ಬೆಂಗಳೂರು: ಮನೆ ಟೆರೇಸ್ ಮೇಲೆಯೇ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯೋರ್ವನನ್ನು ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರೀಟ್ ಚಕ್ರವರ್ತಿ ಗಾಂಜಾ ವ್ಯಸನಿಯಾಗಿದ್ದು, ಲಾಕ್ ಡೌನ್ ಸಮಯದಲ್ಲಿ ಗಾಂಜಾ ಸಿಗದ ಹಿನ್ನೆಲೆಯಲ್ಲಿ ತನ್ನ ಮನೆಯ ಟೆರೇಸ್ನಲ್ಲಿ ಹೂ ಕುಂಡಗಳ ಮಧ್ಯೆಯೇ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ. ಚಕ್ರವರ್ತಿ ಅಣ್ಣನ ಮಗ ಮನೆಗೆ ಬಂದು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ಅಣ್ಣನ ಮಗನಿಗೂ ಗಾಂಜಾ ಸೇದುವಂತೆ ಆರೋಪಿ ಪ್ರೇರೇಪಿಸಿದ್ದಾನೆ. ಆದರೆ ಇದಕ್ಕೆ ಒಪ್ಪದ ಆತ ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಆ ರೈತ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದು ಯಾಕೆ ಗೊತ್ತಾ?