ಪಿಂಚಣಿ ಹಣ ಪಡೆಯಲು ಪತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತ್ನಿ

ಪಿಂಚಣಿ ಹಣ ಪಡೆಯುವ ದುರಾಸೆಯಿಂದ ಪತ್ನಿಯೊಬ್ಬಳು ಪತಿಗೆ ಬೆಂಕಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಥಾಣೆಯ ಕಲ್ಯಾಣ್​ನಗರದಲ್ಲಿ ನಡೆದಿದೆ. ಮಹಿಳೆ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಇದರಲ್ಲಿ ಇರುವ ಇಬ್ಬರು ಪುರುಷ ಆರೋಪಿಗಳು ಸಂತ್ರಸ್ತೆಯ ಪುತ್ರಿಯೊಬ್ಬರ ಸ್ನೇಹಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಪಿಂಚಣಿ ಹಣ ಪಡೆಯಲು ಪತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತ್ನಿ
ಪಿಂಚಣಿ
Image Credit source: TaxGuru

Updated on: Dec 10, 2023 | 10:28 AM

ಪಿಂಚಣಿ ಹಣ ಪಡೆಯುವ ದುರಾಸೆಯಿಂದ ಪತ್ನಿಯೊಬ್ಬಳು ಪತಿಗೆ ಬೆಂಕಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಥಾಣೆಯ ಕಲ್ಯಾಣ್​ನಗರದಲ್ಲಿ ನಡೆದಿದೆ. ಮಹಿಳೆ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಇದರಲ್ಲಿ ಇರುವ ಇಬ್ಬರು ಪುರುಷ ಆರೋಪಿಗಳು ಸಂತ್ರಸ್ತೆಯ ಪುತ್ರಿಯೊಬ್ಬರ ಸ್ನೇಹಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಪಿಂಚಣಿ ಹಣಕ್ಕಾಗಿ ಹಾಗೂ ಇಬ್ಬರು ಯುವಕರು ಅವರ ಮನೆಗೆ ಆಗಾಗ ಭೇಟಿ ನೀಡುವುದನ್ನು ವಿರೋಧಿಸಿದ್ದರಿಂದ ತನ್ನ ಜತೆ ಪತ್ನಿ ಯಾವಾಗಲೂ ಜಗಳವಾಡುತ್ತಿದ್ದರು ಎಂದು ಗಾಯಗೊಂಡ ವ್ಯಕ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ದಿನಕ್ಕೆ 210 ರೂ ಕಟ್ಟಿರಿ; ತಿಂಗಳಿಗೆ 5,000 ರೂ ಪಿಂಚಣಿ ಪಡೆಯಿರಿ; ಇದು ಎಪಿವೈ ಸ್ಕೀಮ್ ಅನುಕೂಲ

ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಇಬ್ಬರು ಯುವಕರ ವಿರುದ್ಧ ವ್ಯಕ್ತಿ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಡಿಸೆಂಬರ್ 8ರ ರಾತ್ರಿ ಇಬ್ಬರು ಯುವಕರು ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದರು, ಬಳಿಕ ಪತ್ನಿ ತಮಗೆ ಬೆಂಕಿ ಹಚ್ಚಿದ್ದಾಳೆ ಎಂದಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ