ಡೇಟಿಂಗ್ ಆ್ಯಪ್​ನಲ್ಲಿ ಪ್ರೇಮಾಂಕುರ: ತನನ್ನು ನೋಡಲು ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗ ಮಾರಿದ ಪ್ರಿಯಕರ..

| Updated By: ರಮೇಶ್ ಬಿ. ಜವಳಗೇರಾ

Updated on: Nov 26, 2022 | 7:01 PM

ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾಗಿ 31 ವರ್ಷದ ವಿದ್ಯಾರ್ಥಿ ಮೇಲೆ 51 ವರ್ಷ ಮಹಿಳೆಗೆ ಪ್ರೇಮಾಕುರವಾಗಿದೆ. ಬಳಿಕ ತನ್ನ ಪ್ರೇಮಿಯನ್ನು ನೋಡಲು ಬಂದ ಪ್ರೇಯಸಿ ದುರಂತ ಅಂತ್ಯ ಕಂಡಿದ್ದಾಳೆ.

ಡೇಟಿಂಗ್ ಆ್ಯಪ್​ನಲ್ಲಿ ಪ್ರೇಮಾಂಕುರ: ತನನ್ನು ನೋಡಲು ಬಂದ ಪ್ರೇಯಸಿಯನ್ನು ಕೊಂದು ಅಂಗಾಂಗ ಮಾರಿದ ಪ್ರಿಯಕರ..
ಪ್ರೇಯಸಿಯನ್ನು ಕೊಂದ ಪ್ರಿಯಕರ
Follow us on

ಇತ್ತೀಚೆಗಷ್ಟೆ ದೆಹಲಿಯಲ್ಲಿ ಅಫ್ತಾಬ್ ಎನ್ನುವಾತ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದು ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ 35 ಭಾಗಗಳನ್ನು ಮಾಡಿ ಬಿಸಾಡಿದ್ದ. ಈ ವಿಕೃತ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂಥಹದ್ದೇ ಘಟನೆ ನಡೆದಿದೆ. ಆದ್ರೆ, ಈ ಘಟನೆ ನಡೆದಿದ್ದು ಭಾರತದಲ್ಲಿ ಅಲ್ಲ. ಬದಲಾಗಿ ದೂರದ ಪೆರು ದೇಶದಲ್ಲಿ.

ಹೌದು..ಇಲ್ಲೋರ್ವ ವಿಕೃತ ಮಸ್ಥಿತಿಯ ಸೈಕೋ ಪ್ರೇಮಿ, ತನನ್ನು ನೋಡಲು ಮೆಕ್ಸಿಕೋದಿಂದ 5 ಸಾವಿರ ಕಿ.ಮೀ ದೂರದ ಪೆರುವಿಗೆ ಬಂದ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಅಲ್ಲದೇ ಆಘಾತಕಾರಿ ಅಂಶ ಅಂದ್ರೆ ಆಕೆಯ ಅಂಗಾಂಗಗಳನ್ನ ಕತ್ತರಿಸಿ ಬಿಡಿ-ಬಿಡಿ ಮಾಡಿ ಮಾರಾಟ ಮಾಡಿದ್ದಾನೆ.

ಆನ್​ಲೈನ್ ಡೇಟಿಂಗ್ ಆ್ಯಪ್​ನಲ್ಲಿ 51 ವರ್ಷದ ಬ್ಲಾಂಕಾ ಅರೆಲಾನೊ ಹಾಗೂ 31 ವರ್ಷದ ಮೆಡಿಕಲ್ ವಿದ್ಯಾರ್ಥಿ ಜುವಾನ್ ಪಾಬ್ಲೊ ಜೀಸಸ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಬ್ಲಾಂಕಾ ಅರೆಲ್ಲನೋಗೆ ಪ್ರಿಯತಮ ವಾನ್ ಪಾಬ್ಲೊ ಜೀಸಸ್​ನನ್ನು ನೋಡುವ ಆಸೆಯಾಗಿದೆ. ಈ ಹಿನ್ನೆಲೆಯಲ್ಲಿ ಜುವಾನ್​ನನ್ನು ನೋಡಲು ಪ್ರೇಯಸಿ ಬ್ಲಾಂಕಾ ಅರೆಲ್ಲನೋ ಮೆಕ್ಸಿಕೋದಿಂದ ಸುಮಾರು 5 ಸಾವಿರ ಕಿ. ಮೀಟರ್ ದೂರ ಇರುವ ಪೆರುವಿಗೆ ಬಂದಿದ್ದಾಳೆ. ನಂತರ ಇಬ್ಬರು ಒಂದು ವಾರ ಸುತ್ತಾಡುತ್ತಾ ಜೊತೆಯಲ್ಲೇ ಇದ್ದರು. ಒಂದು ವಾರದ ನಂತರ ಸೈಕೋ ಪ್ರೇಮಿಗೆ ಅದೇನಾಯ್ತೋ ಏನೋ ಗೊತ್ತಿಲ್ಲ. ಏಕಾಏಕಿ ಆಕೆಯನ್ನ ಹತ್ಯೆ ಮಾಡಿದ್ದಾನೆ.

ಬ್ಲಾಂಕಾ ಮನೆಯಿಂದ ಬರುವಾಗ ತನ್ನ ಪೋಷಕರಿಗೆ ಈತನನ್ನು ಪ್ರೀತಿಸುತ್ತಿರೋದಾಗಿ ಹೇಳಿ ಬಂದಿದ್ದಳಂತೆ. ನವೆಂಬರ್ 7ರ ವರೆಗೆ ಆಕೆ ಕುಟುಂಬದ ಸಂಪರ್ಕದಲ್ಲಿ ಇದ್ದಳಂತೆ. ನಂತರ ಆಕೆ ಸಂಪರ್ಕಕ್ಕೆ ಸಿಗದೇ ಹೋದಾಗ ಆಕೆಯ ಪತ್ತೆಗೆ ಸಹಕಾರ ಕೇಳುತ್ತಿದ್ದೇನೆ ಎಂದು ಬ್ಲಾಂಕಾ ಅರೆಲ್ಲನೋ ಸೊಸೆ ಕಾರ್ಲಾ ಎನ್ನುವಾಕೆ ಟ್ವೀಟ್ ಮೂಲಕ ಮನವಿ ಮಾಡಿದ್ದಳು.

ಅಲ್ಲದೇ ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ತನಿಖೆ ಕೈಗೊಂಡ ಪೊಲೀಸರು ನವೆಂಬರ್ 17 ರಂದು ಪ್ರೇಮಿ ಜುವಾನ್ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಇನ್ನು ಆಕೆಯ ಅಂಗಾಂಗಗಳನ್ನು ಮಾರಾಟ ಮಾಡೋದಿಕ್ಕಾಗಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ