‘ಪ್ರೀತಿ ಕೊಂದ ಪ್ರೇಯಸಿ’ಯನ್ನೇ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದ ಪ್ರೇಮಿ!

|

Updated on: May 22, 2020 | 1:24 PM

ಬೆಂಗಳೂರು: ಪ್ರೇಮಿಗಳ ನಡುವೆ ಜಗಳ ಶುರುವಾಗಿ ಪ್ರಿಯತಮನೇ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಪ್ರಿಯತಮ ತಿಪ್ಪೇಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ. 8 ತಿಂಗಳ ಹಿಂದೆ ಕ್ಯಾಬ್ ಚಾಲಕ ತಿಪ್ಪೇಸ್ವಾಮಿ ಮತ್ತು ನಯನಾಳಿಗೆ ಪರಿಚಯವಾಗಿತ್ತು. ನಯನಾ ದಿನಸಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. ನಂತರ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ನಯನಾ(25) ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದವಳು. ತಿಪ್ಪೇಸ್ವಾಮಿ ತುಮಕೂರು ಜಿಲ್ಲೆ ಪಾವಗಡ ಮೂಲದವನು. ಇಬ್ಬರು ಕಳೆದ 4 ತಿಂಗಳಿಂದ […]

ಪ್ರೀತಿ ಕೊಂದ ಪ್ರೇಯಸಿ’ಯನ್ನೇ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದ ಪ್ರೇಮಿ!
Follow us on

ಬೆಂಗಳೂರು: ಪ್ರೇಮಿಗಳ ನಡುವೆ ಜಗಳ ಶುರುವಾಗಿ ಪ್ರಿಯತಮನೇ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಪ್ರಿಯತಮ ತಿಪ್ಪೇಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ.

8 ತಿಂಗಳ ಹಿಂದೆ ಕ್ಯಾಬ್ ಚಾಲಕ ತಿಪ್ಪೇಸ್ವಾಮಿ ಮತ್ತು ನಯನಾಳಿಗೆ ಪರಿಚಯವಾಗಿತ್ತು. ನಯನಾ ದಿನಸಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. ನಂತರ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ನಯನಾ(25) ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದವಳು. ತಿಪ್ಪೇಸ್ವಾಮಿ ತುಮಕೂರು ಜಿಲ್ಲೆ ಪಾವಗಡ ಮೂಲದವನು.

ಇಬ್ಬರು ಕಳೆದ 4 ತಿಂಗಳಿಂದ ಲಿವಿಂಗ್ ಟುಗೆದರ್​ನಲ್ಲಿದ್ದರು. ಮೇ 19ರಂದು ತಿಪ್ಪೇಸ್ವಾಮಿ ಮದುವೆಯಾಗೋಣ ಅಂತ ನಯನಾಗೆ ಕೇಳಿದ್ದ. ಆದ್ರೆ ನಯನಾ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಅಂದಿದ್ದಳು. ಮದುವೆಯಾಗುವ ವಿಚಾರವಾಗಿ ಕಿತ್ತಾಟವಾಗಿತ್ತು. ಈ ವೇಳೆ ನಯನಾ ತಿಪ್ಪೇಸ್ವಾಮಿಗೆ ಚಾಕು ಇರಿದು ಹಲ್ಲೆ ನಡೆಸಿದ್ದಳು. ಆಗ ಆಕ್ರೋಶಗೊಂಡ ತಿಪ್ಪೇಸ್ವಾಮಿ, ದೋಸೆ ತವಾದಿಂದ ಹೊಡೆದು ನಯನಾಳನ್ನ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತಿಪ್ಪೇಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ.

Published On - 11:35 am, Fri, 22 May 20