ಕಲಬುರಗಿಯಲ್ಲಿ ಲಾಯರ್ ಹತ್ಯೆ: ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್, ಕೊಲೆ ಹಿಂದಿನ ಸ್ಫೋಟಕ ಕಾರಣ ಬಹಿರಂಗ

ಡಿಸೆಂಬರ್​ 7 ರಂದು ಕಲಬುರಗಿಯಲ್ಲಿ ನಡೆದ ಕೊಲೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಹಾಡು ಹಗಲೇ ವಕೀಲರೊಬ್ಬರನ್ನು ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಂದು ಮಧ್ಯಾಹ್ನ ವಕೀಲ ಈರಣ್ಣಗೌಡ ಪಾಟೀಲ್​ ಅವರನ್ನು ಕೊಲೆ ಮಾಡಲು ಕಾರಣವೇನು? ಇಲ್ಲಿದೆ ಓದಿ...

ಕಲಬುರಗಿಯಲ್ಲಿ ಲಾಯರ್ ಹತ್ಯೆ: ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್, ಕೊಲೆ ಹಿಂದಿನ ಸ್ಫೋಟಕ ಕಾರಣ ಬಹಿರಂಗ
ಪ್ರಮುಖ ಆರೋಪಿ ನೀಲಕಂಠ, ವಕೀಲ ಈರಣ್ಣಗೌಡ ಪಾಟೀಲ್​
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on: Dec 10, 2023 | 1:24 PM

ಕಲಬುರಗಿ, ಡಿಸೆಂಬರ್​ 10: ವಕೀಲ (Lawyer) ಈರಣ್ಣಗೌಡ ಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು (Police) ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ನೀಲಕಂಠ ಪಾಟೀಲ್ ಬಂಧಿತ ಪ್ರಮುಖ ಆರೋಪಿ. ಪ್ರಕರಣ ನಡೆದ ಬಳಿಕ ಪ್ರಮುಖ ಆರೋಪಿ ನೀಲಕಂಠ ಪರಾರಿಯಾಗಿದ್ದನು. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ಪೊಲೀಸರು ತಡರಾತ್ರಿ ಪ್ರಮುಖ ಆರೋಪಿ ನೀಲಕಂಠ‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪೊಲೀಸರು ನೀಲಕಂಠ ಪಾಟೀಲ್ ಪತ್ನಿ ಸಿದ್ದಮ್ಮ ಪಾಟೀಲ್​ಳನ್ನೂ ಬಂಧಿಸಿದ್ದಾರೆ.

ಡಿಸೆಂಬರ್​​ 7 ರಂದು ಕಲಬುರಗಿಯ ಶ್ರಿಗಂಗಾವಿಹಾರ ಅರ್ಪಾಟಮೆಂಟ್​ನಲ್ಲಿ ವಕೀಲ ಈರಣ್ಣಗೌಡ ಪಾಟೀಲ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈರಣ್ಣಗೌಡ ಪಾಟೀಲ್​ ಅವರನ್ನು ಕೊಲೆ ಮಾಡಲು ಪ್ರಮುಖ ಆರೋಪಿ ನೀಲಕಂಠ ಮತ್ತು ಈತನ ಸಹಚರರಾದ ಮಲ್ಲಿನಾಥ ನಾಯ್ಕೋಡಿ, ಭಾಗೇಶ, ಅವಣ್ಣ ಜೊತೆಯಾಗಿ ಫ್ಲ್ಯಾನ್ ರೂಪಿಸಿದ್ದರು.

ವಕೀಲ ಈರಣ್ಣಗೌಡ ಕೊಲೆ ಹಿಂದಿನ ಕಾರಣ

ಪ್ರಕರಣದ ಪ್ರಮುಖ ಆರೋಪಿ ನೀಲಕಂಠ ಕೊಲೆಯಾದ ವಕೀಲ ಈರಣ್ಣಗೌಡ ಪಾಟೀಲ್ ಅವರ ಸಹೋದರ ಸಂಬಂಧಿ. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ ಎಕರೆಗೆ 3 ಕೋಟಿ ರೂ. ಬೆಲೆ ಬಾಳುವ 12 ಎಕರೆ ಜಮೀನು ವಕೀಲ ಈರಣ್ಣಗೌಡ ಪಾಟೀಲ್​ ಅವರ ಹೆಸರಿನಲ್ಲಿ ಇತ್ತು. ಈ ಜಮೀನನ್ನು ಹಂತಕ ಮಲ್ಲಿನಾಥ ನಾಯ್ಕೋಡಿ ಕುಟುಂಬದವರು ನೋಡಿಕೊಳ್ಳುತ್ತಿದ್ದರು.

ತಮ್ಮ ಜಮೀನನ್ನು ಸೈಟ್ ಆಗಿ ಪರಿವರ್ತನೆ ಮಾಡುವ ಸಲುವಾಗಿ ವಕೀಲ ಈರಣ್ಣಗೌಡ ಪಾಟೀಲ್​ ಓಡಾಡುತ್ತಿದ್ದರು. ಒಂದೊಂದು ಸೈಟ್ 20 ರಿಂದ 30 ಲಕ್ಷ ರೂ. ಬೆಲೆ ಬಾಳುತ್ತದೆ. ಈ ಮಧ್ಯೆ ಜಮೀನಿನಲ್ಲಿ ಪಾಲು ಬೇಕು ಅಂತ ನೀಲಕಂಠ ಹಾಗೂ ನಾಯ್ಕೋಡಿ ಕುಟುಂಬ ನ್ಯಾಯಾಲಯದಲ್ಲಿ ದಾವೆ ಹೂಡಿದರು.

ಇತ್ತ ನಾಯ್ಕೋಡಿ ಕುಟುಂಬದ ಜಮೀನಿನ ಪಕ್ಕದಲ್ಲೇ ವಕೀಲ ಈರಣ್ಣಗೌಡ ಪಾಟೀಲ್​ ಅವರ ಜಮೀನು ಇತ್ತು. ಹೀಗಾಗಿ ಕೋಟಿ ಕೋಟಿ ಬೆಲೆ ಬಾಳುವ ಭೂಮಿ ಮೇಲೆ ನಾಯ್ಕೋಡಿ ಕುಟುಂಬದ ಕಣ್ಣು ಬಿದ್ದಿತ್ತು. ಇದಕ್ಕಾಗಿ ಗಲಾಟೆ, ರಾಜಿ-ಪಂಚಾಯಿತಿ ಕೂಡ ಆಗಿತ್ತು. 12 ಏಕೆರೆಯಲ್ಲಿ 2 ರಿಂದ 3 ಏಕರೆನಾದರೂ ನೀಡವುಂತೆ ಆರೋಪಿಗಳು ದುಂಬಾಲು ಬಿದ್ದಿದ್ದರು. ಆದರೆ ಇದಕ್ಕೆ ವಕೀಲ ಈರಣ್ಣಗೌಡ ಪಾಟೀಲ್​ ಅವರು ಒಪ್ಪಿರಲ್ಲ.

ಇದನ್ನೂ ಓದಿ: ಕೆಎಸ್ಆರ್​ಟಿಸಿ ಸಿಬ್ಬಂದಿ ಹತ್ಯೆ; ನಾಲ್ಕು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ

ಈರಣ್ಣಗೌಡ ಒಬ್ಬನೇ ಮಗ, ಹೀಗಾಗಿ ಅವನನ್ನು ಮುಗಿಸಿದರೇ ಕೋಟಿ ಕೋಟಿ ಬೆಲೆ ಬಾಳುವ ಜಮೀನು ತಮ್ಮದಾಗುತ್ತೆಂದು ಹಂತಕರು ಫ್ಲ್ಯಾನ್ ಮಾಡಿದ್ದರು. ಅದರಂತೆ ಸಹೋದರ ಸಂಬಂಧಿ ನೀಲಕಂಠ ಫ್ಲ್ಯಾನ್ ಮಾಡಿದ್ದನು. ಈ ಪ್ಲ್ಯಾನ್​​ನಲ್ಲಿ ನೀಲಕಂಠ ಪಾಟೀಲ್​ ಪತ್ನಿ ಕೂಡ ಶಾಮೀಲಾಗಿದ್ದಾಳೆ. ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆಯನ್ನು ದಂಪತಿ ಮಾಡಿದ್ದರು.

ಡಿಸೆಂಬರ್​ 7 ರಂದು ಜಮೀನು ವ್ಯಾಜ್ಯ ಸಂಬಂಧ ಅಂತೀಮ ತೀರ್ಪು ಇತ್ತು. ಅವತ್ತು ವಕೀಲ​ ಈರಣ್ಣಗೌಡ ಪಾಟೀಲ್ ಅವರು​ ಕೋರ್ಟ್​ಗೆ ಹೋಗುತ್ತಿದ್ದರು. ಇತ್ತ್ತ ನೀಲಕಂಠ ಪಾಟೀಲ್​ ಮತ್ತು ಆತನ ಪತ್ನಿ ಸಿದ್ದಮ್ಮ ಪಾಟೀಲ್​ ತಮ್ಮ ಹೊಸ ಕಾರ್ ಪೂಜೆಗೆಂದು ದಂಪತಿ ಗಾಣಾಗಪುರಕ್ಕೆ ತೇರಳಿದ್ದರು.

ಆರೋಪಿ ನೀಲಕಂಠ ಪಾಟೀಲ್​ನ ಫ್ಲ್ಯಾನ್​ನಂತೆ ಮಲ್ಲಿನಾಥ, ಅವಣ್ಣ, ಭಾಗೇಶ ನಾಯ್ಕೋಡಿ ದಾರಿಯಲ್ಲಿ ಈರಣ್ಣಗೌಡ ಪಾಟೀಲ್​ ಅವರನ್ನು ಅಡ್ಡಹಾಕಿದರು. ಕೈಯಲ್ಲಿ ಮಚ್ಚು ಹಿಡಿದುಕೊಂಡು ಅಟ್ಟಾಡಿಸಿ ಈರಣ್ಣಗೌಡ ಪಾಟೀಲ್​ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದರು. ಬಳಿಕ ಕೊಲೆಯ ವಿಚಾರವನ್ನು ದಂಪತಿಗೆ ತಿಳಿಸಿದ್ದಾರೆ.

ಕಾರ್ ಪೂಜೆ ಮುಗಿಸಿ ದೇವರ ದರ್ಶನ ಪಡೆಯುವಾಗಲೆ‌ ನೀಲಕಂಠ ಪಾಟೀಲ್ ಕೊಲೆಯಾದ ಸುದ್ದಿ ಪಡೆದಿದ್ದಾನೆ. ಕೊಲೆಯಾದ ಸುದ್ದಿ ತಿಳಿಯುತ್ತಲೆ ದಂಪತಿ ದೇವಸ್ಥಾನದಲ್ಲಿ ಸಂತಸಪಟ್ಟಿದ್ದಾರೆ. ಬಳಿಕ ನೀಲಕಂಠ ಪಾಟೀಲ್ ಮತ್ತು ಸಿದ್ದಮ್ಮ ಕಲಬುರಗಿಗೆ ಆಗಮಿಸಿದ್ದಾರೆ. ಮಲ್ಲಿನಾಥ್ ನಾಯ್ಕೋಡಿ ಕೂಡ ರಕ್ತದ ಕಲೆಯಲ್ಲೇ ಇವರ ಮನೆಗೆ ಬಂದು, ಸಿದ್ದಮ್ಮ ಪಾಟೀಲ್​ನಿಂದ 50 ಸಾವಿರ ರೂ. ತೆಗೆದುಕೊಂಡ ಹೋಗಿದ್ದನು. ಸದ್ಯ ಕಲಬುರಗಿ ವಿವಿ ಪೊಲೀಸರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ