಸೌರ ಬೇಲಿ ಮೇಲೆ ವಿದ್ಯುತ್ ತಂತಿ ಬಿದ್ದಿತ್ತು. ಇದನ್ನು ತಿಳಿಯದೆ ಅಣ್ಣ ಸೌರ ಬೇಲಿ ಮುಟ್ಟಿದ್ದಾರೆ. ಆಗ ತಮ್ಮ, ಅಣ್ಣನನ್ನು ರಕ್ಷಣೆ ಮಾಡಲು ಹೋಗಿದ್ದು, ಅಣ್ಣ ಮತ್ತು ತಮ್ಮ ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಇಬ್ಬರನ್ನು ಕಳೆದುಕೊಂಡು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕ್ರೇನ್ ಹರಿದು ವಿದ್ಯಾರ್ಥಿನಿ ಸಾವು: ರಸ್ತೆ ತಡೆದು ಪ್ರತಿಭಟನೆ

ಬೆಂಗಳೂರು: ಕ್ರೇನ್ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗೇಟ್ ಬಳಿ ನಡೆದಿದೆ. ನೂರ್ ಫಿಜ ಮೃತ ವಿದ್ಯಾರ್ಥಿನಿ. (ನ. 2) ರಂದು ವಿದ್ಯಾರ್ಥಿನಿ ನೂರ್ ಫಿಜ ಕಾಲೇಜಿನಿಂದ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಳು. ಈ ವೇಳೆ ಹಿಂಬದಿಯಿಂದ ಬಂದ ಕ್ರೇನ್ ವಿದ್ಯಾರ್ಥಿನಿ ಮೇಲೆ ಹರಿದಿದೆ.

ಇದರಿಂದ ತೀರ್ವ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ವೈಟ್ ಫೀಲ್ಡ್ ಖಾಸಗಿ ಅಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ನಿನ್ನೆ (ನ. 3) ರಂದು ಸಾವನ್ನಪ್ಪಿದ್ದಾಳೆ.

ಈ ಸಂಬಂಧ ವೈಟ್ ಫೀಲ್ಡ್ ಹೊಸಕೋಟೆ ರಸ್ತೆಯ ಕನ್ನಮಂಗಲ ಬಳಿ ಸ್ಥಳಿಯರು ಪ್ರತಿಭಟನೆ ಮಾಡುತ್ತಿದ್ದಾರೆ. ಕನ್ನಮಂಗಲ ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್​ನ್ನು ಅಧಿಕಾರಿಗಳು ಈ ಹಿಂದೆ ತೆರವುಗೊಳಿಸಿದ್ದರು. ಇದರಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಈಗ ರಸ್ತೆಯ ಪುಟ್ ಪಾತ್ ಒತ್ತುವರಿ ತೆರವುಗೊಳಿಸಿ ಸ್ಪೀಡ್ ಬ್ರೇಕರ್ ಹಾಕುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Fri, 4 November 22