
ಬೆಂಗಳೂರು: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರದ ಆರ್ಮುಗಂ ದೇವಾಲಯ ಸಮೀಪ ನಡೆದಿದೆ. ವಿಜಯ ಕುಮಾರ್(30) ಕೊಲೆಯಾದವ.
ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದಲ್ಲಿ ವಿಜಯ ಕುಮಾರ್ ಸಕ್ರಿಯ ಸದಸ್ಯನಾಗಿದ್ದ. ತಡರಾತ್ರಿ ದುಷ್ಕರ್ಮಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 1:34 pm, Sun, 17 May 20