ಬೆಂಗಳೂರು: ಲಾಕ್ಡೌನ್ ತಂದೊಡ್ಡಿದ ಸಂಕಷ್ಟ ಅಂತಿಂಥದಲ್ಲ. ಇದರಿಂದ ಹಲವಾರು ಜನ ಕೆಲಸ ಕಳೆದುಕೊಂಡ ಪ್ರಸಂಗಗಳನ್ನ ನಾವು ಕೇಳಿದ್ದೇವೆ. ಆದರೆ, ನೌಕರಿ ಹೋದ ಬಳಿಕ ಕಳ್ಳತನಕ್ಕೆ ಇಳಿದ ಭೂಪನೊಬ್ಬನ ಕತೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೌದು, ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡ ಈ ಮಹಾಶಯ ಬದುಕು ಸಾಗಿಸಲು ಸೈಬರ್ ಕ್ರೈಂ ಮೂಲಕ ರೋಲ್ಕಾಲ್ ದಂಧೆಗೆ ಇಳಿದುಬಿಟ್ಟ.
ಅಂದ ಹಾಗೆ, ಇವನ ಹೆಸರು ಸಮೀರ್ ಕುಮಾರ್. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಸಮೀರ್, ಮಹಿಳೆಯ ಭಾವಚಿತ್ರವನ್ನ ಬಳಸಿಕೊಂಡು ಜನರನ್ನ ವಂಚಿಸಲು ಮುಂದಾದ. ತನ್ನ ಮಾಜಿ ಸಹೋದ್ಯೋಗಿಯಾಗಿದ್ದ ಮಹಿಳೆಯ ಡಿಪಿ ಪ್ರೊಫೈಲ್ ಹಾಕಿ WhatsApp ಗ್ರೂಪ್ ಕ್ರಿಯೆಟ್ ಮಾಡಿದ್ದ.
ಆರೋಪಿ ನನ್ನ ತಾಯಿಯ ಚಿಕಿತ್ಸೆಗೆ ಹಣ ಬೇಕು ಅಂತಾ ಬ್ಯಾಂಕ್ ಖಾತೆ ನಂಬರ್ ಹಾಕಿ ತನ್ನ ಇತರೆ ಸಹೋದ್ಯೋಗಿಗಳಿಗೆ ಮೆಸೇಜ್ ಮಾಡುತ್ತಿದ್ದನಂತೆ. ಮಹಿಳೆ ಕಷ್ಟದಲ್ಲಿದ್ದಾಳೆ ಅಂತಾ ನಂಬಿದ ಇತರೆ ಸಿಬ್ಬಂದಿ ಆ ಬ್ಯಾಂಕ್ ಖಾತೆಗೆ ಹಣ ಟ್ರಾನ್ಸ್ಫರ್ ಮಾಡಿದ್ದರಂತೆ!
ಇನ್ನು ಈ ವಿಷಯ ತಿಳಿದ ಸಂತ್ರಸ್ಥೆ ಕೂಡಲೇ ಪೂರ್ವ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಈ ಹಿಂದೆ ಕಂಪನಿಯ ಸಂದರ್ಶನಕ್ಕೆಂದು ಬಂದಿದ್ದ ಸಂತ್ರಸ್ಥೆ ಸೇರಿ ಎಲ್ಲಾ ಉದ್ಯೋಗಿಗಳ ಮೊಬೈಲ್ ನಂಬರ್ಗಳನ್ನ ಸಮೀರ್ ಕಲೆಕ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.