ಗಮನ ಬೇರೆಡೆ ಸೆಳೆದು ದರೋಡೆ ಮಾಡ್ತಿದ್ದ Thak Thak Gang ಖಾಕಿ ಖೆಡ್ಡಾಕ್ಕೆ ಬಿತ್ತು
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಸಿಯುತ್ತಿದ್ದ ಥಕ್ ಥಕ್ ಅಂತಾನೇ ಫೇಮಸ್ ಆಗಿದ್ದ attention diversion ಗ್ಯಾಂಗ್ನ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ಸಂದೀಪ್(22) ಹಾಗೂ ಸಂತೋಷ್ (20) ಎಂದು ಗುರುತಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಬಂಧಿತ ಆರೋಪಿಗಳಿಂದ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಸಹ ವಶ ಪಡಿಸಿಕೊಂಡಿದ್ದಾರೆ. ಈ ಗ್ಯಾಂಗ್ ಕಳೆದ ಬುಧವಾರ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಯನ್ನ ಆಧರಿಸಿ ತನಿಖೆ ನಡೆಸಿದ ಖಾಕಿ […]
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಸಿಯುತ್ತಿದ್ದ ಥಕ್ ಥಕ್ ಅಂತಾನೇ ಫೇಮಸ್ ಆಗಿದ್ದ attention diversion ಗ್ಯಾಂಗ್ನ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನ ಸಂದೀಪ್(22) ಹಾಗೂ ಸಂತೋಷ್ (20) ಎಂದು ಗುರುತಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಬಂಧಿತ ಆರೋಪಿಗಳಿಂದ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಸಹ ವಶ ಪಡಿಸಿಕೊಂಡಿದ್ದಾರೆ.
ಈ ಗ್ಯಾಂಗ್ ಕಳೆದ ಬುಧವಾರ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಯನ್ನ ಆಧರಿಸಿ ತನಿಖೆ ನಡೆಸಿದ ಖಾಕಿ ತಂಡ, ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದ ಹಾಗೆ, ಇವರ ಕಾರ್ಯವೈಖರಿ ಬಹಳ ಸುಲಭ. ಯಾರನ್ನಾದರೂ ಗುರಿಯಾಗಿಸಿ, ಗುರುತಿಸಿಕೊಂಡು ಅವರ ಕಾರಿನ ಮೇಲೆ ಎಣ್ಣೆ ಸುರಿಯುತ್ತಿದ್ದರು. ನಂತರ ಕಾರಿನ ಎಂಜಿನ್ ಬಿಸಿ ಆದಾಗ ದುರ್ನಾತ ಹೊರಹೊಮ್ಮುತ್ತಿತ್ತು. ಬಳಿಕ ಚಾಲಕನಿಗೆ ನಿಮ್ಮ ಪೆಟ್ರೋಲ್ ಟ್ಯಾಂಕ್ ಲೀಕ್ ಆಗ್ತಿದೆ ಎಂದು ಹೇಳಿ ಅವರ ಗಮನ ಬೇರೆಡೆ ಹರಿದಾಗ ಒಡವೆ ಅಥವಾ ವಾಹನದಲ್ಲಿ ಇರುತ್ತಿದ್ದ ಲ್ಯಾಪ್ಟಾಪ್ ಅಥವಾ ಅಮೂಲ್ಯವಾದ ಇತರೆ ವಸ್ತುಗಳನ್ನ ಕದ್ದು ಪರಾರಿಯಾಗುತ್ತಿದ್ದರಂತೆ!