
ಬೆಂಗಳೂರು: 2 ವರ್ಷದ ಮಗುವಿನ ಜೊತೆ ಮಹಿಳೆಯನ್ನು ಹೊರಹಾಕಿ ಪತಿ ವರದಕ್ಷಿಣೆ ಕಿರುಕುಳ ನೀಡಿರುವ ಅಮಾನವೀಯ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಪತಿಯ ಕುಟುಂಬಸ್ಥರ ವಿರುದ್ಧ ಪತ್ನಿ ವಾದಿಕಾ ಜತ್ಲಾ ದೂರು ನೀಡಿದ್ದಾರೆ.
ಇವರಿಗೆ 2 ವರ್ಷದ ಮಗುವಿದೆ. ಆದರೆ ವಾದಿಕಾ ಜತ್ಲಾಗೆ ಪತಿ ಹಾಗೂ ಅವನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಪತಿ ಹರಿಪ್ರಸಾದ್ ಪತ್ನಿಯನ್ನು ಅನುಮಾನಿಸುತ್ತಿದ್ದ. 3 ತಿಂಗಳ ಹಿಂದೆ ಪತ್ನಿ ಮತ್ತು ಮಗುವನ್ನು ಬಿಟ್ಟುಹೋಗಿದ್ದ. ಆದರೆ ಈಗ ತಾಯಿ, ಮಗುವಿಗೆ ಆಹಾರ ನೀಡದೆ ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆ. ಕೊರೆಯುವ ಚಳಿಯಲ್ಲಿ ಮನೆ ಹೊರಭಾಗದ ಕಾರಿಡಾರ್ ನಲ್ಲೆ ಮಗು ಸಮೇತ ಟೆಕ್ಕಿ ಪತ್ನಿ ರಾತ್ರಿ ಕಳೆದಿದ್ದಾರೆ. ಮಾವ ಸುದರ್ಶನ್ ತೋಟಾ, ಅತ್ತೆ ಸುಗುತಾದೇವಿ ಸೇರಿದಂತೆ ನಾಲ್ವರ ವಿರುದ್ಧ ವಾದಿಕಾ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ
Published On - 7:01 am, Sun, 11 October 20