ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿದ್ದ.. ಹೆಣವಾಗಿ ಮಸಣ ಸೇರಿದ, ಎಲ್ಲಿ?

|

Updated on: Aug 09, 2020 | 9:41 AM

ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯನ್ನ ಕೊಲೆಗೈದಿರುವ ಘಟನೆ ನಿನ್ನೆ ರಾತ್ರಿ ನಗರದ ಶಾಮಣ್ಣ ಗಾರ್ಡನ್ ಬಳಿ ನಡೆದಿದೆ. ಇಸ್ಲಾಂ ಖಾನ್(36) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಶಾಮಣ್ಣ ಗಾರ್ಡನ್​ ಬಳಿಯ ಈರಾ ಮಸೀದಿ ಮುಂಭಾದಲ್ಲಿ ಘಟನೆ ಸಂಭವಿಸಿದೆ. ದುಷ್ಕರ್ಮಿಗಳ ತಂಡವೊಂದು ಇಸ್ಲಾಂ ಖಾನ್​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಸ್ಲಾಮ್​ನನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಗಾಯಾಳು ಚಿಕಿತ್ಸೆಗೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಮೃತನ ಮೇಲೆ ಈ ಹಿಂದೆ ಕೊಲೆ […]

ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿದ್ದ.. ಹೆಣವಾಗಿ ಮಸಣ ಸೇರಿದ, ಎಲ್ಲಿ?
Follow us on

ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯನ್ನ ಕೊಲೆಗೈದಿರುವ ಘಟನೆ ನಿನ್ನೆ ರಾತ್ರಿ ನಗರದ ಶಾಮಣ್ಣ ಗಾರ್ಡನ್ ಬಳಿ ನಡೆದಿದೆ. ಇಸ್ಲಾಂ ಖಾನ್(36) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಶಾಮಣ್ಣ ಗಾರ್ಡನ್​ ಬಳಿಯ ಈರಾ ಮಸೀದಿ ಮುಂಭಾದಲ್ಲಿ ಘಟನೆ ಸಂಭವಿಸಿದೆ. ದುಷ್ಕರ್ಮಿಗಳ ತಂಡವೊಂದು ಇಸ್ಲಾಂ ಖಾನ್​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಸ್ಲಾಮ್​ನನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಗಾಯಾಳು ಚಿಕಿತ್ಸೆಗೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.
ಮೃತನ ಮೇಲೆ ಈ ಹಿಂದೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳು ದಾಖಲಾಗಿದ್ದವು. ಜೊತೆಗೆ, ಆತ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು ಗೂಡ್ಸ್ ಆಟೋ ಓಡಿಸಿಕೊಂಡಿದ್ದ.

ಸದ್ಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೃತ್ಯ ಎಸಗಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.