ಮುಜಾಫರ್ನಗರ: ಬಿಹಾರದ ಕಾಲೇಜು ಕ್ಯಾಂಪಸ್‌ನಲ್ಲಿ ಮೂವರು ಪುಂಡರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಆ ಯುವಕನನ್ನು ಕೋಲು ಮತ್ತು ಬೆಲ್ಟ್‌ನಿಂದ ಥಳಿಸಿದ್ದಾರೆ. ಅವನ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಯುವಂತೆ ಮಾಡಿದ್ದಾರೆ. ಮುಜಾಫರ್‌ಪುರದ ಎಂಎಸ್‌ಕೆಬಿ ಕಾಲೇಜಿನಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಈ ವಿಡಿಯೋ ವೈರಲ್ ಆದ ನಂತರ ಆ ಬಾಲಕನ ಕುಟುಂಬದ ಸದಸ್ಯರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಾಲಕನನ್ನು ಹೊಡೆಯುವ ಮೊದಲು ನೆಲದ ಮೇಲೆ ಉಗುಳಿದ ಎಂಜಲು ನೆಕ್ಕುವಂತೆ ಬಲವಂತಪಡಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ನಂತರ ಹಲ್ಲೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಈ ವಿಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ನಗರದ ಬನಾರಸ್ ಬ್ಯಾಂಕ್ ಚೌಕ್ ಪ್ರದೇಶದ ಮೂವರು ಶಂಕಿತರು ಮತ್ತು ಐವರು ಅಪರಿಚಿತ ಹುಡುಗರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Viral : ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಬೇಟೆಯಾಡಿದ ಹುಲಿರಾಯ, ವಿಡಿಯೋ ವೈರಲ್
ಕುಟುಂಬದವರ ಹೇಳಿಕೆ ಆಧರಿಸಿ ಪೊಲೀಸರು ಎಂಟು ಬಾಲಕರನ್ನು ಆರೋಪಿಗಳೆಂದು ಹೆಸರಿಸಿದ್ದು, ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 16ರಂದು ತನ್ನ ಮಗ ಮನೆಗೆಲಸದ ನಿಮಿತ್ತ ಎಂಎಸ್‌ಕೆಬಿ ಕಾಲೇಜು ಬಳಿ ಹೋಗಿದ್ದ ಎಂದು ಸಂತ್ರಸ್ತೆಯ ತಾಯಿ ಫರ್ಜಾನಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಸಮಯದಲ್ಲಿ ತನ್ನ ಮಗನಿಗೆ ಬಸ್ಕಿ ಹೊಡೆಸಲು ಒತ್ತಾಯಿಸಲಾಯಿತು. ನಂತರ ನೆಲದ ಮೇಲೆ ಉಗುಳಿದ್ದನ್ನು ನೆಕ್ಕಲು ಒತ್ತಾಯಿಸಲಾಯಿತು ಎಂದು ತಾಯಿ ಆರೋಪಿಸಿದ್ದಾರೆ.
मुजफ्फरपुर के एक कॉलेज परिसर में बदमाशों के एक गुट ने एक लड़के की बेरहमी पिटाई कर दी, लात, बेल्ट और डंडे से पीटने के बाद फिर उससे उठक बैठक भी कराया. जिसका एक वीडियो सोशल मीडिया पर बड़ी तेजी से अब वायरल हो रहा है…@bihar_police @MuzaffarpurPol3 #fight #collegestudents #Bihar pic.twitter.com/c3sudfWeTu
— News4Nation (@news4nations) December 21, 2024
ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಮಗನಿಗೆ 2 ಸಾವಿರ ರೂ. ನೀಡಿದ್ದು, ಹಲ್ಲೆ ವೇಳೆ ಕದ್ದೊಯ್ದಿರುವುದಾಗಿ ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆ ಪ್ರಭಾರಿ ಶರತ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sun, 22 December 24