ವೈದ್ಯನಿಂದ ಪತ್ನಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್​: ಆರೋಪಿ ಡಾಕ್ಟರ್​ಗಿತ್ತು ಮತ್ತೊಬ್ಬಳ ಸ್ನೇಹ

Edited By:

Updated on: Oct 15, 2025 | 5:40 PM

ಬೆಂಗಳೂರಲ್ಲಿ ವೈದ್ಯನೇ ಪತಿಯನ್ನ ಕೊಂದಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮತ್ತೊಬ್ಬ ವೈದ್ಯೆ ಜೊತೆ ಆರೋಪಿಗೆ ಗೆಳೆತನ ಇತ್ತು ಎಂಬ ವಿಷಯ ತನಿಖೆವೇಳೆ ಗೊತ್ತಾಗಿದ್ದು, ಕೊಲೆಯಲ್ಲಿ ವೈದ್ಯನ ಗೆಳತಿಯ ಪಾತ್ರದ ಬಗ್ಗೆಯೂ ಪರಿಶೀಲನೆ ನಸಡೆಸಲಾಗುತ್ತಿದೆ. ಕೊಲೆಗೆ ಪತ್ನಿಯ ಅನಾರೋಗ್ಯವೇ ನಿಜವಾದ ಕಾರಣವಾ ಅಥವಾ ಬೇರೆ ಕಾರಣ ಇತ್ತಾ ಎಂಬ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು, ಅಕ್ಟೋಬರ್​ 15: ವೈದ್ಯ ಡಾ.ಮಹೇಂದ್ರರೆಡ್ಡಿಯಿಂದ ಪತ್ನಿ ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪತ್ನಿಗೆ ಅನಾರೋಗ್ಯ ಹಿನ್ನಲೆ ಇಂಜೆಕ್ಷನ್​ ನೀಡಿ ವೈದ್ಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ  ಮತ್ತೊಬ್ಬಳು ವೈದ್ಯೆ ಜೊತೆ ಆರೋಪಿ ಡಾ.ಮಹೇಂದ್ರರೆಡ್ಡಿಗೆ ಗೆಳೆತನ ಇತ್ತು. ಹೀಗಾಗಿ ಆತ ಕೃತಿಕಾಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ. ಹೀಗಾಗಿ ಕೃತಿಕಾ ಕೊಲೆಗೆ ಅನಾರೋಗ್ಯವೇ ನಿಜವಾದ ಕಾರಣವಾ ಅಥವಾ ಬೇರೆ ಕಾರಣ ಇತ್ತಾ ಎಂಬ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಕೊಲೆಯಲ್ಲಿ ಮಹೇಂದ್ರರೆಡ್ಡಿ ಗೆಳತಿಯ ಪಾತ್ರದ ಬಗ್ಗೆಯೂ ಪರಿಶೀಲನೆ ನಸಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More