Matrimonial App fraud: ಮ್ಯಾಟ್ರಿಮೋನಿ ಆ್ಯಪ್ ವಂಚನೆ: ಕೇರಳ ಕುಟ್ಟಿಗಳ ಮಾತಿಗೆ ಮರುಳಾದ ಶಿಕ್ಷಕ, ಹಣದ ಜೊತೆಗೆ ಕೆಲಸವೂ ಕಳೆದುಕೊಂಡ

ಯುವತಿ ಆರಂಭದಲ್ಲಿಯೇ... ತನಗೆ ಎಂಬಿಬಿಎಸ್ ಓದಲು ಸಹಾಯ ಮಾಡುವಂತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಓದು ಮುಗಿದ ನಂತರ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಪೀಕಿದ್ದಾರೆ ಆ ಯುವತಿಯರ ಗ್ಯಾಂಗ್! ಹಣ ಕಳೆದುಕೊಂಡು ಕಂಗಾಲಾದ ನಂತರ ಶಿಕ್ಷಕ ದೇವೇಂದ್ರಪ್ಪ ಅನ್ಯ ಮಾರ್ಗ ಕಾಣದೆ ಠಾಣೆಯ ಮೇಟ್ಟಿಲೇರಿದ್ದಾರೆ.

Matrimonial App fraud: ಮ್ಯಾಟ್ರಿಮೋನಿ ಆ್ಯಪ್ ವಂಚನೆ: ಕೇರಳ ಕುಟ್ಟಿಗಳ ಮಾತಿಗೆ ಮರುಳಾದ ಶಿಕ್ಷಕ, ಹಣದ ಜೊತೆಗೆ ಕೆಲಸವೂ ಕಳೆದುಕೊಂಡ
ಕೇರಳ ಕುಟ್ಟಿಗಳ ಮಾತಿಗೆ ಮರುಳಾದ ಶಿಕ್ಷಕ, ಹಣದ ಜೊತೆಗೆ ಕೆಲಸವೂ ಕಳೆದುಕೊಂಡ
Updated By: ಸಾಧು ಶ್ರೀನಾಥ್​

Updated on: Dec 14, 2022 | 12:42 PM

ಬಳ್ಳಾರಿ: ಮ್ಯಾಟ್ರಿಮೋನಿ ಆ್ಯಪ್ ದುರ್ಬಳಕೆ ಮಾಡಿ (Matrimonial App online fraud) ಶಿಕ್ಷಕನಿಗೆ ವಂಚನೆ ಎಸಗಲಾಗಿದೆ. ಕೇರಳ ಮೂಲದ ಯುವತಿಯರ ಮಾತಿಗೆ ಮರುಳಾಗಿ ಶಿಕ್ಷಕ ಬರೋಬ್ಬರಿ 8.5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಶಿಕ್ಷಕ (teacher) ಇದೀಗ ಕೆಲಸದ ಜೊತೆಗೆ ಲಕ್ಷ ಲಕ್ಷ ಹಣವೂ ಕಳೆದುಕೊಂಡಿದ್ದಾರೆ. ಪೋಟೋ ನೋಡಿಯೇ ಕೇರಳದ ಚೆಲುವೆಗೆ ಈ ಶಿಕ್ಷಕ ಮಹಾಶಯ ಮನಸೋತಿದ್ದಾನೆ (online fraud).

ತಾನು ಎಂಬಿಬಿಎಸ್ ವಿದ್ಯಾರ್ಥಿನಿಯೆಂದು ನಂಬಿಸಿ ಕೇರಳದ ಆ ಯುವತಿ ಮೋಸ ಮಾಡಿದ್ದಾಳೆ. ಒಂದು ವಂಚಕ ತಂಡವೇ ಇದರಲ್ಲಿ ಭಾಗಿಯಾಗಿದೆ. ಹಲವು ದಿನಗಳಿಂದ ನಿರಂತರವಾಗಿ ವಾಟ್ಸಾಪ್ ಚಾಟ್, ಫೋನ್ ಕಾಲ್ ಮಾಡಿ ಯುವತಿಯರು ವಂಚಿಸಿದ್ದಾರೆ.

ಚೆಲುವೆಯ ಅಂದಚೆಂದ ನೋಡಿ ಲಕ್ಷ ಲಕ್ಷ ಹಣ ಕಳೆದುಕೊಂಡ ಶಿಕ್ಷಕನ ಪರದಾಟ ಹೇಳತೀರದಾಗಿದೆ. ಸಂಡೂರು ತಾಲೂಕಿನ (sandur, bellary) ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಎಂಬುವವರೇ ಮೋಸಕ್ಕೀಡಾದ ವ್ಯಕ್ತಿ. ಹರ್ಷಿತಾ ಎಂಬ ಹೆಸರಿನಲ್ಲಿ ಯುವತಿ ವಂಚನೆ ಎಸಗಿದ್ದಾಳೆ. ಆದರೆ ಹರ್ಷಿತಾ ಸ್ನೇಹಿತನ ಹೆಸರಿನಲ್ಲಿ ಹಣ ಪಡೆದಿದ್ದಾಳೆ. ನಮ್ಮ ಈ ಶಿಕ್ಷಕ ಮಹಾಶಯ ಯುವತಿಯ ಬಣ್ಣ ಬಣ್ಣದ ಮಾತು ನಂಬಿ ಹೈದ್ರಾಬಾದ್ ವರೆಗೂ ಹೋಗಿಬಂದಿದ್ದಾರೆ. ಅಂದಹಾಗೆ ಶಿಕ್ಷಕ ದೇವೇಂದ್ರಪ್ಪನನ್ನು ಸಂಡೂರಿನ ಖಾಸಗಿ ಶಾಲೆ ಕೆಲಸದಿಂದ ವಜಾಗೊಳಿಸಿದೆ.

Also Read: ಶಿರಾಳಕೊಪ್ಪ: ಸುಂದರಿಯ ಬೆನ್ನುಬಿದ್ದು ಮದುವೆಯಾಗಿದ್ದ ಆತ, ಆದರೆ ಕೆಲವೇ ತಿಂಗಳಿಗೆ ಪ್ರೀತಿ ಕಮ್ಮಿಯಾಯ್ತು, ಮುಂದೆ ನಡೆಯಿತು ದುರಂತ

ಯುವತಿ ಆರಂಭದಲ್ಲಿಯೇ ತನಗೆ ಎಂಬಿಬಿಎಸ್ ಓದಲು ಸಹಾಯ ಮಾಡುವಂತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಓದು ಮುಗಿದ ನಂತರ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಪೀಕಿದ್ದಾರೆ ಆ ಯುವತಿಯರ ಗ್ಯಾಂಗ್! ಹಣ ಕಳೆದುಕೊಂಡು ಕಂಗಾಲಾದ ನಂತರ ಶಿಕ್ಷಕ ದೇವೇಂದ್ರಪ್ಪ ಅನ್ಯ ಮಾರ್ಗ ಕಾಣದೆ ಠಾಣೆಯ ಮೇಟ್ಟಿಲೇರಿದ್ದಾರೆ. ಈ ಸಂಬಂಧ ಇದೀಗ ಬಳ್ಳಾರಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ