Maharashtra Crime: ಪ್ರೇಯಸಿಯ ಕೊಲೆ ಮಾಡಿ, ಶವವನ್ನು ಹಾಸಿಗೆಯ ಕೆಳಗಿಟ್ಟು, ರಾಜ್ಯ ಬಿಟ್ಟು ಪರಾರಿಯಾಗಲು ಯತ್ನಿಸಿದ ಯುವಕನ ಬಂಧನ
ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಸುದ್ದಿ ಮಾಸುವ ಮುನ್ನ ಮತ್ತೊಂದು ಭೀಕರ ಹತ್ಯೆ ನಡೆದುಬಿಟ್ಟಿದೆ. ಲಿವ್ ಇನ್ ಸಂಬಂಧದಲ್ಲಿದ್ದ ಸಂಗಾತಿಯನ್ನು ಹತ್ಯೆ ಮಾಡಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಸುದ್ದಿ ಮಾಸುವ ಮುನ್ನ ಮತ್ತೊಂದು ಭೀಕರ ಹತ್ಯೆ ನಡೆದುಬಿಟ್ಟಿದೆ. ಲಿವ್ ಇನ್ ಸಂಬಂಧದಲ್ಲಿದ್ದ ಸಂಗಾತಿಯನ್ನು ಹತ್ಯೆ ಮಾಡಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲಘಡದಲ್ಲಿ ಈ ಘಟನೆ ನಡೆದಿದೆ, ಆರೋಪಿಯು ತನ್ನ ಪ್ರೇಯಸಿಯನ್ನು ಕೊಂದು ರಾಜ್ಯದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಮಂಗಳವಾರ ಮಧ್ಯಪ್ರದೇಶದ ರೈಲಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೋಲೀಸರ ಪ್ರಕಾರ, ಸೋಮವಾರ ಪಾಲಘಡ ಜಿಲ್ಲೆಯ ತುಲಿಂಜ್ ಪ್ರದೇಶದ ಮನೆಯೊಳಗೆ ಹಾಸಿಗೆಯ ಕೆಳಗೆ ಮೇಘಾ (37) ಶವವನ್ನು ವಶಪಡಿಸಿಕೊಳ್ಳಲಾಗಿದೆ.
ಲಿವ್ ಇನ್ ಪಾರ್ಟ್ನರ್ ಮೇಘಾಳನ್ನು ಕೊಂದು ಶವವನ್ನು ಬಚ್ಚಿಟ್ಟಿದ್ದ ಎಂದು ಆರೋಪಿಸಲಾಗಿದೆ. ತುಳಿಂಜ್‌ನ ಪೊಲೀಸ್ ಅಧಿಕಾರಿಯ ಪ್ರಕಾರ, ಒಂದು ವಾರದ ಹಿಂದೆ ಮೇಘಾ ಕೊಲೆಯಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೇಹ ಕೊಳೆತು ವಾಸನೆ ಬರಲಾರಂಭಿಸಿದಾಗ ಆರೋಪಿ ಮನೆಯಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಮಂಗಳವಾರ ಮಧ್ಯಪ್ರದೇಶದ ನಾಗರಾದಲ್ಲಿ ರೈಲಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಮತ್ತಷ್ಟು ಓದಿ: Shraddha Walker Murder Case: ಶಿಕ್ಷಿತ ಹೆಣ್ಣು ಮಕ್ಕಳು ಈ ಘಟನೆಯಿಂದ ಪಾಠ ಕಲಿಯಬೇಕಿದೆ: ಕೇಂದ್ರ ಸಚಿವ ಕೌಶಲ್
ಪೊಲೀಸ್ ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಯುವಕ ಮತ್ತು ಪಾಲಘಡದ ತುಳಿಂಜ್ ಪ್ರದೇಶದ ನಿವಾಸಿ ಮೇಗಾ ಅವರು ದೀರ್ಘಕಾಲ ಲಿವ್-ಇನ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಆರೋಪಿ ಕೆಲಸ ಕಳೆದುಕೊಂಡಿದ್ದ. ಅಂದಿನಿಂದ ಇಬ್ಬರ ನಡುವೆ ನಾನಾ ವಿಚಾರಗಳಲ್ಲಿ ಜಗಳ ಶುರುವಾಗಿದೆ. ಆ ವಿವಾದದಿಂದಲೇ ಆರೋಪಿ ಮೇಘಾನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ . ನಂತರ ಘಟನೆಯನ್ನು ಮರೆಮಾಚಲು, ರೋಮಿಯೋ ತನ್ನ ಪ್ರೇಮಿಯ ದೇಹವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ, ಇತ್ತೀಚೆಗಷ್ಟೇ ಅವರ ಮನೆಯಿಂದ ದುರ್ವಾಸನೆ ಬೀರಲಾರಂಭಿಸಿತ್ತು. ಘಟನೆ ಗೊತ್ತಾಗುತ್ತದೆ ಎಂಬ ಭಯದಿಂದ ಆರೋಪಿಗಳು ಮನೆ ಬಿಟ್ಟು ಹೊರ ರಾಜ್ಯಕ್ಕೆ ಪರಾರಿಯಾಗಲು ಯತ್ನಿಸಿದ್ದ.
ಬಳಿಕ ಆರೋಪಿಯ ಮನೆಯಿಂದ ವಾಸನೆ ಬರುತ್ತಿದ್ದ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮನೆಯ ಬಾಗಿಲು ಒಡೆದು ಒಳ ನುಗ್ಗಿ ಶೋಧ ನಡೆಸಿದಾಗ ಹಾಸಿಗೆ ಕೆಳಗೆ ಮೇಘಾ ಶವ ಪತ್ತೆಯಾಗಿದೆ. ಆರೋಪಿ ಪ್ರೇಮಿಯನ್ನು ಕೊಂದ ನಂತರ, ಮನೆಯಿಂದ ಹೊರಹೋಗುವ ಮೊದಲು ಇಡೀ ಘಟನೆಯ ಬಗ್ಗೆ ತನ್ನ ಸಹೋದರಿಗೆ ಸಂದೇಶ ನೀಡಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ನಂತರ ಓಡಿ ಹೋಗಲು ಯತ್ನಿಸಿದ್ದಾನೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತುಳಿಂಜ್ ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ವಾಕರ್ ಹತ್ಯೆ
ಶ್ರದ್ಧಾ ವಾಕರ್ ಲಿವ್ ಇನ್ ಪಾರ್ಟ್ನರ್ ಅಫ್ತಾಬ್ ಪೂನಾವಾಲಾ ಆಕೆಯನ್ನು ಹತ್ಯೆ ಮಾಡಿ, ಫ್ರಿಡ್ಜ್ನಲ್ಲಿಟ್ಟು, ವಾರಗಟ್ಟಲೆ ಆಕೆಯ ಒಂದೊಂದೇ ಭಾಗವನ್ನು ನಗರದ ಇತರೆ ಭಾಗಗಳಿಗೆ ಎಸೆದು ಬರುತ್ತಿದ್ದ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ