ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಕ್ಕೆ ವ್ಯಕ್ತಿಯೊಬ್ಬ ಲಿವ್-ಇನ್ ಸಂಗಾತಿಯ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಗಢದಲ್ಲಿ ನಡೆದಿದೆ. ಯುವತಿಯನ್ನು ಕೊಂದು ಆಕೆಯ ದೇಹವನ್ನು ಗುಜರಾತ್ನ ವಲ್ಸಾದ್ ತೊರೆಯಲ್ಲಿ ಎಸೆದುಬಂದಿದ್ದ, ಅದಕ್ಕೆ ಆತನ ಪತ್ನಿಯೂ ಸಹಾಯ ಮಾಡಿದ್ದಳು. ಮೇಕಪ್ ಕಲಾವಿದೆಯಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ನೈನಾ ಮಹತ್ ಎಂದು ಪೊಲೀಸರು ಗುರುತಿಸಿದ್ದಾರೆ. ಆಕೆ ಆರೋಪಿ ಮನೋಹರ್ ಶುಕ್ಲಾ ಜತೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಳು, ಶುಕ್ಲಾ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ.
ನೈನಾ ತನ್ನನ್ನು ಮದುವೆಯಾಗುವಂತೆ ಶುಕ್ಲಾಗೆ ಪದೇ ಪದೇ ಒತ್ತಾಯಿಸುತ್ತಿದ್ದಳು, ಆತ ನಿರಾಕರಿಸಿದಾಗ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು. ಪ್ರಕರಣವನ್ನು ಹಿಂಪಡೆಯುವಂತೆ ಶುಕ್ಲಾ ಕೇಳಿಕೊಂಡಿದ್ದು, ಆಕೆ ನಿರಾಕರಿಸಿದಾಗ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಕೆಯನ್ನು ಕೊಲೆ ಮಾಡಿ ನಂತರ ವಲ್ಸಾದ್ ತೊರೆಯಲ್ಲಿ ಎಸೆಯುವ ಮೊದಲು ಸೂಟ್ಕೇಸ್ನಲ್ಲಿ ತುಂಬಲು ತನ್ನ ಹೆಂಡತಿಯ ಸಹಾಯ ಕೋರಿದ್ದ, ಘಟನೆ ಆಗಸ್ಟ್ 9ರಂದು ನಡೆದಿದೆ.
ನೈನಾ ಕುಟುಂಬವು ಮಗಳು ಕಾಣೆಯಾಗಿರುವ ಬಗ್ಗೆ ಆಗಸ್ಟ್ 12ರಂದು ದೂರು ಸಲ್ಲಿಸಿದ್ದಳು. ನೈನಾ ಫೋನ್ ಸ್ವಿಚ್ಡ್ ಆಫ್ ಆಗಿದ್ದ ಕಾರಣ ಆಕೆಯ ಬಳಿ ಮಾತನಾಡಲು ಸಾಧ್ಯವಾಗಿರಲಿಲ್ಲ ಹೀಗಾಗಿ ಆಕೆ ನಾಪತ್ತೆಯಾಗಿದ್ದಳೆ ಎನ್ನುವ ದೂರು ದಾಖಲಿಸಿದ್ದರು.
ಮತ್ತಷ್ಟು ಓದಿ: ಮಧ್ಯಪ್ರದೇಶದ ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್ನ ಕಿಂಗ್ಪಿನ್ ಬೆಂಗಳೂರಿನಲ್ಲಿ ಅರೆಸ್ಟ್
ಸಹೋದರಿ ದೂರಿನ ಪ್ರಕಾರ,ತನ್ನ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂತೆಗೆದುಕೊಳ್ಳುವಂತೆ ಶುಕ್ಲಾ ನೈನಾ ಮೇಲೆ ಒತ್ತಡ ಹೇರುತ್ತಿದ್ದ ಹಾಗೆ ಮಾಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಶುಕ್ಲಾ ಹಾಗೂ ಆತನ ಪತ್ನಿಯನ್ನು ಮಂಗಳವಾರ ಬಂಧಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Wed, 13 September 23