Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದ ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್​ನ ಕಿಂಗ್​ಪಿನ್ ಬೆಂಗಳೂರಿನಲ್ಲಿ ಅರೆಸ್ಟ್

madhya pradesh high profile honey trap: ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್ ಹಗರಣದ ಕಿಂಗ್​​ಪಿನ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಾಜಿ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳಿಗೆ ಯುವತಿಯರನ್ನು ಪೂರೈಕೆ ಮಾಡಿ ಬಳಿಕ ಅವರನ್ನು ಹನಿಟ್ರ್ಯಾಪ್​ ಖೆಡ್ಡಾಕ್ಕೆ ಬೀಳಿಸಿ ಲಕ್ಷ ಲಕ್ಷ ಹಣ ದೋಚುತ್ತಿದ್ದ ಆರತಿ ದಯಾಳ್​ ಬೆಂಗಳೂರಿನ ಮಹದೇವಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಮಧ್ಯಪ್ರದೇಶದ ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್​ನ ಕಿಂಗ್​ಪಿನ್ ಬೆಂಗಳೂರಿನಲ್ಲಿ ಅರೆಸ್ಟ್
ಆರತಿ ದಯಾಳ್
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on:Sep 13, 2023 | 8:38 AM

ಬೆಂಗಳೂರು, (ಸೆಪ್ಟೆಂಬರ್ 13): ಮಧ್ಯಪ್ರದೇಶದ(madhya pradesh) ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್​ನ(high profile honey trap) ಮಾಸ್ಟರ್ ಮೈಡ್ ಬೆಂಗಳೂರಿನಲ್ಲಿ (Bengaluru) ಸಿಕ್ಕಿಬಿದ್ದಿದ್ದಾಳೆ. ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್ ಹಗರಣದ ಮಾಸ್ಟರ್ ಮೈಡ್ ಆರತಿ ದಯಾಳ್(Aarti Dayal)​ ಅವಳನ್ನ ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿ ಮಧ್ಯಪ್ರದೇಶದ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. 2019 ರಲ್ಲಿ ಮಧ್ಯಪ್ರದೇಶದಲ್ಲಿ ನಡೆದಿದ್ದ ಬಹುದೊಡ್ಡ ಹೈಪ್ರೋಫೈಲ್​ ಹನಿಟ್ರಾಪ್ ಪ್ರಕರಣದಲ್ಲಿ ಆರತಿ ಜೈಲು ಸೇರಿ 2020 ರಲ್ಲಿ ಹೊರ ಬಂದವಳು ಯಾರಿಗೂ ಸಿಕ್ಕಿರಲಿಲ್ಲ. ಸೋನು, ಸಮಂತಾ, ಆರತಿ ಅಗರ್ವಾಲ್ ಹೀಗೆ ಬೇರೆ ಬೇರೆ ಹೆಸರಿನಲ್ಲಿ ತಲೆಮರಿಸಿಕೊಂಡಿದ್ದಳು. ಅಲ್ಲದೇ ಈ ಹಿಂದೆ ಹೈ ಪ್ರೊಫೈಲ್ ಹನಿಟ್ರಾಪ್ ಮಾಡುತ್ತಿದ್ದವಳು ಈಗ ಕಳ್ಳತನ ದಾರಿ ಹಿಡಿದಿದ್ದಳು.

ಬೆಂಗಳೂರು ಚೆನ್ನೈ ಸೇರಿ ವಿವಿಧ ಕಡೆ ದರೋಡೆ ಮಾಡುತ್ತಿದ್ದಳು. ಮೊದಲು ಸ್ಪಾಗಳಲ್ಲಿ ಕೆಲಸಕ್ಕೆ ಸೇರುತಿದ್ದ ಆರತಿ, ಹತ್ತು ದಿನ ಕೆಲಸ ಮಾಡಿ ಅಲ್ಲಿಯೇ ಕೆಲಸ ಮಾಡುವ ಯುವತಿಯರ ರೂಮ್ ,ಪಿಜಿ ಯಲ್ಲಿ ಉಳಿದುಕೊಂಡು ಬಳಿಕ ಅವರ ಹಣ ಬಂಗಾರ ಕದ್ದು ಎಸ್ಕೇಪ್ ಆಗುತ್ತಿದ್ದಳು.

ಇದನ್ನೂ ಓದಿ: ಹನಿಟ್ರ್ಯಾಪ್​ ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಂ ವಿಶೇಷ ಅಧಿಕಾರಿ

ಹನಿಟ್ರ್ಯಾಪ್ ಕಿಂಗ್​ ಪಿನ್​ ಆರತಿ

ಬಡ ಕುಟುಂಬದಿಂದ ಬಂದ ಕಾಲೇಜು ಯುವತಿಯರಿಗೆ ಐಷಾರಾಮಿ ಜೀವನವನ್ನು ಪರಿಚಯಿಸಿ ಅವರು ಅದರತ್ತ ಆಕರ್ಷಿತರಾಗುವಂತೆ ಮಾಡುತ್ತಿದ್ದ ಶ್ವೇತಾ ಹಾಗೂ ಆರತಿ ದಯಾಳ್ ನಂತರ ಹನಿಟ್ರ್ಯಾಪ್​ಗೆ ಬಳಸಿಕೊಳ್ಳುತ್ತಿದ್ದರು. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಈ ಕಾಲೇಜು ಯುವತಿಯರನ್ನು ಒದಗಿಸುತ್ತಿದ್ದರು. ರಾಜಕಾರಣಿಗಳು ಕಾಲೇಜು ಯುವತಿಯರಿಗೇ ಹೆಚ್ಚು ಡಿಮ್ಯಾಂಡ್ ಇಡುತ್ತಿದ್ದುದರಿಂದ ಶ್ವೇತಾ ಇಂಥದ್ದೊಂದು ಜಾಲ ಹೆಣೆದಿದ್ದಳು. ಜೊತೆಗೆ 40 ವೇಶ್ಯೆಯರನ್ನೂ ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿದ್ದಳು. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕಾಂಟಾಕ್ಟ್​ ಹೊಂದಿದ್ದ ಶ್ವೇತಾ ಆರತಿ ದಯಾಳ್ ಜೊತೆ ಸೇರಿಕೊಂಡು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೂ ಯುವತಿ ಮತ್ತು ಮಹಿಳೆಯರನ್ನು ಕಳುಹಿಸುತ್ತಿದ್ದಳು ಎಂಬ ವಿಷಯ ವಿಚಾರಣೆ ವೇಳೆ ತಿಳಿದುಬಂದಿತ್ತು.

ಇಂತಹದ್ದೇ ಹನಿಟ್ರ್ಯಾಪ್​ ಪ್ರಕರಣವೊಂದರಲ್ಲಿಇಂದೋರ್‌ ಪುರಸಭೆಯ ಎಂಜಿನಿಯರ್‌ ಹರ್ಬಜನ್‌ ಸಿಂಗ್‌ ಅವರಿಗೆ ಆರತಿ ದಯಾಳ್‌ ಮತ್ತು ಮೋನಿಯಾ ಯಾದವ್‌ ಸೇರಿ 3 ಕೋಟಿ ರೂ. ಹಫ್ತಾ ಬೇಡಿಕೆ ಇಟ್ಟಾಗ ಅವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಈ ಜಾಲದ ಕೃತ್ಯ ಬಯಲಾಗಿತ್ತು.

ಇನ್ನು ಎಸ್​ಐಟಿ ತನಿಖೆ ವೇಳೆ ಆರೋಪಿಗಳ ಬಳಿ 1000ಕ್ಕೂ ಅಧಿಕ ವಿಡಿಯೋ ಕ್ಲಿಪ್ಪಿಂಗ್​ಗಳು, ಸೆಕ್ಸ್​ ಚಾಟ್​ಗಳು, ಬ್ಲಾಕ್​ಮೇಲ್ ಮಾಡಲು ಇಟ್ಟುಕೊಂಡಿದ್ದ ವಿಡಿಯೋಗಳು ಸಿಕ್ಕಿದ್ದವು. ಇವುಗಳಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಅಧಿಕಾರಿಗಳ ಜೊತೆಗಿನ ಸೆಕ್ಸ್​ ವಿಡಿಯೋಗಳೂ ಇದ್ದವು.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:30 am, Wed, 13 September 23

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ