ಬಾವಿಯಲ್ಲಿ ಅಪರಿಚಿತ ಹೆಣ ಪತ್ತೆ, ಗ್ರಾಮದಲ್ಲಿ ಹೆಚ್ಚಾಗಿದೆ ಆತಂಕ

|

Updated on: Nov 20, 2019 | 11:49 AM

ಗದಗ: ಬಾವಿಯಲ್ಲಿ ಅಪರಿಚಿತ ಹೆಣವೊಂದು ತೇಲುತ್ತಿದ್ದಂತಹ ಭಯಾನಕ ದೃಶ್ಯ ಗದಗ ತಾಲೂಕು ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಬಳಿ ಕಂಡುಬಂದಿದೆ. ಇಲ್ಲಿ ಇದ್ದಕ್ಕಿದ್ದಂತೆ ಅಪರಿಚಿತ ಹೆಣವನ್ನ ಕಂಡ ಜನ ಬೆಚ್ಚಬಿದ್ದಿದ್ದಾರೆ. ಸಾಕಷ್ಟು ಅನುಮಾನ ಮೂಡಿಸಿದೆ ಅಪರಿಚಿತ ವ್ಯಕ್ತಿ ಶವ: ದತ್ತಾತ್ರೇಯ ಜೋಶಿ ಅನ್ನೋರಿಗೆ ಸೇರಿದ ಜಮೀನಿನಲ್ಲಿ ಬಾವಿಯೊಂದಿದೆ. ಬಾವಿಯಲ್ಲಿ ಇದ್ದಕ್ಕಿದ್ದಂತೆ ಶವ ಪತ್ತೆಯಾಗಿದೆ. ಸುಮಾರು 35 ವರ್ಷ ಆಸುಪಾಸಿನ ವ್ಯಕ್ತಿಯ ದೇಹ ಇದಾಗಿದ್ದು, ಯಾರೂ ಅನ್ನೋದು ಗೊತ್ತಾಗುತ್ತಿಲ್ಲ. ಇನ್ನು ವ್ಯಕ್ತಿ ಇಲ್ಲಿ ಸ್ನಾನ ಮಾಡಲು ಬಂದು ಜಾರಿದ್ದಾನೆ […]

ಬಾವಿಯಲ್ಲಿ ಅಪರಿಚಿತ ಹೆಣ ಪತ್ತೆ, ಗ್ರಾಮದಲ್ಲಿ ಹೆಚ್ಚಾಗಿದೆ ಆತಂಕ
Follow us on

ಗದಗ: ಬಾವಿಯಲ್ಲಿ ಅಪರಿಚಿತ ಹೆಣವೊಂದು ತೇಲುತ್ತಿದ್ದಂತಹ ಭಯಾನಕ ದೃಶ್ಯ ಗದಗ ತಾಲೂಕು ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಬಳಿ ಕಂಡುಬಂದಿದೆ. ಇಲ್ಲಿ ಇದ್ದಕ್ಕಿದ್ದಂತೆ ಅಪರಿಚಿತ ಹೆಣವನ್ನ ಕಂಡ ಜನ ಬೆಚ್ಚಬಿದ್ದಿದ್ದಾರೆ.

ಸಾಕಷ್ಟು ಅನುಮಾನ ಮೂಡಿಸಿದೆ ಅಪರಿಚಿತ ವ್ಯಕ್ತಿ ಶವ:
ದತ್ತಾತ್ರೇಯ ಜೋಶಿ ಅನ್ನೋರಿಗೆ ಸೇರಿದ ಜಮೀನಿನಲ್ಲಿ ಬಾವಿಯೊಂದಿದೆ. ಬಾವಿಯಲ್ಲಿ ಇದ್ದಕ್ಕಿದ್ದಂತೆ ಶವ ಪತ್ತೆಯಾಗಿದೆ. ಸುಮಾರು 35 ವರ್ಷ ಆಸುಪಾಸಿನ ವ್ಯಕ್ತಿಯ ದೇಹ ಇದಾಗಿದ್ದು, ಯಾರೂ ಅನ್ನೋದು ಗೊತ್ತಾಗುತ್ತಿಲ್ಲ. ಇನ್ನು ವ್ಯಕ್ತಿ ಇಲ್ಲಿ ಸ್ನಾನ ಮಾಡಲು ಬಂದು ಜಾರಿದ್ದಾನೆ ಅನ್ನಲು ಯಾವುದೇ ಕುರುಹು ಸಿಗ್ತಿಲ್ಲ.

ಎಲ್ಲಕ್ಕಿಂತಲೂ ಮುಖ್ಯವಾಗಿ ಮೈಮೇಲೆ ಬಟ್ಟೆಯೇ ಇಲ್ಲ, ಆಕಸ್ಮಾತ್ ಬಟ್ಟೆ ತೆಗೆದು ಇಟ್ಟಿದ್ದರೆ ಬಾವಿ ಅಕ್ಕಪಕ್ಕ ಕಾಣಿಸಬೇಕಿತ್ತು. ಆದ್ರೆ ಬಟ್ಟೆಗಳು ಎಲ್ಲಿಯೂ ಕಾಣ್ತಿಲ್ಲ. ಹೀಗಾಗಿ ಇದು ಕೊಲೆ ಅನ್ನೋ ಅನುಮಾನ ಮೂಡಿದ್ದು, ಲಕ್ಕುಂಡಿ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.

ಬೇರೆಲ್ಲೋ ಹತ್ಯೆ ಮಾಡಿ ಇಲ್ಲಿ ಎಸೆದರಾ ಪಾಪಿಗಳು..?
ಅಂದಹಾಗೆ ಸ್ಥಳದಲ್ಲಿದ್ದ ಪರಿಸ್ಥಿತಿ ಸ್ಥಳೀಯರಲ್ಲಿ ಇಂತಹ ಅನುಮಾನ ಮೂಡುವಂತೆ ಮಾಡಿದೆ. ಯಾಕಂದ್ರೆ ಬಾಡಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆನ್ನಿನ ಭಾಗದಲ್ಲಿ ಗಾಯವಾಗಿರೋದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಗದಗ ಎಸ್​ಪಿ ತನಿಖೆ ಮಾಡ್ತಿದ್ದೀವಿ ಆದಷ್ಟು ಬೇಗ ಆರೋಪಿಯನ್ನ ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ.

ಅಸಹಜ ಸಾವು..?
ಬಾವಿಯಲ್ಲಿ ಶವ ಸಿಕ್ಕಿರುವ ಮಾಹಿತಿ ಬಂದ ತಕ್ಷಣ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ವ್ಯಕ್ತಿ ಯಾರು ಎಂಬ ವಿಚಾರ ಸ್ಪಷ್ಟವಾಗಿಲ್ಲ. ವ್ಯಕ್ತಿ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ಅಸಹಜ ಸಾವು ಎಂದು ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Published On - 8:31 am, Wed, 20 November 19