ಪತ್ನಿ, ಮಕ್ಕಳ ಎದುರೇ ತಾ.ಪಂ. ಮಾಜಿ ಸದಸ್ಯನ ಎದೆಗೆ ಗುಂಡಿಕ್ಕಿ ಹತ್ಯೆ
ಬೆಳಗಾವಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಹಾಡಹಗಲೇ ಗುಂಡುಹಾರಿಸಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯನ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಚಿಂತಪ್ಪ ರಾಮಪ್ಪ ಮೇಟಿಯನ್ನು ಸೋದರ ಸಂಬಂಧಿ ಗೋಪಯ್ಯ ಮೇಟಿ ಹತ್ಯೆ ಮಾಡಿದ್ದಾನೆ. ಹಲವು ದಿನಗಳಿಂದ ಜಮೀನು ವಿಚಾರವಾಗಿ ಸಹೋದರ ಸಂಬಂಧಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಜಮೀನು ವಿವಾದ ಸಂಬಂಧ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಜಗಳ ತಾರಕಕ್ಕೇರಿ ಹೆಂಡತಿ, ಮಕ್ಕಳ ಎದುರೇ ಚಿಂತಪ್ಪನ ಎದೆಗೆ ಗುಂಡಿಕ್ಕಿ ಕೊಂದು […]
ಬೆಳಗಾವಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಹಾಡಹಗಲೇ ಗುಂಡುಹಾರಿಸಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯನ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಚಿಂತಪ್ಪ ರಾಮಪ್ಪ ಮೇಟಿಯನ್ನು ಸೋದರ ಸಂಬಂಧಿ ಗೋಪಯ್ಯ ಮೇಟಿ ಹತ್ಯೆ ಮಾಡಿದ್ದಾನೆ.
ಹಲವು ದಿನಗಳಿಂದ ಜಮೀನು ವಿಚಾರವಾಗಿ ಸಹೋದರ ಸಂಬಂಧಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಜಮೀನು ವಿವಾದ ಸಂಬಂಧ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಜಗಳ ತಾರಕಕ್ಕೇರಿ ಹೆಂಡತಿ, ಮಕ್ಕಳ ಎದುರೇ ಚಿಂತಪ್ಪನ ಎದೆಗೆ ಗುಂಡಿಕ್ಕಿ ಕೊಂದು ಆರೋಪಿ ಗೋಪಯ್ಯ ಭೀಮಪ್ಪ ಮೇಟಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಘಟಪ್ರಭಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಾರಿಯಾದ ಆರೋಪಿ ಗೋಪಯ್ಯ ಭೀಮಪ್ಪ ಮೇಟಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Published On - 5:34 pm, Fri, 1 May 20