ನೆಲಮಂಗಲ: ಬಾಬು ಚಿಟ್ ಫಂಡ್ ಹೆಸರಿನಲ್ಲಿ ವಂಚಿಸಿದ್ದ 3 ಜನ ಸಹೋದರರನ್ನು ಬಂಧಿಸಲಾಗಿದೆ. ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾಧಕವಸ್ತುಗಳು(CEN) ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ವೆಂಕಟೇಶ್ ಬಾಬು, ಲೋಕೇಶ್ ಬಾಬು, ನಟರಾಜ್ ಬಾಬು ಸಹೋದರರು, ಸರ್ಕಾರಿ ನೌಕರರನ್ನು, ನಿವೃತ್ತ ನೌಕರರನ್ನು ಹಾಗೂ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಚಿಟ್ ಫಂಡ್ ಉದ್ಯಮಕ್ಕೆ ಕೈಹಾಕಿದ್ದರು. 500 ಜನರಿಂದ ಚಿಟ್ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದರು..
ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ಮನೆಯಲ್ಲಿ ಕಛೇರಿ ತೆರದು ವಂಚನೆ ಮಾಡಿದ್ದರು. ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರ್ನೆಟ್ ಡೆಪೊಸಿಟ್ ಎಕ್ಸೊರ್ಬಿಟೆಂಟ್ ಆಕ್ಟ್ ಅಡಿಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಮಾದನಾಯಕನಹಳ್ಳಿ ಪೊಲೀಸರು ಕೇಸ್ಅನ್ನು ಬೆಂಗಳೂರಿನ CEN ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಅದರಂತೆ ಮೂರು ಜನ ಸಹೋದರರನ್ನು CEN ಪೊಲೀಸರು ಬಂಧಿಸಿದ್ದಾರೆ…..
ಇದನ್ನೂ ಓದಿ: Bank online fraud: ಆನ್ಲೈನ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಜವಾಬ್ದಾರಿ ಏನು?
ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನಾಭರಣ ವಾಪಸ್ ನೀಡದೆ ವಂಚನೆ; ಫೈನಾನ್ಸ್ ಮಾಲೀಕ ಅರೆಸ್ಟ್
Published On - 4:12 pm, Sun, 21 March 21