ಯಾದಗಿರಿ, ಜುಲೈ 08: ಎರಡು ತಿಂಗಳ ಹಸುಗೂಸನ್ನು (2 Months Baby) ಕೊಲೆ ಮಾಡಿದ ಅಪ್ರಾಪ್ತೆಯನ್ನು ಯಾದಗಿರಿ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಯಾದಗಿರಿ (Yadgiri) ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್, ಚಟ್ಟೆಮ್ಮ ಎಂಬ ದಂಪತಿ ವಾಸವಾಗಿದ್ದಾರೆ. ದಂಪತಿಯ ಮಗು ಮೀನಾಕ್ಷಿ ಮೃತ ಹಸುಗೂಸು. ಕೊಲೆ ಮಾಡಿದ ಅಪ್ರಾಪ್ತೆ ಪಕ್ಕದ ಮನೆಯಲ್ಲೇ ವಾಸವಾಗಿದ್ದಳು. ಅಪ್ರಾಪ್ತೆ ಮೀನಾಕ್ಷಿಯು ಚಿಕ್ಕಪ್ಪ ನಾಗೇಶ್ನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ಅಪ್ರಾಪ್ತೆ ಆತನಿಗೆ ಹೇಳಿದ್ದಳು. ಆದರೆ, ಮೀನಾಕ್ಷಿಯ ಚಿಕ್ಕಪ್ಪ ಅಪ್ರಾಪ್ತೆಯ ಪ್ರೀತಿಯನ್ನು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಅಪ್ರಾಪ್ತೆ ನಾಗೇಶ್, ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿಯನ್ನು ಬಾವಿಯೊಳಗೆ ಹಾಕಿದ್ದಾಳೆ.
ಬಳಿಕ ಮೀನಾಕ್ಷಿಯನ್ನು ಆತನ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮಗು ಕಾಣದಿದ್ದಾಗ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದ್ದಾರೆ. ಅವರೊಂದಿಗೆ, ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಬೇರೊಬ್ಬಳ ಜೊತೆ ಸಂಬಂಧ, ಸ್ನೇಹಿತರಿಗೆ ಮದ್ಯ ಸರ್ವ್ ಮಾಡುವಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿ ವಿರುದ್ಧ ದೂರು
ಈ ವಿಚಾರ ತಿಳಿದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ. ಅಪ್ರಾಪ್ತೆಯನ್ನು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದಾಗ, “ಮೀನಾಕ್ಷಿ ಚಿಕ್ಕಪ್ಪ ನನ್ನ ಪ್ರೀತಿ ನಿರಾಕರಿಸಿದರು. ಈ ಸಿಟ್ಟಿನಲ್ಲಿ ಕೊಲೆ ಪ್ರಕರಣದಲ್ಲಿ ಮೀನಾಕ್ಷಿ ಚಿಕ್ಕಪ್ಪ ಜೈಲಿಗೆ ಹೋಗಲಿ ಅಂತ ಈ ಕೃತ್ಯ ಎಸಗಿದ್ದೇನೆ” ಎಂದು ಪೊಲೀಸರ ಎದುರು ಅಪ್ರಾಪ್ತೆ ಬಾಯಿ ಬಿಟ್ಟಿದ್ದಾಳೆ.” ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಹೆಡಗರಹಳ್ಳಿ ಗ್ರಾಮದಲ್ಲಿ ಮೂರು ತಿಂಗಳ ಹೆಣ್ಣು ಮಗು ಪತ್ತೆಯಾಗಿದೆ. ಆಶಾ ಕಾರ್ಯಕರ್ತೆಯೊಬ್ಬರು ವಾಕಿಂಗ್ ಮಾಡುವ ವೇಳೆ ಮಗುವಿನ ಅಳುವ ಶಬ್ಧ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಇತ್ತು.
ಆಶಾ ಕಾರ್ಯಕರ್ತೆ ಕಲಾವತಿ ತಕ್ಷಣ ನೊಣವಿನಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಂಬುಲೆನ್ಸ್ ಮೂಲಕ ಮಗುವನ್ನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಗ್ಯವಾಗಿದೆ. ಮಕ್ಕಳ ತಜ್ಞೆ ಡಾ.ಶೀರಿಷ ಅವರಿಂದ ಮಗುವಿನ ಆರೋಗ್ಯ ತಪಾಸಣೆ ಮಾಡಲಾಗಿದೆ. ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Mon, 8 July 24