AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೊಬ್ಬಳ ಜೊತೆ ಸಂಬಂಧ, ಸ್ನೇಹಿತರಿಗೆ ಮದ್ಯ ಸರ್ವ್​ ಮಾಡುವಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿ ವಿರುದ್ಧ ದೂರು

ಸ್ನೇಹಿತರಿಗೆ ಮದ್ಯ ಸರ್ವ್ ಮಾಡದಿದ್ದಕ್ಕೆ ಮತ್ತು ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಹಿಳಾ ಸಿಬ್ಬಂದಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿ ಹರಷೋತ್ತಮ್​ ಪತ್ನಿ ಶಿಲ್ಪಾ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಚಿಕ್ಕಬಿದರಕಲ್ಲಿಯಲ್ಲಿ ನಡೆದಿದೆ.

ಬೇರೊಬ್ಬಳ ಜೊತೆ ಸಂಬಂಧ, ಸ್ನೇಹಿತರಿಗೆ ಮದ್ಯ ಸರ್ವ್​ ಮಾಡುವಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪತಿ ವಿರುದ್ಧ ದೂರು
ಪತ್ನಿಯ ಮೇಲೆ ಪತಿಯ ಹಲ್ಲೆ
ಬಿ ಮೂರ್ತಿ, ನೆಲಮಂಗಲ
| Edited By: |

Updated on:Jul 07, 2024 | 11:51 AM

Share

ನೆಲಮಂಗಲ, ಜುಲೈ 07: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಮೇಲೆ ಪತಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಚಿಕ್ಕಬಿದರಕಲ್ಲಿನಲ್ಲಿ ನಡೆದಿದೆ. ಪತ್ನಿ ಶಿಲ್ಪ ಮೇಲೆ ಪತಿ ಹರಷೋತ್ತಮ್​​ ಹಲ್ಲೆ ಮಾಡಿದ್ದಾನೆ. ಶಿಲ್ಪ ಮತ್ತು ಹರಷೋತ್ತಮ್​ ಮದುವೆಯಾಗಿ 10 ವರ್ಷಗಳು ಕಳೆದಿವೆ. ದಂಪತಿಗೆ ಮುದ್ದಾದ 8 ವರ್ಷದ ಗಂಡು ಮಗುವಿದೆ. ಹರಷೋತ್ತಮ್​​ ಮಲ್ಲೇಶ್ವರಂನಲ್ಲಿರುವ ಪಿ.ಶ್ರೀನಿವಾಸ್ ಆ್ಯಂಡ್ ಕೋ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ದಂಪತಿ (Couple) ಮತ್ತಿಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಹರಷೋತ್ತಮ್​​ ಪ್ರತಿವಾರದ ಕೊನೆಯಲ್ಲಿ ತನ್ನ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಪಾರ್ಟಿ ಮಾಡುತ್ತಿದ್ದನು. ಮನೆಗೆ ಬಂದ ಆತನ ಸ್ನೇಹಿತರಿಗೆ ಸರ್ವ್ ಮಾಡುವಂತೆ ಪತ್ನಿ ಶಿಲ್ಪಾಗೆ ಹೇಳಿದ್ದಾನೆ. ಅಲ್ಲದೆ ಮದ್ಯ ಸೇವನೆ ಮಾಡುವಂತೆ ಬಲವಂತ ಮಾಡುತ್ತಿದ್ದಾನೆ. ಇದಕ್ಕೆ ಶಿಲ್ಪ ಒಪ್ಪದೇ ಇದ್ದಾಗ ಬಾಯಿಗೆ ಬಂದಂತೆ ಬೈದು ಜೀವ ಬೆದರಿಕೆ ಹಾಕುತ್ತಿದ್ದಾನೆ. ಅಲ್ಲದೆ, ಮಗನ ಕೈಯಿಂದ ವಿಸ್ಕಿ ಬಾಟಲ್, ಗ್ಲಾಸ್​ ತರಿಸಿಕೊಂಡು ಮದ್ಯ ಸೇವಿಸಿ, ಸ್ನೇಹಿತರ ಮುಂದೆಯೇ ಮಗನಿಗೆಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು.

ಹರಷೋತ್ತಮ್​ ಮದುವೆ ನಂತರ 9 ವರ್ಷಗಳ ಕಾಲ ಓದಿ ನಂತರ ಸಿಎ ತೇರ್ಗಡೆಯಾಗಿದ್ದಾನೆ. ಈ ವೇಳೆ ವಿದ್ಯಾಭ್ಯಾಸ ಮಾಡುವುದಾಗಿ ಹೇಳಿ ತಿಂಗಳುಗಟ್ಟಲೆ ಸ್ನೇಹಿತರ ಮನೆ, ಬೇರೆ ಬೇರೆ ಕಡೆ ವಾಸ ಮಾಡಿದ್ದಾನೆ. ಶಿಲ್ಪಾರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು, ಹೆಚ್ಚಿನ ವರದಕ್ಷಿಣೆ, ಸೈಟು ಮತ್ತು ಬಂಗಾರದ ಒಡವೆ ತರುವಂತೆ ಪದೇ ಪದೇ ಹಿಂಸೆ ನೀಡಿದ್ದಾನೆ.

ಹರಷೋತ್ತಮ ತಾನು ಕೆಲಸ ಮಾಡುವ ಕಂಪನಿಯ ಸಿಬ್ಬಂದಿ ರೀತು ಎಂಬ ಹುಡುಗಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾನೆ. ಹೀಗಾಗಿ ವಿಚ್ಚೇದನ ನೀಡುವಂತೆ ನಿರಂತರವಾಗಿ ಶಿಲ್ಪಾರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ. “ನೀನು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗು ನಾನು ನನ್ನ ಸ್ನೇಹಿತೆಯನ್ನು ಮದುವೆಯಾಗಿ ಚೆನ್ನಾಗಿರುತ್ತೇನೆ” ಎಂದು ಶಿಲ್ಪಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯ ಹಾಗೂ ಪ್ರಚೋದನೆ ನೀಡಿದ್ದಾನೆ.

ಇದರಿಂದ ಮಾನಸಿಕವಾಗಿ ನೊಂದ ಶಿಲ್ಪಾ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ತಾಯಿ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರು.

ಇದನ್ನೂ ಓದಿ: ಮರ್ಯಾದಾ ಹತ್ಯೆ; ಅಂತರ್ಜಾತಿ ವಿವಾಹವಾದ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಂದೆ

ಹರಷೋತ್ತಮ್​ ಮದುವೆಯಾದ ಕೆಲವು ದಿನಗಳಲ್ಲಿಯೇ ಬೇರೆ ಬೇರೆ ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಲೈವ್ ಬ್ಯಾಂಡ್, ಪಬ್ ಇತ್ಯಾದಿ ಸ್ಥಳಗಳಲ್ಲಿ ಪಾರ್ಟಿ ಮಾಡುವುದು ಹುಕ್ಕಾ ಸೇವನೆ ಮಾಡುವುದು ಮತ್ತು ಮಜಾ ಮಾಡುವುದು ಮಾಡುತ್ತಾ ಮನೆಗೆ ಸರಿಯಾಗಿ ಬರಲಿಲ್ಲ. ಪ್ರಶ್ನಿಸಿದಕ್ಕೆ ಶಿಲ್ಪಾ ಮತ್ತು ಅವರ ತಾಯಿನ್ನು ಅವಾಚ್ಯ ಶಬ್ದಗಳಿಂದ ಬೈದು, ಪದೇ ಪದೇ ವಿಚ್ಛೇದನ ನೀಡುವಂತೆ ಒತ್ತಾಯ ಮಾಡುತ್ತಿದ್ದಾನೆ. ಇದಕ್ಕೆ ಶಿಲ್ಪಾ ವಿರೋಧಿಸಿದಾಗ “ಮನೆಯಲ್ಲಿ ಕೆಲಸದವಳ ತರ ಬಿದ್ದಿರು ನಿನಗೆ ನಿನ್ನ ಮಗನಿಗೆ ಊಟ ಹಾಕುತ್ತೇನೆ. ನನ್ನನ್ನು ಪ್ರಶ್ನಿಸಿದರೆ ನಿನ್ನನ್ನು ಕೊಲೆ ಮಾಡಿ ಆನಂತರ ರೀತುನನ್ನು ಮದುವೆಯಾಗುತ್ತೇನೆ” ಎಂದು ಹೇಳಿ ಹರಷೋತ್ತಮ್​ ಹಲ್ಲೆ ಮಾಡಿದ್ದಾನೆ.

ಶಿಲ್ಪಾ ಹರಷೋತ್ತಮ್​ನಿಂದ ದೂರವಿದ್ದು, ತವರು ಮನೆಯಲ್ಲಿ ವಾಸವಾಗಿದ್ದಾರೆ. ಶನಿವಾರ (ಜು.06) ರಂದು ಮಗನನ್ನು ನೋಡಲು ಗಂಡನ ಮನೆಗೆ ಹೋದಾಗ, ಆತ ಬೇರೊಂದು ಮಹಿಳೆಯೊಂದಿಗೆ ಇರುವುದನ್ನು ನೋಡಿದ್ದಾರೆ. ಇದರಿಂದ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಬಳಿಕ ಹರಷೋತ್ತಮ್​ ಪತ್ನಿಯನ್ನು ಆಚೆ ತಳ್ಳುತ್ತಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹರಷೋತ್ತಮ್​ ನಡವಳಿಗಳಿಗೆ ಅವರ ತಂದೆ ಚಿನ್ನೆಗೌಡ, ತಾಯಿ ಪುಟ್ಟತಾಯಮ್ಮ ಹಾಗೂ ಚಿಕ್ಕಮ್ಮ ಸುಮತಿ, ತಂಗಿ ಶೃತಿ ಕಾರಣ. ತಂಗಿ ಶೃತಿ ಹಾಗೂ ರೀತು ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು. ಎಂದು ಶಿಲ್ಪ ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೌರಿ ಕೇಸ್​​

ಹರಷೋತ್ತಮ್​ ಮತ್ತು ಆತನ ಕುಟುಂಬದವರು ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ ಮೇರೆಗೆ ಶಿಲ್ಪ ತಾಯಿ 4 ಲಕ್ಷ ರೂ ನಗದು, 50 ಗ್ರಾಂನ ಒಂದು ಬ್ರಾಸ್ ಲೈಟ್, 35 ಗ್ರಾಂನ ಕುತ್ತಿಗೆ ಸರ, ತಲಾ 10 ಗ್ರಾಂನ ಎರಡು ಉಂಗುರಗಳು ಹಾಗೂ ಶಿಲ್ಪಾರಿಗೆ 60 ಗ್ರಾಂ ಲಾಂಗ್ ಚೈನ್, 30 ಗ್ರಾಂ ಒಂದು ಜೊತೆ ಓಲೆ, 200 ಗ್ರಾಂ ಬೆಳ್ಳಿಯ ಸಾಮಾನುಗಳನ್ನು ನೀಡಿದ್ದಾರೆ. ಹರಷೋತ್ತಮ್​ ವಿರುದ್ಧ ಡೌರಿ ಕೇಸ್​ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:11 am, Sun, 7 July 24