ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದ, ಜಾಮೀನಿನ ಮೇಲೆ ಹೊರಬಂದು ಆಕೆಯನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಿ ಎಲ್ಲೆಡೆ ಎಸೆದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಕುನು ಕಿಸಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಶಿಕ್ಷೆ ತಪ್ಪಿಸಲು ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯನ್ನು ಜಾರ್ಸುಗುಡಾದಿಂದ ಅಪಹರಿಸಿ ರೂರ್ಕೆಲಾದಲ್ಲಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಲಾಗಿತ್ತು, ಮೊದಲು ಆರೋಪಿಯ ಮೇಲೆ ಅನುಮಾನ ಬಂದಿತ್ತು, ಆಗ ಎಲ್ಲೆಲ್ಲಿ ಸಿಸಿಟಿವಿ ಇದೆಯೋ ಅಲ್ಲೆಲ್ಲಾ ಪರಿಶೀಲಿಸಿದಾಗ ಆರೋಪಿ ಹಾಗೂ ಬಾಲಕಿ ಒಟ್ಟಿಗೆ ಇರುವುದು ಕಂಡುಬಂದಿತ್ತು.
ಕಿಸಾನ್ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆರಂಭದಲ್ಲಿ ದೇಹವನ್ನು ಬ್ರಹ್ಮಿಣಿ ನದಿಗೆ ಎಸೆದಿರುವುದಾಗಿ ಹೇಳಿಕೊಂಡಿದ್ದ. ನಂತರ ಹನುಮಾನ್ ಬಾಟಿಕಾ-ತಾರಕೇರಾ ಅಣೆಕಟ್ಟಿನ ಬಳಿ ಕೆಸರು ತುಂಬಿದ ಪ್ರದೇಶದ ಕೆಲವು ಭಾಗಗಳಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದ.
ಮತ್ತಷ್ಟು ಓದಿ: ಬಾಲಕಿ ಮೇಲೆ ಅತ್ಯಾಚಾರ: ಸಹಾಯ ಮಾಡಿದ್ದ ಆರೋಪಿ ಸ್ನೇಹಿತನಿಗೂ ಶಿಕ್ಷೆ ವಿಧಿಸಿದ ಕೋರ್ಟ್
ದೇಶಗಳಲ್ಲಿ ಪತ್ತೆಯಾಗಿದೆ, ಆಕೆಯ ಮುಂಡ ಸೇರಿದಂತೆ ಇತರ ಭಾಗಗಳನ್ನು ಬ್ರಹ್ಮಣಿ ನದಿಯ ದಡದಲ್ಲಿ ಪಾಲಿಥಿನ್ ಚೀಲದಲ್ಲಿ ಸಿಕ್ಕಿವೆ. ಆರೋಪಿ ನಂತರ ತಪ್ಪೊಪ್ಪಿಕೊಂಡಿದ್ದಾನೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಶಿಕ್ಷೆಯನ್ನು ತಪ್ಪಿಸಲು ತಾನು ಕೊಲೆ ಮಾಡಿದ್ದೇನೆ ಎಂದಿದ್ದಾನೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ