AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ. ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ […]

ಪುಂಡರ ಅಟ್ಟಹಾಸ: ಸೀದಾ ಜೇಬಿಗೆ ಕೈಹಾಕಿ ದರೋಡೆ! ಜನರಿದ್ರೂ ಡೋಂಟ್​ ಕೇರ್​, ಎಲ್ಲಿ?
KUSHAL V
| Edited By: ಸಾಧು ಶ್ರೀನಾಥ್​|

Updated on: Jun 22, 2020 | 5:12 PM

Share

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಸಿಲಿಕಾನ್ ಸಿಟಿಯ ಕೆಲವು ಪೊಲೀಸರಿಗೂ ಸೋಂಕು ತಗಲುತ್ತಿದ್ದು ನಗರದ ಹಲವು ಠಾಣೆಗಳು ಸಹ ಸೀಲ್​ಡೌನ್​ ಆಗುತ್ತಿವೆ. ಹಾಗಾಗಿ ನಮ್ಮ ಖಾಕಿ ಪಡೆ ಈ ಮಹಾಮಾರಿಯಿಂದ ಕೊಂಚ ನಲುಗಿ ಹೋಗಿದ್ದಾರೆ.

ಇದರಿಂದ ನಗರದ ಪುಂಡರು ಮತ್ತು ಕಳ್ಳಕಾಕರಿಗೆ ಎಂದಿಲ್ಲದ ಧೈರ್ಯ ಬಂದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಕೆಲವು ದಿನಗಳಿಂದ ಹೆಣ್ಣೂರು ಹಾಗೂ ಹೆಬ್ಬಾಳದ ಸುತ್ತಮುತ್ತಲಿನ ಏರಿಯಾಗಳಲ್ಲಿ ಪುಂಡರ ಗ್ಯಾಂಗ್​ ಒಂದು ಜನರನ್ನು ಬೆದರಿಸಿ ಹಣ ಕಿತ್ತುಕೊಳ್ಳೋಕೆ ಶುರುಮಾಡಿದ್ದಾರೆ.

ಸೀದಾ ಜೇಬಿಗೆ ಕೈಹಾಕಿ ದರೋಡೆ..! ಕೊರೊನಾ ಮಹಾಮಾರಿಗೆ ನಲುಗಿ ಜನರನ್ನೇ ಮುಟ್ಟಲು ಬೆಂಗಳೂರಿಗರು ಹಿಂದೆಮುಂದೆ ಯೋಚಿಸುತ್ತಿರುವ ಈ ಸಂದರ್ಭದಲ್ಲಿ ಸೀದಾ ಜೇಬಿಗೇ ಕೈಹಾಕಿ ಹಣ ದೋಚುತ್ತಿದ್ದಾರಂತೆ. ಹಣ ತಗೊಳ್ಳಲು ಬಿಟ್ರೆ ಬಚಾವ್​. ಇಲ್ಲಾಂದ್ರೆ ಚಾಕು, ಮಚ್ಚು ತೋರಿಸಿ ಕಿತ್ತುಕೊಳ್ತಾರೆ. ಜಾಸ್ತಿ ಮಾತಾಡ್ರೆ ಎರಡೇಟು ಕೂಡ ಬೀಳುತ್ತೆ.

ಅಂದ ಹಾಗೆ ಇವರೇನು ದೊಡ್ಡ ಪಂಟರ್​ಗಳಲ್ಲ. ಸಣ್ಣ ವಯಸ್ಸಿನ ಹುಡುಗರು. ಸ್ಕೂಟರ್​, ಬೈಕ್​ಗಳ ಮೇಲೆ ಗುಂಪುಗುಂಪಾಗಿ ಪೆಟ್ಟಿ, ಸಿಗರೇಟ್​ ಅಂಗಡಿಗಳ ಬಳಿ ಅಡ್ಡಾಡೋ ಈ ಗ್ಯಾಂಗ್​ ಎಲ್ಲಿ ಟಾರ್ಗೆಟ್​ ಕಂಡರೇ ಅಲ್ಲೇ ಸ್ಕೆಚ್​. ಸುತ್ತಲೂ ಜನರಿದ್ರೂ ಡೋಂಟ್​ ಕೇರ್​. ಬರೀ ಗ್ರಾಹಕರಲ್ಲದೆ ಅಂಗಡಿ ಮಾಲೀಕರನ್ನು ದೋಚುತ್ತಿದ್ದಾರೆ.

ಈ ಏರಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದ ಇಂಥ ಹತ್ತಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇನ್ನಾದರೂ ಪೊಲೀಸರು ಈ ಪುಂಡರ ಗ್ಯಾಂಗ್​ನ ಹೆಡೆಮುರಿ ಕಟ್ಟಬೇಕು ಎಂಬುದು ಸ್ಥಳೀಯರ ಮನವಿ.

Follow Us
KUSHAL V
KUSHAL V
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?