AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ: ಅತ್ಯಾಚಾರ-ಹತ್ಯೆ ಪ್ರಕರಣದ ಒರ್ವ ಆರೋಪಿ ಕಾಲಿಗೆ ಜಿಗಣಿ ಇನ್ಸ್‌ಪೆಕ್ಟರ್​​​ ಗುಂಡಿಟ್ಟರು

ಮಹಿಳೆ ಹಾಗೂ ಮಗು ಕಾಣದೆ ಇದ್ದಾಗ ಕುಟುಂಬಸ್ಥರಿಂದ ಹುಡುಕಾಟ ನಡೆದಿತ್ತು. ಈ ವೇಳೆ ಆರೋಪಿ ಹರೀಶ್ ಸಹ ಹುಡುಕಾಡುವ ಡ್ರಾಮಾ ಮಾಡಿದ್ದ. ಹುಡುಕಲು ಹೋದ ಕೆಲವೇ ನಿಮಿಷದಲ್ಲಿ ಮಹಿಳೆ ಜೊತೆಯಲ್ಲಿದ್ದ ಮಗುವನ್ನ ಆರೋಪಿ ಕರೆತಂದಿದ್ದ. ಇದರಿಂದ ಜಾಗೃತರಾದ ಪೊಲೀಸರು ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನ ಐದೇ ನಿಮಿಷದಲ್ಲಿ ಕರೆತಂದಿದ್ದ ಆರೋಪಿ ಹರೀಶನನ್ನ ಠಾಣೆಗೆ ಕರೆತಂದು ವಿಚಾರಿಸಿಕೊಳ್ಲಲು ಶುರುಮಾಡಿದರು

ಬನ್ನೇರುಘಟ್ಟ: ಅತ್ಯಾಚಾರ-ಹತ್ಯೆ ಪ್ರಕರಣದ ಒರ್ವ ಆರೋಪಿ ಕಾಲಿಗೆ ಜಿಗಣಿ ಇನ್ಸ್‌ಪೆಕ್ಟರ್​​​ ಗುಂಡಿಟ್ಟರು
ಅತ್ಯಾಚಾರ-ಹತ್ಯೆ ಪ್ರಕರಣ ಒರ್ವ ಆರೋಪಿ ಕಾಲಿಗೆ ಜಿಗಣಿ ಇನ್ಸ್‌ಪೆಕ್ಟರ್​​​ ಗುಂಡಿಟ್ಟರು
Follow us
ರಾಮು, ಆನೇಕಲ್​
| Updated By: ಸಾಧು ಶ್ರೀನಾಥ್​

Updated on:Aug 18, 2023 | 1:39 PM

ಆನೇಕಲ್, ಆಗಸ್ಟ್​ 18​: ರಾಜಧಾನಿ ಬೆಂಗಳೂರು ಪೊಲೀಸರ ಪಿಸ್ತೂಲ್ ಮತ್ತೆ ಸದ್ದು ಮಾಡಿದೆ. ಮಹಿಳೆಯನ್ನ ಅತ್ಯಾಚಾರ ಮಾಡಿ ಕೊಲೈಗೈದಿದ್ದ ಕಾಮುಕನ ಕಾಲಿಗೆ ಗುಂಡೇಟು ಬಿದ್ದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಫೈರಿಂಗ್ ಆಗಿದೆ. ಬನ್ನೇರುಘಟ್ಟ ಬಳಿಯ ಬ್ಯಾಟರಾಯನದೊಡ್ಡಿಯಲ್ಲಿ ನಡೆದಿದ್ದ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ (Rape, Murder) ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿ ಸೋಮ ಅಲಿಯಾಸ್ ಸೋಮಶೇಖರ್ ಕಾಲಿಗೆ ಪೊಲೀಸರು ಗುಂಡಿಟ್ಟಿದ್ದಾರೆ (Firing). ಬೆಂಗಳೂರಿನ ಬನ್ನೇರುಘಟ್ಟ (Bannerghatta) ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಇಂದು ಶುಕ್ರವಾರ ಬೆಳಗ್ಗೆ ಸ್ಥಳ ಮಹಜರಿಗೆ ಕರೆದೊಯ್ಯುವಾಗ ಪರಾರಿಯಾಗಲು ಆರೋಪಿ ಯತ್ನಿಸಿದಾಗ ಪೊಲೀಸ್​​ ಫೈರಿಂಗ್ ಆಗಿದೆ. ಆರೋಪಿ ಸೋಮ ಪಿಸಿ ಮಾದಪ್ಪ ಮೇಲೆ ಡ್ಯಾಗರ್​ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯ ಎಡಗಾಲಿಗೆ ಕಾಲಿಗೆ ಜಿಗಣಿ (Jigani) ಇನ್ಸ್‌ಪೆಕ್ಟರ್ ಮಂಜುನಾಥ್​ರಿಂದ ಫೈರಿಂಗ್ ಆಗಿದೆ. ಆರೋಪಿ ಸೋಮನಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯಲ್ಲಿ ಮನೆಯಿಂದ ಹೊರಹೋದ ಮುನಿರತ್ನ(38) ಎಂಬ ಮಹಿಳೆಯ ಮೇಲೆ ಕಾಮುಕ ಸೋಮ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ. ಬ್ಯಾಟರಾಯನದೊಡ್ಡಿ ಮಹಿಳೆಯ ಮೇಲೆ ಎರಗಿದ್ದ ಮೂವರು ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಹಿಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಗೊತ್ತಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ಕು ತಂಡಗಳನ್ನು ರಚನೆ ಮಾಡಿ, ಫೀಲ್ಡ್​​ಗೆ ಇಳಿದಿದ್ದರು.

ಗಾಂಜಾ ಮತ್ತಿನಲ್ಲಿ ಮಹಿಳೆ ಮೇಲೆ ಕಿರಾತಕರು ಅತ್ಯಾಚಾರ ಎಸಗಿದ್ದರು. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಳಿಕ ಕಿರಾತಕರು ಗ್ರಾಮದಲ್ಲಿಯೇ ಇದ್ದರು. ಮೃತ ದೇಹ ಸಿಕ್ಕ ಜಾಗದಲ್ಲಿ ಯಾರಿಗೂ ಸಂಶಯ ಬರದಂತೆ ಓಡಾಡಿಕೊಂಡಿದ್ದರು. ಆರೋಪಿ ಹರೀಶ್‌ ಎಂಬುವನು ಮಾಧ್ಯಮಗಳಿಗೆ ಬೈಟ್ ಸಹ ನೀಡಿದ್ದ. ಪೋಲೀಸರ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಿದ್ದ ಆರೋಪಿಗಳು

ಮಹಿಳೆ ಹಾಗೂ ಮಗು ಕಾಣದೆ ಇದ್ದಾಗ ಕುಟುಂಬಸ್ಥರಿಂದ ಹುಡುಕಾಟ ನಡೆದಿತ್ತು. ಈ ವೇಳೆ ಆರೋಪಿ ಹರೀಶ್ ಸಹ ಹುಡುಕಾಡುವ ಡ್ರಾಮಾ ಮಾಡಿದ್ದ. ಹುಡುಕಲು ಹೋದ ಕೆಲವೇ ನಿಮಿಷದಲ್ಲಿ ಮಹಿಳೆ ಜೊತೆಯಲ್ಲಿದ್ದ ಮಗುವನ್ನ ಆರೋಪಿ ಕರೆತಂದಿದ್ದ.

ಇದರಿಂದ ಜಾಗೃತರಾದ ಪೊಲೀಸರು ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನ ಐದೇ ನಿಮಿಷದಲ್ಲಿ ಕರೆತಂದಿದ್ದ ಆರೋಪಿ ಹರೀಶನನ್ನ ಠಾಣೆಗೆ ಕರೆತಂದು ವಿಚಾರಿಸಿಕೊಳ್ಲಲು ಶುರುಮಾಡಿದರು. ಎಷ್ಟೇ ಕೇಳಿದ್ರು ಅಸಾಮಿ ಒಂದೊಂದು ಕಥೆ ಕಟ್ಟುತ್ತಿದ್ದ. ವಿಚಾರಣೆ ಮುಂದುವರಿದಂತೆ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ನಿಜಾಂಶವನ್ನ ಕಕ್ಕಿದ್ದ ಕಾಮುಕ. ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಮೂವರು ಸೇರಿ ಅತ್ಯಾಚಾರ ಎಸಗಿರೋ ಬಗ್ಗೆ ಬಾಯ್ಬಿಟ್ಟಿ ಕಿರಾತಕ. ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದ ಚಾಣಾಕ್ಷತನದ ತನಿಖೆಯಿಂದ ಪ್ರಕರಣದಲ್ಲಿ ಆರೋಪಿಗಳನ್ನು ಹೆಡೆಮುರಿಗೆ ಕಟ್ಟಲಾಗಿದೆ.

ಬನ್ನೇರುಘಟ್ಟ: ಅತ್ಯಾಚಾರ-ಹತ್ಯೆ ಪ್ರಕರಣದ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೀಡಿರುವ ಹೇಳಿಕೆ ಹೀಗಿದೆ:

ಬ್ಯಾಟರಾಯನದೊಡ್ಡಿ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಬ್ಯಾಟರಾಯನದೊಡ್ಡಿ ವಾಸಿಗಳಾದ ಸೋಮಶೇಖರ್(25), ಹರೀಶ್(33) ಮತ್ತು ಜಯಂತ್(20) ಬಂಧಿತರು. ಆರೋಪಿ ಸೋಮಶೇಖರ್ ಮೇಲೆ ರಾಮನಗರ ತಲಘಟ್ಟಪುರ ಠಾಣೆಯಲ್ಲಿ ಕೊಲೆ ಡಕಾಯಿತಿ ಪ್ರಕರಣವೂ ದಾಖಲಾಗಿದೆ. ಮೂವರೂ ಆರೋಪಿಗಳು ಆಗಾಗ ಸೇರುತ್ತಿದ್ದರು. ಒಟ್ಟಾಗಿ ಗಾಂಜಾ ಸೇವನೆ ಮಾಡುತ್ತಿದ್ದರು. ಕೊಲೆ ಮಾಡಿದ ಬಳಿಕವೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗಲೂ ಪೊಲೀಸರ ಬೆನ್ನಲ್ಲೇ ಇದ್ದರು. ಯಾರಿಗೂ ಡೌಟ್ ಬಾರದ ರೀತಿಯಲ್ಲಿ ನಡೆದುಕೊಂಡಿದ್ದರು. ಸಿಸಿಟಿವಿ ದೃಶ್ಯವಾಳಿಗಳನ್ನು ಆಧರಿಸಿ ತನಿಖೆ ಮಾಡಿದ್ದೇವೆ. ಡಾಗ್ ಸ್ಕ್ವಾಡ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಡಾಗ್ ಸ್ವ್ಕಾಡ್ ಓರ್ವ ಆರೋಪಿ ಮನೆವರೆಗೆ ಹೋಗಿ ವಾಪಸ್ ಆಗಿತ್ತು. ಸೋಮಶೇಖರ್ ಒಂದು ಟ್ಯಾಬ್ ಲೇಟ್ ನಶೆಗಾಗಿ ಬಳಸುತ್ತಿದ್ದ. ಅತ್ಯಾಚಾರ ಎಸಗಿದ ವೇಳೆಯೂ ಮಾದಕ ವಸ್ತು ಸಿರಿಂಜ್ ಮೂಲಕ ಬಳಸಿದ್ದ ಕಾಮುಕ ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನೇಕಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:08 am, Fri, 18 August 23

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್