ಭಾವನ ಮನೆಯಲ್ಲೇ ಕಳ್ಳತನ ಮಾಡಿದ್ದ, ಮಾಲು‌ ಮಾರಲಾಗದೆ ಪರದಾಡ್ತಿದ್ದ ಚೋರ ಸಿಕ್ಕಿಬಿದ್ದ!

ಸಾಧು ಶ್ರೀನಾಥ್​

|

Updated on:May 18, 2020 | 12:53 PM

ಬೆಂಗಳೂರು: ಕೊರೊನಾ ಲಾಕ್​ಡೌನ್​ ಅನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಭಾವನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರರು ಆರೋಪಿ ಸೈಯ್ಯದ್ ಮಸೂದ್​ನನ್ನು ಬಂಧಿಸಿದ್ದಾರೆ. ಆರೋಪಿ ಸೈಯ್ಯದ್, ಅಬ್ದುಲ್ ರಶೀದ್ ಮೇಖ್ರಿ ಪತ್ನಿಯ ಸಹೋದರನಾಗಿದ್ದಾನೆ. ಹಿಂದೆ ಅಬ್ದುಲ್ ರಶೀದ್ ಮನೆಯಲ್ಲಿ‌ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಸೈಯದ್ ಮಸೂದ್ ಕೆಲಸ ಬಿಟ್ಟಿದ್ದ. ಲಾಕ್​ಡೌನ್‌ ವೇಳೆ ಬೆನ್ಸನ್ ಟೌನಿನಲ್ಲಿದ್ದ ಮಗಳ ಮನೆಗೆ ಅಬ್ದುಲ್ ರಶೀದ್ ಹೋಗಿದ್ದ. ಆಗ ಅಬ್ದುಲ್ ಮಗಳ ಮನೆಯಲ್ಲಿ‌ […]

ಭಾವನ ಮನೆಯಲ್ಲೇ ಕಳ್ಳತನ ಮಾಡಿದ್ದ, ಮಾಲು‌ ಮಾರಲಾಗದೆ ಪರದಾಡ್ತಿದ್ದ ಚೋರ ಸಿಕ್ಕಿಬಿದ್ದ!

ಬೆಂಗಳೂರು: ಕೊರೊನಾ ಲಾಕ್​ಡೌನ್​ ಅನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಭಾವನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರರು ಆರೋಪಿ ಸೈಯ್ಯದ್ ಮಸೂದ್​ನನ್ನು ಬಂಧಿಸಿದ್ದಾರೆ.

ಆರೋಪಿ ಸೈಯ್ಯದ್, ಅಬ್ದುಲ್ ರಶೀದ್ ಮೇಖ್ರಿ ಪತ್ನಿಯ ಸಹೋದರನಾಗಿದ್ದಾನೆ. ಹಿಂದೆ ಅಬ್ದುಲ್ ರಶೀದ್ ಮನೆಯಲ್ಲಿ‌ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಸೈಯದ್ ಮಸೂದ್ ಕೆಲಸ ಬಿಟ್ಟಿದ್ದ. ಲಾಕ್​ಡೌನ್‌ ವೇಳೆ ಬೆನ್ಸನ್ ಟೌನಿನಲ್ಲಿದ್ದ ಮಗಳ ಮನೆಗೆ ಅಬ್ದುಲ್ ರಶೀದ್ ಹೋಗಿದ್ದ. ಆಗ ಅಬ್ದುಲ್ ಮಗಳ ಮನೆಯಲ್ಲಿ‌ ಸೈಯದ್ ಮಸೂದ್ ಸಹೋದರಿ ಮನೆಗೆಲಸ ಮಾಡುತ್ತಿದ್ದರು.

ಕದ್ದ ಮಾಲು‌ ಮಾರಲಾಗದೆ ಪರದಾಡುತ್ತಿದ್ದ: ರಶೀದ್ ಮನೆಯಲ್ಲಿ‌ ಹಣ, ಒಡವೆಗಳಿರುವ ವಿಚಾರವನ್ನ ಸಹೋದರನ ಮುಂದೆ ಹೇಳಿದ್ದಳು. ಈ ಹಿಂದೆ ಕೆಲಸ ಮಾಡಿದ್ದ ಮನೆಯಾದ್ದರಿಂದ ಸಲೀಸಾಗಿ ಬೀಗ ಒಡೆದು ಮಸೂದ್ ಕಳ್ಳತನ ಮಾಡಿದ್ದ. ಲಾಕ್​ಡೌನ್ ಸಂದರ್ಭದಲ್ಲಿ ಕದ್ದ ಮಾಲು‌ ಮಾರಲಾಗದೆ ಪರದಾಡುತ್ತಿದ್ದ. ಕಳ್ಳತನ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಮಾಲೀಕನ ಭಾವನೇ ಕಳ್ಳ ಎಂಬುದು ಪತ್ತೆಯಾಗಿದೆ. ಪರಸ್ಪರ ರಾಜಿಯಾಗಲು ಆರೋಪಿ ಹಾಗೂ ಮನೆ ಮಾಲೀಕ ಮುಂದಾಗಿದ್ದರು. ಅಷ್ಟರಲ್ಲಿ‌ ಆರೋಪಿ ಮಸೂದ್​ನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ನಗದು, 171 ಗ್ರಾಂ ಚಿನ್ನ, ಮೈಕ್ರೋ ಓವೆನ್, ಸೀರೆಗಳು, ಆಸ್ತಿ ಪತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada