ಪತ್ನಿಯನ್ನು ಜನ ಕಳ್ಳಿ..ಕಳ್ಳಿ ಎಂದು ಹೀಯಾಳಿಸುವುದನ್ನ ಸಹಿಸಲಾಗದೇ ಆಕೆಯನ್ನೇ ಹತ್ಯೆಗೈದ ಪತಿ, ಬಳಿಕ ಪೊಲೀಸ್ ಠಾಣೆಗೆ ಬಂದ

| Updated By: ರಮೇಶ್ ಬಿ. ಜವಳಗೇರಾ

Updated on: Aug 08, 2023 | 3:33 PM

ಪತ್ನಿಯನ್ನು ಜನ ಕಳ್ಳಿ ಕಳ್ಳಿ ಎಂದು ಕರೆಯುವುದನ್ನು ಸಹಿಸಲಾಗದೇ ಪತಿ, ಆಕೆಯನ್ನೇ ಕೊಂದು ಬಳಿಕ ಪೊಲೀಸ್​ ಠಾಣೆ ಬಂದು ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪತ್ನಿಯನ್ನು ಜನ ಕಳ್ಳಿ..ಕಳ್ಳಿ ಎಂದು ಹೀಯಾಳಿಸುವುದನ್ನ ಸಹಿಸಲಾಗದೇ ಆಕೆಯನ್ನೇ ಹತ್ಯೆಗೈದ ಪತಿ, ಬಳಿಕ ಪೊಲೀಸ್ ಠಾಣೆಗೆ ಬಂದ
ಕೊಲೆ ಮಾಡಿದ ತಾರಾನಾಥ್
Follow us on

ಬೆಂಗಳೂರು, (ಆಗಸ್ಟ್ 08): ವ್ಯಕ್ತಿಯೋರ್ವ ತನ್ನ ಪತ್ನಿಯನ್ನು (Wife) ಕೊಂದು ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಮೂಲತಃ ಮಂಗಳೂರು (Mangaluru) ಮೂಲದ ತಾರಾನಾಥ್, ಬೆಂಗಳೂರಿನಲ್ಲಿ ಪಾನೀಪುರಿ ಅಂಗಡಿ ನಡೆಸುತ್ತಿದ್ದ. ಆದ್ರೆ, ತಾರಾನಾಥ್ ಪತ್ನಿಯ ಮೇಲೆ ಈ ಹಿಂದೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತಾರಾನಾಥ್ ಪತ್ನಿಯನ್ನು ಜನ ಕಳ್ಳಿ‌ ಕಳ್ಳಿ ಎಂದು ಹೀಯಾಳಿಸುತ್ತಿದ್ದರು. ಇದನ್ನು ಸಹಿಸಲಾಗದೇ ತಾರಾನಾಥ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹಗ್ಗದಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದ್ರೆ, ಧೈರ್ಯ ಸಾಲದೇ ತಾರಾನಾಥ್, ನೇರವಾಗಿ ವೈಟ್ ಫೀಲ್ಡ್ ಪೊಲೀಸ್​ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ರೌಡಿ ನಾಗನ ಗೆಳೆಯನ ಕೊಲೆಯ ಪ್ರತೀಕಾರವಾಗಿ ರೌಡಿ ಮಹೇಶನ ಹತ್ಯೆ! ಹೇಗಿತ್ತು ಗೊತ್ತಾ ಕೊಲೆ ಸ್ಕೆಚ್?

ಪತ್ನಿಯನ್ನು ಜನ ಕಳ್ಳಿ‌ ಕಳ್ಳಿ ಎಂದು ಕರೆಯುತ್ತಿರುವುದನ್ನು ಸಹಿಸದೇ ಕೊಲೆ ಮಾಡಿರುವುದಾಗಿ ತಾರಾನಾಥ್, ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ವೈಟ್ ಫೀಲ್ಡ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮರಕ್ಕೆ ಡಿಕ್ಕಿಯಾಗಿ ಬೈಕ್​ ಸವಾರ ಸಾವು

ಬೆಂಗಳೂರು: ದ್ವಿಚಕ್ರ ವಾಹನವೊಂದು ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಶವಂತಪುರ ಬಳಿ ನಡೆದಿದೆ. ತ್ರಿಪುರ ಮೂಲದ ಬಿಜ್ಜು ಸೆಲ್ಫ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿ. ಇವರು ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್ ಮನೆಯಲ್ಲಿ ಕೆಲಸ ಮಾಡುತಿದ್ದ. ಸಂಬಂಧಿ‌ಯೊಬ್ಬನನ್ನು ಡ್ರಾಪ್ ಮಾಡಿ, ಯಶವಂತಪುರದಿಂದ ಮಲ್ಲೇಶ್ವರಂನ ಅನೂಪ್ ಅಯ್ಯರ್ ಮನೆಗೆ ಬರುತಿದ್ದ ವೇಳೆ ಅಪಘಾತವಾಗಿದೆ. ಮೃತ ದೇಹವನ್ನು ಪೊಲೀಸರು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದು, ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ