ಮಂಡ್ಯದಲ್ಲಿ ಬುದ್ಧಿಮಾಂದ್ಯ ಮಹಿಳೆಯ ರೇಪ್​ & ಮರ್ಡರ್? ಜಮೀನೊಂದರಲ್ಲಿ ಬೆತ್ತಲೆ ಶವ ಪತ್ತೆ

ರಾಷ್ಟ್ರೀಯ ಹೆದ್ದಾರಿ ಪಕ್ಕದ ಹರ್ಷ ಹೋಟೆಲ್ ಸಮೀಪದ ಪಾಳು ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ಬುದ್ಧಿಮಾಂದ್ಯ ಮಹಿಳೆ ಇಂದು ಬೆತ್ತಲೆ ಶವವಾಗಿ ಪತ್ತೆಯಾಗಿದ್ದಾರೆ. ಪಾಳು ಜಮೀನಿನಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಂಡ್ಯದಲ್ಲಿ ಬುದ್ಧಿಮಾಂದ್ಯ ಮಹಿಳೆಯ ರೇಪ್​ & ಮರ್ಡರ್? ಜಮೀನೊಂದರಲ್ಲಿ ಬೆತ್ತಲೆ ಶವ ಪತ್ತೆ
ಘಟನಾ ಸ್ಥಳದಲ್ಲಿ ನೆರೆದಿರುವ ಪೊಲೀಸರು
Updated By: ಆಯೇಷಾ ಬಾನು

Updated on: Jan 14, 2024 | 10:59 AM

ಮಂಡ್ಯ, ಜ.14: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಪಾಳುಬಿದ್ದ ಜಮೀನಲ್ಲಿ ಮಹಿಳೆಯ ಬೆತ್ತಲೆ ಮೃತ ದೇಹ (Rape And Murder) ಪತ್ತೆಯಾಗಿದ್ದು ಬುದ್ಧಿಮಾಂದ್ಯ ಮಹಿಳೆ ರೇಪ್​ ಮಾಡಿ ಹತ್ಯೆಗೈದ ಶಂಕೆ ವ್ಯಕ್ತವಾಗಿದೆ. ಮಂಡ್ಯ (Mandya) ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ತಿರುಮಲಪುರ ಗ್ರಾಮದ 29 ವರ್ಷದ ಮಹಿಳೆಯ ಮೃತ ದೇಹ ಎಂದು ಗುರುತಿಸಲಾಗಿದೆ. ಬೆಳ್ಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಹರ್ಷ ಹೋಟೆಲ್ ಸಮೀಪದ ಪಾಳು ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ಬುದ್ಧಿಮಾಂದ್ಯ ಮಹಿಳೆ ಇಂದು ಬೆತ್ತಲೆ ಶವವಾಗಿ ಪತ್ತೆಯಾಗಿದ್ದಾರೆ. ಪಾಳು ಜಮೀನಿನಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್​ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, 2 ಸಾವು

ವ್ಯಕ್ತಿ ಕೊಂದು ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಇನ್ನು ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಕೆರೆ ಬಳಿ ದುಷ್ಕರ್ಮಿಗಳು ವ್ಯಕ್ತಿಯ ಹತ್ಯೆಗೈದು ಶವ ಸುಟ್ಟು ಹಾಕಿದ್ದಾರೆ. ಆಂಧ್ರ ಕರ್ನಾಟಕ ಗಡಿ ವಂಡಮಾನ್ ಕೆರೆ ಬಳಿ ಘಟನೆ ನಡೆದಿದೆ. ದಾದಿವಾರಪಲ್ಲಿ ಗ್ರಾಮದ ವೆಂಕಟರಮಣ ನಾಯಕ್ (45) ಕೊಲೆಯಾದ ವ್ಯಕ್ತಿ. ಆಂಧ್ರ ಪೊಲೀಸರು ಕೊಲೆ ಆರೋಪಿ ಬಾಬುನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ