ಮೂರು ಮದುವೆಯಾಗಿದ್ದವನ ಅಸ್ತಿಪಂಜರ ದಟ್ಟಾರಣ್ಯದ ಬಾವಿಯಲ್ಲಿ ಸಿಕ್ತು; ಕೊಲೆ ಮಾಡಿದ್ಯಾರು?-ಆರೋಪಿಗಳಿಗಾಗಿ ಹುಡುಕಾಟ

ಲಾಡು ಹೈಬುರುನ ಕುಟುಂಬದವರನ್ನೆಲ್ಲ ವಿಚಾರಣೆ ನಡೆಸಲು ಪೊಲೀಸರು ಶುರು ಮಾಡಿದರು. ಆದರೆ ಅವರು ಪ್ರಾರಂಭದಲ್ಲಿ ಯಾವುದೇ ಮಾಹಿತಿ ನೀಡಲು, ಮಾತನಾಡಲು ಹಿಂಜರಿದರು. ಕೊನೆಗೆ ಅವನ ತಾಯಿ ನಂದಿಯನ್ನು ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

ಮೂರು ಮದುವೆಯಾಗಿದ್ದವನ ಅಸ್ತಿಪಂಜರ ದಟ್ಟಾರಣ್ಯದ ಬಾವಿಯಲ್ಲಿ ಸಿಕ್ತು; ಕೊಲೆ ಮಾಡಿದ್ಯಾರು?-ಆರೋಪಿಗಳಿಗಾಗಿ ಹುಡುಕಾಟ
ಸಾಂಕೇತಿಕ ಚಿತ್ರ
Edited By:

Updated on: Apr 03, 2022 | 3:29 PM

ಜಾರ್ಖಂಡ್​​ನಲ್ಲಿ ನಕ್ಸಲ್​ ಪೀಡಿತ ಪ್ರದೇಶವೆನಿಸಿಕೊಂಡಿರುವ ಪೂರ್ವ ಸಿಂಗ್​ಭೂಮ್​​ ಜಿಲ್ಲೆಯ ಹಳ್ಳಿಯೊಂದರ ಬಾವಿಯಲ್ಲಿ ಅಸ್ತಿಪಂಜರವೊಂದು ಪತ್ತೆಯಾಗಿತ್ತು. ಈ ಘಟನೆಯ ಜಾಡು ಹಿಡಿದ ಪೊಲೀಸರು ಕೇಸ್​ ಬೇಧಿಸಿದ್ದಾರೆ. ಈ ಅಸ್ತಿಪಂಜರ 35 ವರ್ಷದ ವ್ಯಕ್ತಿಯೊಬ್ಬನದ್ದು, ಈತನ ಅತ್ತೆಯ ಮನೆಯವರೇ (ಪತ್ನಿಯ ತವರು ಮನೆ) ಸೇರಿ ಹತ್ಯೆಗೈದಿದ್ದಾರೆ ಎಂಬ ಭಯಾನಕ ಸತ್ಯ ಬೆಳಕಿಗೆ ಬಂದಿದೆ.  ಮೃತನನ್ನು ಲಾಡು ಹೈಬುರು ಎಂದು ಗುರುತಿಸಲಾಗಿದ್ದು, ಇವನು ಮೂರು ಮದುವೆ ಮಾಡಿಕೊಂಡಿದ್ದೇ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

ಲಾಡು ಹೈಬುರು ಮಾರ್ಚ್​ 16ರಿಂದಲೂ ನಾಪತ್ತೆಯಾಗಿದ್ದ. ಆದರೆ  ಆತನ ಕುಟುಂಬದವರು ಪೊಲೀಸರಿಗೆ ದೂರು ನೀಡಿರಲಿಲ್ಲ.  ಅಷ್ಟರಲ್ಲಿ ಅತ್ತ ಬಾವಿಯಲ್ಲಿ ಅಸ್ತಿಪಂಜರವೂ ಸಿಕ್ಕಿತ್ತು. ಅಲ್ಲಲ್ಲೇ ಗುಸುಗುಸು ಮಾತುಗಳೂ ಶುರುವಾಗಿದ್ದವು. ಅದರ ಆಧಾರದ ಮೇಲೆ ಪೊಲೀಸರು ತನಿಖೆ ಶುರು ಮಾಡಿದಾಗ ಈ ಲಾಡು ಕೊನೇ ದಿನ ತನ್ನ ಮೊದಲ ಪತ್ನಿಯ ಸಹೋದರನ ಬಳಿ ಜಗಳವಾಡಿಕೊಂಡೇ ಹೋಗಿದ್ದ ಎಂಬುದು ಗೊತ್ತಾಯಿತು. ಅಷ್ಟೇ ಅಲ್ಲ, ಲಾಡು ಮೂರನೇ ಮದುವೆಯಾಗಿದ್ದು ಗೊತ್ತಾಗುತ್ತಿದ್ದಂತೆ ಆತ ತುಂಬ ಗಲಾಟೆ ಮಾಡಿದ್ದ ಎಂಬುದು ಗೊತ್ತಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ತಮಿಲ್​ ವನನ್​ ತಿಳಿಸಿದ್ದಾರೆ.

ಲಾಡು ಹೈಬುರುನ ಕುಟುಂಬದವರನ್ನೆಲ್ಲ ವಿಚಾರಣೆ ನಡೆಸಲು ಪೊಲೀಸರು ಶುರು ಮಾಡಿದರು. ಆದರೆ ಅವರು ಪ್ರಾರಂಭದಲ್ಲಿ ಯಾವುದೇ ಮಾಹಿತಿ ನೀಡಲು, ಮಾತನಾಡಲು ಹಿಂಜರಿದರು. ಕೊನೆಗೆ ಅವನ ತಾಯಿ ನಂದಿಯನ್ನು ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಅವರು ನೀಡಿದ ಕೆಲವು ಹೇಳಿಕೆಯ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.  ಸದ್ಯ ಕೊಲೆಯಾದ ಲಾಡು ಬಾಮೈದ ಮತ್ತು ಮೂವರು ನಾಪತ್ತೆಯಾಗಿದ್ದಾರೆ. ಅದರಲ್ಲೂ ಈತ ಅಸ್ತಿಪಂಜರ ದಟ್ಟಾರಣ್ಯದ ಬಾವಿಯಲ್ಲಿ ಪತ್ತೆಯಾಗಿದೆ. ಈತನ ಮನೆಯಿಂದ ಸುಮಾರು 10 ಕಿಮೀ ದೂರದಲ್ಲಿ ಆ ಸ್ಥಳವಿದೆ. ಹೆಚ್ಚಿನ ವಿಚಾರಣೆ ನಡೆಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಅಕಟಕಟ’ ಜಾನಕಿ ಆಗಿಬಿಟ್ರು ಚೈತ್ರಾ ಆಚಾರ್​; ಕನ್ನಡದ ಟ್ಯಾಲೆಂಟೆಡ್​ ನಟಿಗೆ ಮತ್ತೊಂದು ಅವಕಾಶ