ವೃದ್ಧೆ ಹತ್ಯೆ: ಆಭರಣ ದರೋಡೆ, ಬೆಳಗೆದ್ದಾಗ ಭೀಕರ ದೃಶ್ಯ

ಮಂಡ್ಯ: ಮನೆಗೆ ನುಗ್ಗಿ ವೃದ್ಧೆ ಹತ್ಯೆ ಮಾಡಿ ಆಭರಣ ದರೋಡೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಕರಿಕ್ಯಾತನಹಳ್ಳಿಯಲ್ಲಿ ನಡೆದಿದೆ. ಜಯಮ್ಮ(70) ಕೊಲೆಯಾದ ವೃದ್ಧೆ. ತಡರಾತ್ರಿ ಮನೆಯ ಬಾಗಿಲು ಹೊಡೆದು ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ವೃದ್ಧೆ ಜಯಮ್ಮಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ವೃದ್ಧೆ ಮೈಮೇಲಿದ್ದ ಮಾಂಗಲ್ಯ ಸರ, ಓಲೆ, ಉಂಗುರ, ಮಾಟಿ ಸೇರಿದಂತೆ ಸುಮಾರು 75 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಎಚ್ಚರವಾದಾಗ ಮನೆಯವರಿಗೆ ನಂಬಲಾಗದ ದೃಶ್ಯ ಕಂಡು ಬಂದಿದೆ. ನಾಗಮಂಗಲ ಗ್ರಾಮಾಂತರ […]

ವೃದ್ಧೆ ಹತ್ಯೆ: ಆಭರಣ ದರೋಡೆ, ಬೆಳಗೆದ್ದಾಗ ಭೀಕರ ದೃಶ್ಯ

Updated on: Jun 23, 2020 | 10:19 AM

ಮಂಡ್ಯ: ಮನೆಗೆ ನುಗ್ಗಿ ವೃದ್ಧೆ ಹತ್ಯೆ ಮಾಡಿ ಆಭರಣ ದರೋಡೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಕರಿಕ್ಯಾತನಹಳ್ಳಿಯಲ್ಲಿ ನಡೆದಿದೆ. ಜಯಮ್ಮ(70) ಕೊಲೆಯಾದ ವೃದ್ಧೆ. ತಡರಾತ್ರಿ ಮನೆಯ ಬಾಗಿಲು ಹೊಡೆದು ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ.

ವೃದ್ಧೆ ಜಯಮ್ಮಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ವೃದ್ಧೆ ಮೈಮೇಲಿದ್ದ ಮಾಂಗಲ್ಯ ಸರ, ಓಲೆ, ಉಂಗುರ, ಮಾಟಿ ಸೇರಿದಂತೆ ಸುಮಾರು 75 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಎಚ್ಚರವಾದಾಗ ಮನೆಯವರಿಗೆ ನಂಬಲಾಗದ ದೃಶ್ಯ ಕಂಡು ಬಂದಿದೆ. ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 9:41 am, Tue, 23 June 20