ಹೈದರಾಬಾದ್: ಮಹಿಳೆಯೊಬ್ಬರು ಗಂಡನ ಜೊತೆ ಜಗಳವಾಡಿದ ನಂತರ ಆ ಜಗಳ ವಿಕೋಪಕ್ಕೆ ಹೋಗಿದ್ದು, ಕೋಪದಿಂದ ಹೆಂಡತಿ ತನ್ನ ಗಂಡನನ್ನು ಕೊಲೆ ಮಾಡಿರುವ ಪತಿಯನ್ನು ಕೊಂದಿರುವ ಆಘಾತಕಾರಿ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ರಾತ್ರಿ ಕಾಮರೆಡ್ಡಿ ಜಿಲ್ಲೆಯ ಅಜ್ಜಂಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಹೆಂಡತಿಯಿಂದ ಹತ್ಯೆಗೀಡಾದ ವ್ಯಕ್ತಿಯನ್ನು 35 ವರ್ಷದ ಶೇಖ್ ಅಫ್ರೋಜ್ ಎಂದು ಗುರುತಿಸಲಾಗಿದೆ. ಅವರು ಸಣ್ಣ ವ್ಯಾಪಾರ ಮಾಡುತ್ತಿದ್ದರು. ಗಂಡನೊಂದಿಗೆ ಜಗಳವಾಡಿದ ಆರೋಪಿ ಫರ್ಜಾನಾ ಬೇಗಂ ಬಟ್ಟೆಯಿಂದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಕೊಲೆಗೆ ಸಂಬಂಧಿಸಿದಂತೆ ಶೇಖ್ ಅವರ ಸಹೋದರ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಫರ್ಜಾನಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ದಂಪತಿ ನಡುವೆ ಬಹಳ ದಿನಗಳಿಂದ ಭಿನ್ನಾಭಿಪ್ರಾಯವಿತ್ತು ಎಂದು ಶೇಖ್ ಅವರ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದೇ ಕಾರಣಕ್ಕೆ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಶೇಖ್ ಕುಡಿದು ಮನೆಗೆ ಬರುವುದನ್ನು ಫರ್ಜಾನಾ ಯಾವಾಗಲೂ ವಿರೋಧಿಸುತ್ತಿದ್ದಳು ಎನ್ನಲಾಗಿದೆ. ಫರ್ಜಾನಾಳಿಗೆ ಶೇಖ್ ಎರಡನೇ ಪತಿಯಾಗಿದ್ದು, ಇವರಿಬ್ಬರಿಗೂ ಒಂದು ಮಗುವಿದೆ.
ಇದನ್ನೂ ಓದಿ: Crime News: ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟ ಗಂಡ; ನಾಪತ್ತೆಯಾದ ಪತಿಗಾಗಿ ಪೊಲೀಸರ ಶೋಧಕಾರ್ಯ
Murder: ತವರು ಮನೆಗೆ ಹೋಗುತ್ತೇನೆಂದು ಹಠ ಮಾಡಿದ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ!