ಹೆಂಡತಿಯ ಸೀರೆ ಕದ್ದಿದ್ದಾನೆ ಎಂದು ಪಕ್ಕದ ಮನೆಯವನನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುಗ್ರಾಮದ ನಾಥುಪುರದಲ್ಲಿ ನಡೆದಿದೆ. ಕೊಲೆ ಆರೋಪದ ಮೇಲೆ 50 ವರ್ಷದ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಂಗಳವಾರ ಬೆಳಗ್ಗೆ ಆರೋಪಿ ಅಜಯ್ ಸಿಂಗ್ ಪತ್ನಿ ರೀನಾ ಪಕ್ಕದ ಮನೆಯ ಪಿಂಟು ಕುಮಾರ್ ತನ್ನ ಸೀರೆಯನ್ನು ಕದ್ದಿದ್ದಾನೆ ಎಂದು ಆರೋಪಿಸಿದ್ದಳು, ಪಿಂಟು ಕುಮಾರ್ ಕೂಡ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ರಾತ್ರಿ 8 ಗಂಟೆ ಸುಮಾರಿಗೆ ಪಿಂಟು ತನ್ನ ಕರ್ತವ್ಯದಿಂದ ಹಿಂದಿರುಗಿದಾಗ, ಅಜಯ್ ಪಿಂಟು ವಿರುದ್ಧ ಈ ಆರೋಪ ಮಾಡಿದ್ದಾರೆ ಆದರೆ ಪಿಂಟು ನಾನು ಸೀರೆ ಕದ್ದಿಲ್ಲ ಎಂದು ವಾದಿಸಿದ್ದಾರೆ, ನಂತರ ಈ ವಿಚಾರವೇ ವಾಗ್ವಾದಕ್ಕೆ ಕಾರಣವಾಯಿತು.
ಪಿಂಟುವಿನ ರೂಮ್‌ಮೇಟ್ ಮತ್ತು ಘಟನೆಯ ಪ್ರತ್ಯಕ್ಷದರ್ಶಿ ಅಶೋಕ್ ಕುಮಾರ್ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ಜಗಳದ ಸಮಯದಲ್ಲಿ ಸಿಂಗ್ ತನ್ನ ಡಬಲ್ ಬ್ಯಾರೆಲ್ ಗನ್ ಅನ್ನು ತನ್ನ ಕೋಣೆಯಿಂದ ತಂದು ಪಿಂಟು ಹೊಟ್ಟೆಗೆ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಬಿಹಾರದಲ್ಲಿ ಪತ್ರಕರ್ತನ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿದ ಆಗಂತುಕರು
ನಾವು ಅಜಯ್ ಸಿಂಗ್ ಅವರ ಬಳಿ ಇದ್ದ ಬಂದೂಕನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡಿದ್ದೆವು, ಆದರೆ ಸಾಧ್ಯವಾಗಲಿಲ್ಲ, ಅಷ್ಟರಲ್ಲಿ ಪಿಂಟು ಮೇಲೆ ಗುಂಡು ಹಾರಿಸಿದ್ದ, ನಾವು ಗಾಯಗೊಂಡ ಪಿಂಟು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದೆವು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅಶೋಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ